ವಿಕ ಸುದ್ದಿಲೋಕ ಬೆಂಗಳೂರು
‘ ದಾವಣಗೆರೆ ದಂಗಲ್ ’ ಎಫೆಕ್ಟ್ ಕಾಂಗ್ರೆಸ್ ನಲ್ಲಿಮುಂದುವರಿದಿದ್ದು, ಪರಿಷತ್ ಸದಸ್ಯ ಅಬ್ದುಲ್ ಜಬ್ಬರ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೂ ಅಮಾನತುಗೊಳಿಸಲಾಗಿದೆ.
ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯಲ್ಲಿಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದಡಿ ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸ್ಥಾನದಿಂದ ಜಬ್ಬರ್ ಅವರಿಗೆ ಕೊಕ್ ನೀಡಲಾಗಿತ್ತು. ಹೈಕಮಾಂಡ್ ಸೂಚನೆಯಂತೆ ಈ ಸ್ಥಾನಕ್ಕೆ ಜಬ್ಬರ್ ರಾಜೀನಾಮೆ ಸಲ್ಲಿಸುತ್ತಿದ್ದಂತೆ ಕೆಪಿಸಿಸಿ ಅಲ್ಪಸಂಖ್ಯಾತರ ಘಟಕವನ್ನೇ ವಿಸರ್ಜಿಸಲಾಗಿದೆ.
ಇದೀಗ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವದಿಂದಲೂ ಜಬ್ಬಾರ್ ಅವರನ್ನು ಅಮಾನತೊಗೊಳಿಸಲಾಗಿದೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ.ಶಿವಕುಮಾರ್ ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ.
ದಾವಣಗೆರೆ ಬೈ ಎಲೆಕ್ಷನ್ ವಿಚಾರದಲ್ಲಿಜಬ್ಬರ್ ಅವರಂತೆಯೇ ಆಪಾದನೆ ಎದುರಿಸುತ್ತಿರುವ ನಸೀರ್ ಅಹಮದ್ ಅವರನ್ನು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ಮಂಗಳವಾರವಷ್ಟೇ ವಜಾಗೊಳಿಸಲಾಗಿದೆ. ಸಚಿವ ಜಮೀರ್ ಅಹಮದ್ ಖಾನ್ ವಿರುದ್ಧವೂ ಈ ಸಂಬಂಧದಲ್ಲಿಆರೋಪ ಇರುವುದರಿಂದ ಸಿಎಂ ಸಿದ್ದರಾಮಯ್ಯ ಅವರು ಕರೆಸಿಕೊಂಡು ಸ್ಪಷ್ಟೀಕರಣ ಪಡೆದುಕೊಂಡಿದ್ದಾರೆ. ಹಾಗಾಗಿ ದಾವಣಗೆರೆ ಉಪ ಚುನಾವಣೆಯ ಗೊಂದಲದಿಂದ ಕಾಂಗ್ರೆಸ್ ನಲ್ಲಿಉಂಟಾದ ತಲ್ಲಣ ಇನ್ನೂ ಮುಂದುವರಿದಂತಾಗಿದೆ.
---------------------------
ಸಾಕ್ಷ್ಯವಿದ್ದರೆ ಕೊಡಿ, ಜಬ್ಬರ್ ಸವಾಲ್
ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಕ್ಕೆ ಆಡಿಯೊ, ವಿಡಿಯೊ ಸೇರಿದಂತೆ ಯಾವುದೇ ಸಾಕ್ಷ್ಯವಿದ್ದರೆ ತೋರಿಸಲಿ ಎಂದು ಈ ಬೆಳವಣಿಗೆಗೆ ಪ್ರತಿಕ್ರಿಯಿಸಿರುವ ಅಬ್ದುಲ್ ಜಬ್ಬರ್ ಸವಾಲು ಹಾಕಿದ್ದಾರೆ.
‘‘ಅಮಾನತು ವಿಚಾರ ಗೊತ್ತಿಲ್ಲ. ಫಲಿತಾಂಶಕ್ಕೂ ಮೊದಲೇ ಇದೆಲ್ಲಯಾಕೆ ಎಂಬುದೇ ಅರ್ಥವಾಗುತ್ತಿಲ್ಲ. ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡದಿದ್ದರೆ ಬೇರೆ ಸಮುದಾಯಕ್ಕೆ ಕೊಡಬಹುದು ಎಂದು ಚರ್ಚೆಯಾಗಿತ್ತು. ಕುರುಬ ಸಮಾಜದವರಿಗೆ ಕೊಟ್ಟರೆ ಗೆಲ್ಲಿಸಿಕೊಂಡು ಬರಬಹುದು ಎಂದೂ ಚರ್ಚೆಯಾಗಿತ್ತು. ಹೊಸ ಕುದುರೆಗಳು ಬಂದವು ಎಂದು 40 ವರ್ಷಗಳಿಂದ ಪಕ್ಷ ನಿಷ್ಠೆ ಉಳಿಸಿಕೊಂಡಿದ್ದ ನನ್ನನ್ನು ಬಲಿಪಶು ಮಾಡಲಾಗಿದೆ. ಸಿಎಂ ಬಣದ ನಾಯಕರೇ ಟಾರ್ಗೆಟ್ ಆಗುತ್ತಿದ್ದಾರಾ? ಎಲ್ಲವೂ ಆಕಸ್ಮಿಕವಾಗಿ ನಡೆಯುತ್ತಿದೆಯಾ ಗೊತ್ತಾಗುತ್ತಿಲ್ಲ,’’ ಎಂದು ಹೇಳಿದರು.
ಈ ಹಿಂದೆ ಶಿಧಿಕಾಧಿರಿಧಿಪುಧಿರಧಿದಲ್ಲಿ ಯಧಿಡಿಧಿಯೂಧಿರಧಿಪ್ಪನ ಮಧಿಗನ ಗೆಧಿಲ್ಲಿಸಿ ಎಂದು ಯಧಿಜಧಿಮಾಧಿನರು(ಧಿಶಾಧಿಮಧಿನೂಧಿರುಧಿ) ಹೇಧಿಳಿಧಿದಾಗ ಪಕ್ಷ ಏಕೆ ಮೌಧಿನಧಿವಾಧಿಗಿತ್ತು. ಕ್ರಮ ತೆಧಿಗೆಧಿದುಧಿಕೊಂಡಿಧಿಲ್ಲ,ಧಿ’ಧಿ’ಧಿಎಂದು ಪ್ರಧಿಶಿಧಿಸಿಧಿದಧಿರು.
======================

