ಅಳ್ನಾವರ

Contributed byveena.kumbar@timesgroup.com|Vijaya Karnataka

ಅಳ್ನಾವರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಭಾಷೆಯ ಮೇಲೆ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳ ಆಕ್ರಮಣದ ಬಗ್ಗೆ ಚರ್ಚಿಸಲಾಯಿತು. ರಾಜ್ಯದಲ್ಲಿ ಕನ್ನಡ ಶಾಲೆಗಳು ಮುಚ್ಚುತ್ತಿರುವುದು ಕಳವಳಕಾರಿ ಸಂಗತಿ ಎಂದು ಹೇಳಲಾಯಿತು. ಕನ್ನಡ ಶಾಲೆಗಳ ಉಳಿವಿಗೆ ಎಲ್ಲರೂ ಶ್ರಮಿಸಬೇಕು ಎಂದು ಸಮ್ಮೇಳನದಲ್ಲಿ ಕರೆ ನೀಡಲಾಯಿತು. ಗಡಿಭಾಗದ ಕನ್ನಡ ಶಾಲೆಗಳಿಗೆ ಮೂಲ ಸೌಲಭ್ಯ ಒದಗಿಸಲು ನಿರ್ಣಯಿಸಲಾಯಿತು.

alnavar kannada literature conference a wake up call against the invasion on kannada language

ಅಳ್ನಾವರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಹಲಗತ್ತಿ ವಿಷಾದ

ಕನ್ನಡದ ಮೇಲೆ ಅನ್ಯ ಭಾಷೆ ಆಕ್ರಮಣ

ವಿಕ ಸುದ್ದಿಲೋಕ ಅಳ್ನಾವರ(ವೀರರಾಣಿ ಕಿತ್ತೂರು ಚನ್ನಮ್ಮಾ ವೇದಿಕೆ)

ಕನ್ನಡದ ಮೇಲೆ ಇಂಗ್ಲೀಷ ಹಾಗೂ ಹಿಂದಿಯ ಭಾಷೆಗಳ ಆಕ್ರಮಣ ನಿತ್ಯ ನಡೆಯುತ್ತಿದೆ. ಜತೆಗೆ ಗಡಿಗಳಲ್ಲಿನೆರೆ ರಾಜ್ಯದ ಭಾಷೆಗಳ ಆಕ್ರಮಣ ನಡೆಯುತ್ತಿದೆ ಎಂದು ಕವಿವ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ವಿಷಾದಿಸಿದರು.

ಪಟ್ಟಣದ ಉಮಾಭವನದಲ್ಲಿನಡೆದ ಅಳ್ನಾವರ ತಾಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಮಾತನಾಡಿದ ಅವರು, ರಾಜ್ಯದಲ್ಲಿಈಗಾಗಲೇ 20 ಸಾವಿರ ಕನ್ನಡ ಶಾಲೆಗಳು ಮುಚ್ಚಿದ್ದು, ಈ ವರ್ಷ 1500 ಕನ್ನಡ ಶಾಲೆಗಳು ಮುಚ್ಚುತ್ತಿವೆ. ಸರಕಾರಿ ಶಾಲೆಗಳಿಗೆ ಮೂಲ ಸೌಕರ್ಯಗಳನ್ನು ನೀಡದೇ ಮುಚ್ಚುವಂತಹ ವ್ಯವಸ್ಥೆ ನಿರ್ಮಾಣ ಮಾಗುತ್ತಿದೆ. ರಾಜ್ಯದಲ್ಲಿಸರಕಾರವೇ ಪಬ್ಲಿಕ್ ಶಾಲೆಗಳನ್ನು ತೆರೆದು ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವುದು ಸಂಕಟದ ಸಂಗತಿ. ಸಾಹಿತಿಗಳು, ಚಿಂತಕರು, ಕನ್ನಡಿಗರು ಸೇರಿ ಸರಕಾರದ ಕಿವಿ ಹಿಂಡಬೇಕಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಬಿಳಕಿ-ಅವರೊಳ್ಳಿಯ ಶ್ರೀ ಚನ್ನಬಸವ ದೇವರು ಸ್ವಾಮೀಜಿ ಆಶೀವರ್ಚನ ನೀಡಿ, ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಲು ಎಲ್ಲರೂ ಶ್ರಮಿಸಬೇಕು. ನಿಮ್ಮ ಮಕ್ಕಳನ್ನು ಕನ್ನಡ ಶಾಲೆಯಲ್ಲಿಓದಿಸಬೇಕು ಎಂದರು.

ಕಸಾಪ ತಾಲೂಕು ಘಟಕದ ಅಧ್ಯಕ್ಷ ಗುರುರಾಜ ಸಬನೀಸ್ , ತಾಪಂ ಇಒ ಪ್ರಶಾಂತ ತುರ್ಕಾಣಿ, ಎ.ಎಂ.ಮಂಗಳಗಟ್ಟಿ, ಅಜ್ಜಪ್ಪ ಕುರುಬರ, ಎಸ್ .ಬಿ.ಪಾಟೀಲ, ವಿನಾಯಕ ಕುರುಬರ, ಬಸವರಾಜ ಯದ್ದಲಗುಡ್ಡ, ಪ್ರಕಾಶ ಮುಗದುಮ್ , ನಿಂಗಪ್ಪ ಬೇಕ್ವಾಡಕರ, ಶ್ರೀಕಾಂತ ಗಾಯಕವಾಡ ಇದ್ದರು.

.........................

ಬಾಕ್ಸ್

ಕನ್ನಡ ಶಾಲೆ ಉಳಿವಿಗೆ ಶ್ರಮಿಸಿ

ಸಮ್ಮೇಳನಾಧ್ಯಕ್ಷ ಡಾ.ಬಸವರಾಜ ಮೂಡಬಾಗಿಲ ಮಾತನಾಡಿ, ಭಾಷಾ ಸಂಸ್ಕೃತಿ ರಕ್ಷಣೆಗೆ ಒತ್ತು ನೀಡಲು ಸಾಹಿತ್ಯ ಸಮ್ಮೇಳನಗಳು ಅವಶ್ಯ. ಗಡಿನಾಡು ಹಾಗೂ ಹೊರನಾಡ ಕನ್ನಡಿಗರ ಸಮಸ್ಯೆಗಳತ್ತ ರಾಜ್ಯ ಸರಕಾರ ವಿಶೇಷ ಗಮನ ಹರಿಸಬೇಕೆಂದು ಆಗ್ರಹಿಸಿದರು.

ಅಳ್ನಾವರದ ಇತಿಹಾಸ, ಭೌಗೋಳಿಕ ವೈಶಿಷ್ಟ್ಯ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯನ್ನು ಸ್ಮರಿಸಿದ ಅವರು, ಇಲ್ಲಿವಿವಿಧ ಭಾಷೆಗಳ ಜನರು ಸೌಹಾರ್ದದಿಂದ ಬದುಕುತ್ತಿರುವುದು ಪ್ರಶಂಸನೀಯ. ಕನ್ನಡ ಶಾಲೆಗಳ ಉಳಿವು ಮತ್ತು ಅಭಿವೃದ್ಧಿಗೆ ಸ್ಥಳೀಯರ ಸಹಕಾರದ ಅಗತ್ಯವಿದೆ ಎಂದರು.

ಬಾಕ್ಸ್

ಸಾಹಿತ್ಯ ಸಮ್ಮೇಳನದ ನಿರ್ಣಯಗಳು

1.ಅಳ್ನಾವರದಲ್ಲಿಸಾಹಿತ್ಯ ಭವನದ ನಿರ್ಮಾಣ ಆಗಬೇಕು.

2. ಗಡಿಭಾಗದ ಕನ್ನಡ ಶಾಲೆಗಳಿಗೆ ಮೂಲ ಸೌಲಭ್ಯ ಒದಗಿಸಬೇಕು.

3. ಮರಾಠಿ ಮಾತನಾಡುವವರು ಕನ್ನಡ ಕಲಿಯಲು ಕನ್ನಡ ಕಲಿಕಾ ಕೇಂದ್ರ ತೆರೆಯಬೇಕು.

ಪೋಟೊ ಕ್ಯಾಪ್ಷನ್ 15 ಎ ಎಲ್ ಎನ್ 1

ಅಳ್ನಾವರ ತಾಲ್ಲೂಕ 5 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಉದ್ಘಾಟಿಸಿದರು.