ನಾಮಪತ್ರ 8 ಸ್ವೀಕೃತ, 9 ತಿರಸ್ಕೃತ

Contributed byvkkrpanchal@gmail.com|Vijaya Karnataka

ಚಿಟಗುಪ್ಪ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಗೆ 17 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಪರಿಶೀಲನೆ ಬಳಿಕ 8 ನಾಮಪತ್ರಗಳು ಸ್ವೀಕೃತಗೊಂಡಿವೆ. 9 ನಾಮಪತ್ರಗಳು ಅಗತ್ಯ ದಾಖಲೆಗಳ ಕೊರತೆಯಿಂದ ತಿರಸ್ಕೃತಗೊಂಡಿವೆ. ಈ ಸಂಬಂಧ ಕೆಲವರು ಆರೋಪ ಪ್ರತ್ಯಾರೋಪ ಮಾಡಿದ್ದಾರೆ. ಚುನಾವಣಾಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿದ್ದಾರೆ.

nomination status 8 accepted 9 rejected in election context

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ

ನಾಮಪತ್ರ 8 ಸ್ವೀಕೃತ, 9 ತಿರಸ್ಕೃತ

ವಿಕ ಸುದ್ದಿಲೋಕ ಚಿಟಗುಪ್ಪ

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಚಿಟಗುಪ್ಪ ತಾಲೂಕ ಕಾರ್ಯಕಾರಿಣಿ ಮಂಡಳಿಯ ಚುನಾವಣೆ ಹಿನ್ನೆಲೆ ಒಟ್ಟು 17 ನಾಮಪತ್ರಗಳು ಸಲ್ಲಿಕೆಯಾಗಿವೆ.ಈ ಪೈಕಿ 8 ನಾಮಪತ್ರಗಳು ಸ್ವೀಕೃತವಾಗಿವೆ ಮತ್ತು 9 ನಾಮಪತ್ರ ಅರ್ಜಿಗಳು ನಿಗದಿಪಡಿಸಿದ ದಾಖಲೆ ನಿಗದಿತ ಸಮಯದೊಳಗೆ ಲಗ್ಗತಿಸದ ಕಾರಣದಿಂದ ತಿರಸ್ಕೃತವಾಗಿವೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚಿಟಗುಪ್ಪ ಚುನಾವಣಾಧಿಕಾರಿ ರತ್ನಪ್ಪ ನೆಲವಾಳಕರ ತಿಳಿಸಿದ್ದಾರೆ.

ಸಾಮಾನ್ಯ ವರ್ಗದಲ್ಲಿ11, ಜನ ಮಹಿಳಾ ಮೀಸಲಾತಿಯಲ್ಲಿ6ಜನ ಒಟ್ಟು 17ಜನ ನಾಮಪತ್ರ ಸಲ್ಲಿಕೆಯಾಗಿದ್ದವು. ಏ.13ರಂದು ನಾಮಪತ್ರ ಪರಿಶೀಲನೆಯಲ್ಲಿಸತ್ಯನಾರಾಯಣ ಎಸ್ , ಗಣಪತಿ, ಪಂಡಿತ, ವೀರಪ್ಪ, ಖಯಮೋದ್ದಿನ, ಮಹೇಶ್ , ತಸ್ಲೀಮ್ ಬೇಗಂ, ಅಫ್ಸರ್ ಬೇಗಂ ಇವರುಗಳು ಸೂಕ್ತ ದಾಖಲೆಗಳು ಲಗತ್ತಿಸಿರುವುದಿಲ್ಲಎಂದು ಪರಿಶೀಲಿಸಿ ಇವರ ನಾಮಪತ್ರ ತಿರಸ್ಕೃತವಾಗಿವೆ. ರಾಜಪ್ಪ, ವೈಜನಾಥ ನಾಶಿ, ಸಂಪತಿ, ಎಂ.ಡಿ. ಅಖೀಲ್ , ಪರಿಮಳ ರೆಡ್ಡಿ, ಲೂಸಿ ಗ್ರೇಸ್ , ರಮೇಶ ಕ್ಯಾತಾ, ಮಾಯಾ ಅವರು ಸೂಕ್ತ ದಾಖಲೆ ನೀಡಿರುವ ಹಿನ್ನೆÇ ಪರಿಶೀಲಿಸಿ ನಾಮಪತ್ರಗಳು ಸ್ವೀಕರಿಸಲಾಗಿದೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ. ಸಹಾಯಕ ಚುನಾವಣಾಧಿಕಾರಿ ರಾಜಕುಮಾರ ಇದ್ದರು.

ಆರೋಪ ಪ್ರತ್ಯಾರೋಪ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ ನಾಮಪತ್ರಗಳನ್ನು ಉದ್ದೇಶ ಪೂರ್ವಕವಾಗಿ ಕೈ ಬಿಡಲಾಗಿದೆ. ಚುನಾವಣಾ ಮಾರ್ಗಸೂಚಿ ಮತ್ತ ನೀತಿಯ ಪಾಲನೆ ಪಾರದರ್ಶಕವಾಗಿ ಚುನಾವಣಾಧಿಕಾರಿಗಳು ಮಾಡಿಲ್ಲಎಂದು ಪ್ರತಿಸ್ಪರ್ಧಿಗಳು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರೆ, ನಾಮಪತ್ರ ತೀರಸ್ಕೃತವಾದ ಅರ್ಜಿದಾರಲ್ಲಿಕೆಲವೊಬ್ಬರು ಚುನಾವಣಾಧಿಕಾರಿಗಳಿಗೆ ನಿಂದಿಸಿದ್ದಾರೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.