ಶಿಕ್ಷಕರ ಸಂಘದ ಚುನಾವಣೆ ರಂಗು

Contributed bysukesh2365@gmail.com|Vijaya Karnataka

ಜಗಳೂರು ತಾಲೂಕಿನಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ 2026-2031ರ ಅವಧಿಗೆ ಚುನಾವಣೆ ನಡೆಯುತ್ತಿದೆ. 499 ಶಿಕ್ಷಕ ಮತದಾರರು 10 ಕ್ಷೇತ್ರಗಳಿಗೆ ಸದಸ್ಯರನ್ನು ಆಯ್ಕೆ ಮಾಡಲಿದ್ದಾರೆ. ನಾಮಪತ್ರ ಸಲ್ಲಿಕೆ ಮತ್ತು ಪರಿಶೀಲನೆ ಮುಗಿದಿದ್ದು, ಚುನಾವಣಾ ಕಾವು ಏರಿದೆ. ಶಿಕ್ಷಣ ಇಲಾಖೆಯ ಸಂಯೋಜಕ ಬಸವರಾಜ ಎಚ್. ಚುನಾವಣಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಪ್ರಕ್ರಿಯೆ ಸುಸೂತ್ರವಾಗಿ ನಡೆಯುತ್ತಿದೆ.

mandatory election process for 10 members of the teachers association

ಶಿಕ್ಷಕರ ಸಂಘದ ಚುನಾವಣೆ ರಂಗು

ಜಗಳೂರು: ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ 2026-2031ನೇ ಅವಧಿಯ ತಾಲೂಕು ಘಟಕದ ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆ ಪ್ರಕ್ರಿಯೆ ಬಿರುಸಿನಿಂದ ಸಾಗಿದೆ. ತಾಲೂಕು ಘಟಕಕ್ಕೆ ಸಂಬಂಧಿಸಿದಂತೆ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ವಿವರಗಳನ್ನು ಚುನಾವಣಾಧಿಕಾರಿಗಳು ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ.

ಸಂಘದ ನಿಯಮಾವಳಿಯಂತೆ ಪ್ರತಿ 50 ಶಿಕ್ಷಕ ಮತದಾರರಿಗೆ ಒಬ್ಬ ಸದಸ್ಯನನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ತಾಲೂಕಿನಲ್ಲಿಒಟ್ಟು 499 ಶಿಕ್ಷಕ ಮತದಾರರಿದ್ದು, ಇವರಿಂದ ಒಟ್ಟು 10 ಕ್ಷೇತ್ರಗಳಿಗೆ (7 ಸಾಮಾನ್ಯ ಕ್ಷೇತ್ರ ಹಾಗೂ 3 ಮಹಿಳಾ ಮೀಸಲಾತಿ ಕ್ಷೇತ್ರ-ಶೇ.33) ಸದಸ್ಯರನ್ನು ಆಯ್ಕೆ ಮಾಡಬೇಕಿದೆ. ಮತದಾರರ ಪಟ್ಟಿಗೆ ಈಗಾಗಲೇ ಬಿಇಓ ಕಚೇರಿಯಿಂದ ಅನುಮೋದನೆ ದೊರೆತಿದೆ.

ಚುನಾವಣಾ ಪ್ರಕ್ರಿಯೆಯನ್ನು ಸುಸೂತ್ರವಾಗಿ ನಡೆಸಲು ಶಿಕ್ಷಣ ಇಲಾಖೆಯ ಸಂಯೋಜಕರಾದ ಬಸವರಾಜ ಎಚ್ . ಅವರನ್ನು ಚುನಾವಣಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಈಗಾಗಲೇ ನಾಮಪತ್ರ ಸಲ್ಲಿಕೆ ಮತ್ತು ಪರಿಶೀಲನಾ ಪ್ರಕ್ರಿಯೆಗಳು ಮುಗಿದಿದ್ದು, ಶಿಕ್ಷಕ ಸಮುದಾಯದಲ್ಲಿಚುನಾವಣಾ ಕಾವು ಏರಿದೆ.

-----

15ಜೆಎಲ್ ಆರ್ 2ಎ

ತಾ.ಪ್ರಾ.ಶಿ.ಸಂಘದ ಚುನಾವಣೆ ಹಿನ್ನೆಲೆ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳು.