ಗೋಕರ್ಣ ಅಂಬೇಡ್ಕರ್ ಜಯಂತಿ

Contributed bygajunayakgokarna@gmail.com|Vijaya Karnataka

ಗೋಕರ್ಣ ಪಟ್ಟಣದಲ್ಲಿ ಮಂಗಳವಾರ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಜಯಂತಿಯನ್ನು ಸಡಗರದಿಂದ ಆಚರಿಸಲಾಯಿತು. ವಿವಿಧ ಶಾಲೆ, ಕಾಲೇಜು, ಕಚೇರಿಗಳಲ್ಲಿ ಡಾ. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಅವರ ಸಮಾನತೆಯ ಸಂದೇಶವನ್ನು ಸ್ಮರಿಸಲಾಯಿತು. ದೇಶಕ್ಕೆ ಅವರು ನೀಡಿದ ಕೊಡುಗೆಯನ್ನು ನೆನಪಿಸಿಕೊಳ್ಳಲಾಯಿತು. ಈ ಕಾರ್ಯಕ್ರಮಗಳು ಜನರಲ್ಲಿ ಸ್ಫೂರ್ತಿ ತುಂಬಿದವು.

dr ambedkar jayanti events in gokarna

ವಿಕ ಸುದ್ದಿಲೋಕ ಗೋಕರ್ಣ

ಪಟ್ಟಣದ ವಿವಿಧೆಡೆ ಮಂಗಳವಾರ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನಡೆದ ಕಾರ್ಯಕ್ರಮದಲ್ಲಿ ಡಾ. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಸಮಾನತೆಯ ಮೂಲಕ ಸಮಾಜದ

ಸುಧಾರಣೆಯ ಕುರಿತು ಮಾಡಿದ ಕಾರ್ಯವನ್ನ ಸ್ಮರಿಸಲಾಯಿತು. ಈ ವೇಳೆ ಆಡಳಿತ ವೈದ್ಯಾಧಿಕಾರಿ ಡಾ.ಜಗದೀಶ ನಾಯ್ಕ, ಡಾ.ಚಿನುವಾಸನ್ , ಆಸ್ಪತ್ರೆಯ ಸಿಬ್ಬಂದಿ ಇದ್ದರು.

ಆಡುಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಕಾರ್ಯಕ್ರಮದಲ್ಲಿಬಾಬಾ ಸಾಹೇಬ ಅಂಬೇಡ್ಕರ್ ಅವರ ಜೀವನ ಚರಿತ್ರೆ, ಅವರಿಂದ ದೇಶಕ್ಕೆ ನೀಡಿದ ಕೊಡುಗೆ ವಿವರಿಸಲಾಯಿತು.

ಭದ್ರಕಾಳಿ ಸಂಯಕ್ತ ಪದವಿಪೂರ್ವ ಕಾಲೇಜು ಹಾಗೂ ಪೌಢಶಾಲಾ ವಿಭಾಗದಲ್ಲಿನಡೆದ ಕಾರ್ಯಕ್ರಮದಲ್ಲಿಕೆನರಾ ಶಿಕ್ಷಣ ಪ್ರಸಾರಕ ಮಂಡಳದ ಕಾರ್ಯದರ್ಶಿ ಜಿ.ಎನ್ . ನಾಯಕ ಮಾತನಾಡಿ ‘‘ಡಾ.ಬಿ.ಆರ್ .ಅಂಬೇಡ್ಕರ್ ಅವರು ದೇಶದ ಪ್ರತಿಯೊಬ್ಬ ಪ್ರಜೆಗೂ ಪ್ರಜಾಪ್ರಭುತ್ವದಡಿ ಯಾವುದೇ ತಾರತಮ್ಯವಿಲ್ಲದೆ ಬದಕುವ ಸ್ವಾತಂತ್ರತ್ರ್ಯವನ್ನ ಕೊಟ್ಟು ಜಗತ್ತಿಗೆ ಮಾದರಿಯಾಗಿದ್ದಾರೆ’’ ಎಂದರು.

ಈ ವೇಳೆ ಪ್ರಾಚಾರ್ಯ ಎಸ್ .ಸಿ. ನಾಯ್ಕ, ಪೌಢಶಾಲೆ ಮುಖ್ಯಾಧ್ಯಾಪಕ ಸಿ.ಜಿ.ನಾಯಕದೊರೆ, ಸತ್ಯನಾರಾಯಣ ಎನ್ .ಎಂ., ರಾಜಶೇಖರ ಬಾಗೇವಾಡಿ,ಅಶ್ವಿನಿ ಚಿತ್ತಾಲ, ಸಹಜಾ ವಿ.ಸಿ., ಸಂತೋಷ ನಾಯಕ, ರೋಹಿತ ನಾಯಕ, ಪ್ರದೀಪ ನಾಯ್ಕ, ಮಂಜು ಮುಕ್ರಿ, ಸಿಬ್ಬಂದಿ ಇದ್ದರು.

ಉಳಿದೆಡೆಯ ಸರಕಾರಿ, ಖಾಸಗಿ, ಶಾಲೆ-ಕಾಲೇಜು, ಕಚೇರಿಗಳಲ್ಲಿಡಾ.ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.

15 ಜಿ.ಕೆ.ಎನ್ 3 ಎ :

ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಡಾ.ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.