ರಸ್ತೆ ವಿಸ್ತರಣೆಗೆ ಮರ ತೆರವಿಗೆ ಸಹಕರಿಸಲು ಮನವಿ

Contributed byvijaydm.mlr@gmail.com|Vijaya Karnataka

ಮಾಲೂರು ನಗರದ ಮುಖ್ಯ ರಸ್ತೆ ವಿಸ್ತರಣೆಗಾಗಿ ಮರಗಳನ್ನು ತೆರವುಗೊಳಿಸಲಾಗುತ್ತಿದೆ. ಇದಕ್ಕಾಗಿ ಏಪ್ರಿಲ್ 10ರಂದು ಬೆಳಗ್ಗೆ 11.30 ರಿಂದ 2 ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. ನಗರ ಹಾಗೂ ಕೊಡೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವು ಪ್ರದೇಶಗಳಲ್ಲಿ ಈ ಅಡಚಣೆ ಉಂಟಾಗಲಿದೆ. ಗ್ರಾಹಕರು ಬೆಸ್ಕಾಂಗೆ ಸಹಕರಿಸಬೇಕೆಂದು ಮನವಿ ಮಾಡಲಾಗಿದೆ. ಈ ಕಾಮಗಾರಿ ರಾಜ್ಯ ಹೆದ್ದಾರಿ ಅಭಿವೃದ್ಧಿ ನಿಗಮದಿಂದ ನಡೆಯುತ್ತಿದೆ.

road expansion and tree removal actions taken during temporary power shutdown

ರಸ್ತೆ ವಿಸ್ತರಣೆಗೆ ಮರ ತೆರವಿಗೆ ಸಹಕರಿಸಲು ಮನವಿ

ಮಾಲೂರು: ನಗರದ ಮುಖ್ಯ ರಸ್ತೆಯ ಎರಡು ಬದಿಗಳಲ್ಲಿ ರಾಜ್ಯ ಹೆದ್ದಾರಿ ಅಭಿವೃದ್ಧಿ ನಿಗಮದಿಂದ ಕೈಗಾರಿಕಾ ಕಾರಿಡಾರ್ ರಸ್ತೆಯ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಮುಖ್ಯ ರಸ್ತೆಯ ಎರಡು ಬದಿಗಳ ವಿಸ್ತರಣೆಗೆ ಮರಗಳನ್ನು ತೆಗೆಯಲು ಸರಕಾರ ಆದೇಶಿಸಿದ್ದು ಏ.10ರ ಗುರುವಾರ ಬೆಳಗ್ಗೆ 11.30 ರಿಂದ 2 ಗಂಟೆ ವರೆಗೆ ನಗರ ಸೇರಿದಂತೆ ಕೊಡೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿ ಅರಳೇರಿ, ದ್ಯಾಪಸಂದ್ರ, ಚನ್ನಕಲ್ , ಸಂತೆಹಳ್ಳಿ, ರೈಲ್ವೆ ಸೇತುವೆ ಬಳಿ ಇರುವ ಸಮತಾ ನಗರ ಇಂದಿರಾನಗರ ಪ್ರದೇಶಗಳಲ್ಲಿವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗಿದೆ. ಗ್ರಾಹಕರು ಸಹಕರಿಸುವಂತೆ ಬೆಸ್ಕಾಂನ ಸಹಾಯಕ ಕಾರ್ಯಪಾಲಕ ಅಭಿಯಂತರ ಆನ್ಸರ್ ಭಾಷಾ ಮನವಿ ಮಾಡಿದ್ದಾರೆ.