ತುಮಕೂರು: ನಗರದ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ ರಾಜ್ಯಮಟ್ಟದ ಮಾಧ್ಯಮ ಹಬ್ಬ ಸಂಭ್ರಮ-2026 ಕಾರ್ಯಕ್ರಮವನ್ನು ಏ.23 ಮತ್ತು 24ರಂದು ಹಮ್ಮಿಕೊಂಡಿದ್ದು, ಇದಕ್ಕೆ ರಾಜ್ಯದ ಪದವಿ ವಿದ್ಯಾರ್ಥಿಗಳು ನೋಂದಾಯಿಸಿಕೊಳ್ಳಬಹುದು.
ರಾಜ್ಯದ ವಿವಿಧ ಜಿಲ್ಲೆಗಳ ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದು, ಅವರಲ್ಲಿನ ಕೌಶಲಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಒಂದು ಉತ್ತಮ ಕಾರ್ಯಕ್ರಮವಾಗಿದೆ. ಎರಡು ದಿನದ ಈ ಕಾರ್ಯಕ್ರಮದಲ್ಲಿಒಟ್ಟು ಎಂಟು ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಮಾಧ್ಯಮ ಮತ್ತು ಪ್ರಚಲಿತ ವಿಷಯಗಳ ಕುರಿತು ರೇಡಿಯೋ ಜಾಕಿ, ಪಿಟಿಸಿ, ಫೋಟೋಗ್ರಫಿ, ವೈರಲ್ ಅಡ್ಡ (ರೀಲ್ಸ್ ), ವರದಿಗಾರಿಕೆ, ಟೆಲಿವಿಷನ್ ಸುದ್ದಿ ವಾಚನ (ನ್ಯೂಸ್ ರೀಡಿಂಗ್ ), ಕೊಲೇಜ್ ಮೇಕಿಂಗ್ , ಮ್ಯಾಡ್ ಆಡ್ಸ್ ಸ್ಪರ್ಧೆಗಳು ನಡೆಯಲಿದ್ದು. ಯಾವುದೇ ಪದವಿ ಕಾಲೇಜಿನಲ್ಲಿವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಈ ಸ್ಪರ್ಧೆಗಳಲ್ಲಿಭಾಗವಹಿಸಬಹುದು.
ಸ್ಪರ್ಧೆಯಲ್ಲಿಭಾಗವಹಿಸುವ ವಿದ್ಯಾರ್ಥಿಗಳು ಆನ್ ಲೈನ್ ಅಥವಾ ಸ್ಥಳದಲ್ಲಿಯೇ ನೋಂದಣಿ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. ನೋಂದಣಿ ಮಾಡಿಕೊಳ್ಳುವವರು ಕಾಲೇಜಿನ ಪ್ರಾಂಶುಪಾಲರ ಬಳಿ ಅನುಮತಿ ಪತ್ರ ಮತ್ತು ವಿದ್ಯಾರ್ಥಿಗಳ ಕಾಲೇಜಿನ ಗುರುತಿನ ಪತ್ರ ತರಬೇಕು. ನೋಂದಣಿಗಾಗಿ ಪ್ರತಿಭಾ - 9110659511, ತೇಜ- 7760019257 ಅವರನ್ನು ಸಂಪರ್ಕಿಸಬಹುದಾಗಿದೆ.

