ಅಂಬೇಡ್ಕರ್ ವರ್ತಮಾನ, ನಾಳಿನ ದಾರಿದೀಪ

Contributed byMruthyunjayar77@gmail.com|Vijaya Karnataka

ಚಿಕ್ಕಬಳ್ಳಾಪುರದ ಪೆರೆಸಂದ್ರದ ಶಾಂತ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ 135ನೇ ಅಂಬೇಡ್ಕರ್ ಜನ್ಮದಿನ ಆಚರಿಸಲಾಯಿತು. ಅಂಬೇಡ್ಕರ್ ಅವರು ವರ್ತಮಾನ ಹಾಗೂ ಭವಿಷ್ಯದ ಸಮಾಜ ನಿರ್ಮಾಣದ ಯುಗಪುರುಷರು ಎಂದು ಡಾ. ಕೋಡಿರಂಗಪ್ಪ ತಿಳಿಸಿದರು. ಅಸಮಾನತೆ, ಶೋಷಣೆ ವಿರುದ್ಧ ಹೋರಾಡಿದ ಅಂಬೇಡ್ಕರ್ ಅವರ ಕೊಡುಗೆಯನ್ನು ಸ್ಮರಿಸಲಾಯಿತು. ಸಮ ಸಮಾಜ ನಿರ್ಮಾಣಕ್ಕೆ ಅವರು ರೂಪಿಸಿದ ಯೋಜನೆಗಳು ಪ್ರಸ್ತುತವಾಗಿವೆ.

ambedkar has shown the path for the reconstruction of indian society

ವಿಕ ಸುದ್ದಿಲೋಕ ಚಿಕ್ಕಬಳ್ಳಾಪುರ

ಅಂಬೇಡ್ಕರ್ ಕಾಲಗರ್ಭದಲ್ಲಿಸೇರಿ ಕಣ್ಮರೆಯಾಗುವ ವ್ಯಕ್ತಿತ್ವವಲ್ಲ, ವರ್ತಮಾನ ಹಾಗೂ ಭವಿಷ್ಯದ ಸುಭದ್ರ, ಸ್ವಾವಲಂಬಿ ಸಮಾಜ ನಿರ್ಮಾಣದ ಯುಗಪುರುಷರಾಗಿದ್ದಾರೆ ಎಂದು ಶಾಂತ ಸಮೂಹ ಸಂಸ್ಥೆಯ ನಿರ್ದೇಶಕ ಡಾ. ಕೋಡಿರಂಗಪ್ಪ ತಿಳಿಸಿದರು.

ತಾಲೂಕಿನ ಪೆರೆಸಂದ್ರದ ಶಾಂತ ಸಮೂಹ ಶಿಕ್ಷಣ ಸಂಸ್ಥೆಯಲ್ಲಿಆಯೋಜಿಸಿದ್ದ 135ನೇ ಅಂಬೇಡ್ಕರ್ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು.

ಭಾರತೀಯ ಸಮಾಜದಲ್ಲಿಆಳವಾಗಿ ಬೇರೂರಿದ್ದ ಜಾತಿ, ,ಧರ್ಮ ಮತ್ತು ಲಿಂಗ ಆಧಾರಿತ ತಾರತಮ್ಯಗಳು, ಅಸಮಾನತೆ, ಅಸ್ಪೃಶ್ಯತೆ, ಶೋಷಣೆಗಳನ್ನು ಸ್ವತಃ ಅನುಭವಿಸಿ, ಇದರಿಂದ ವಿಚಲಿತರಾಗದೆ ಆಳವಾದ ಅಧ್ಯಯನ ಹಾಗೂ ಹೋರಾಟಗಳಿಂದ ನಮ್ಮ ಸಮಾಜವನ್ನು ಜಾಗೃತಿಗೊಳಿಸಿದ್ದಾರೆ, ಸಮಾಜದ ಪುನಾರಚನೆಗೆ ದಾರಿ ಬೆಳಕಾಗಿದ್ದಾರೆ ಎಂದರು.

ಸರ್ವರಿಗೆ ಸಮಪಾಲು, ಸರ್ವರಿಗೂ ಸಮಬಾಳು ನೀಡುವ ಮೂಲಕ ಸಮ ಸಮಾಜ ನಿರ್ಮಾಣದ ಕನಸು ಹೊತ್ತು ಅದಕ್ಕಾಗಿ ಅಸಂಖ್ಯಾತ ಯೋಜನೆಗಳನ್ನು ರೂಪಿಸಿ ಇಡೀ ದೇಶವೇ ತನ್ನ ಸ್ವಂತ ಕುಟುಂಬ ಎಂದು ಭಾವಿಸಿ ನೊಂದವರ ಮೇಲೆತುವ್ತ ರಚನಾತ್ಮಕ ಕಾಯಕ ಮಾಡಿರುವ ಮಹಾನ್ ಮಾನವತಾವಾದಿ ಎಂದು ಗೌರವಿಸಲ್ಪಟ್ಟಿದ್ದಾರೆ ಎಂದು ತಿಳಿಸಿದರು.

ಶಾಂತಾ ಶಿಕ್ಷಣ ಸಂಸ್ಥೆಗಳ ಡೀನ್ , ಪ್ರಾಂಶುಪಾಲ ಡಾ. ನವೀನ್ ಎಚ್ ಸೈಮನ್ ಮಾತನಾಡಿ, ಅಂಬೇಡ್ಕರ್ ನಮ್ಮ ದೇಶದಲ್ಲಿಹುಟ್ಟದಿದ್ದರೆ ಲಕ್ಷಾಂತರ ಶ್ರೀಸಾಮಾನ್ಯರು ಅಸಮಾನತೆ ಮತ್ತು ಶೋಷಣೆಯ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿಕಣ್ಮರೆಯಾಗುತ್ತಿದ್ದರು. ಊಳಿಗಮಾನ್ಯ, ರಾಜಪ್ರಭುತ್ವ ಹಾಗೂ ಕ್ಯಾಪಿಟಲಿಸ್ಟ್ ವ್ಯವಸ್ಥೆಯನ್ನು ಶಿಕ್ಷಣ, ಸಂಘಟನೆ ಮತ್ತು ಹೋರಾಟಗಳ ಮೂಲಕ ಒಡೆದು ಸಮ ಸಮಾಜ ರಾಷ್ಟ್ರವನ್ನಾಗಿ ರೂಪಿಸುವ ಸಲುವಾಗಿ ಅಂಬೇಡ್ಕರ್ ಅವಿರತವಾಗಿ ದುಡಿದಿದ್ದಾರೆ. ಅಂತಹ ಮಹಾನ್ ನಾಯಕನಿಗೆ ಎಂದಿಗೂ ಭಾರತೀಯರು ಋುಣಿಯಾಗಿರಬೇಕು ಎಂದರು.

ಶಾಂತ ಫಾರ್ಮಸಿ ಕಾಲೇಜಿನ ಪ್ರಾಧ್ಯಾಪಕ ಸುರೇಂದ್ರ ಮಾತನಾಡಿ, ಅಂಬೇಡ್ಕರ್ ರಚಿಸಿರುವ ಹಿಂದೂ ಕೋಡ್ ಬಿಲ್ ಗೆ ಪಾರ್ಲಿಮೆಂಟಿನಲ್ಲಿಅನೂರ್ಜಿತವಾದರು. ಪಟ್ಟು ಬಿಡದ ಅಂಬೇಡ್ಕರ್ ತಮ್ಮ ಕಾನೂನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆದರೆ ಹೋರಾಟ ನಿಲ್ಲಲಿಲ್ಲ, ಪಾರ್ಲಿಮೆಂಟಿನ ಹೊರಗೆ ಶಾಲಾ ಕಾಲೇಜುಗಳ ಮೂಲಕ ರಚನಾತ್ಮಕವಾಗಿ ಹೋರಾಟ ನಡೆಸಿ ಭಾರತದ ತಾಯಂದಿರು ಮತ್ತು ಸಹೋದರಿಯರಿಗೆ ಘನತೆಯ ಬದುಕು ಕಲ್ಪಿಸಿ ಕೊಡಲು ಸಾಧ್ಯವಾಯಿತು ಎಂದರು.

ಶಾಂತಾ ವಿದ್ಯಾನಿಕೇತನದ ಅಧ್ಯಾಪಕಿ ರಾಧ ಸಂವಿಧಾನದ ಪ್ರಸ್ತಾವನೆ ಹಾಗೂ ಮುಖ್ಯ ವಿಧಿಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿಶಾಂತ ವಿದ್ಯಾನಿಕೇತನದ ಪ್ರಾಂಶುಪಾಲ ಡಾ. ಪ್ರಸಾದ್ ಅಪ್ಪಲ್ಲ, ಪ್ರೊ. ಡಯಾನ, ಡಾ. ಆಯಿಷಾ, ಅರೆ ವೈದ್ಯಕೀಯ ವಿಜ್ಞಾನ ಕೋರ್ಸ್ ನ ಪ್ರೊ. ನರೇಶ್ , ಪ್ರೊ. ವಿಜಯಲಕ್ಷ್ಮಿ, ರಾಜೇಶ್ , ಸಂದೇಶ್ , ರಂಗರಾಜನ್ , ಅಂಬಿಕಾ ವೆಂಕಟೇಶ್ , ಕಲೀಂ ಉಲ್ಲಾ, ಶಶಿಧರ್ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

15 ಸಿಬಿಪಿ ಪೋಟೋ 6

ಶಾಂತ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ135ನೇ ಅಂಬೇಡ್ಕರ್ ಜನ್ಮ ದಿನ ಆಚರಿಸಲಾಯಿತು.