ರೂಪಾಯಿ ಮೌಲ್ಯದಲ್ಲಿಅಲ್ಪ ಕುಸಿತ

Contributed byVenkat K|Vijaya Karnataka

ಬುಧವಾರ ಡಾಲರ್ ಎದುರು ರೂಪಾಯಿ ಮೌಲ್ಯ 9 ಪೈಸೆ ಕುಸಿದು 93.44 ರೂ. ತಲುಪಿತು. ಕಚ್ಚಾ ತೈಲ ಬೆಲೆ ಏರಿಕೆ ಮತ್ತು ದೇಶೀಯ ಹಣದುಬ್ಬರ ಏರಿಕೆಯಿಂದ ರೂಪಾಯಿ ದುರ್ಬಲಗೊಂಡಿತು. ದೇಶೀಯ ಹೂಡಿಕೆದಾರರು ಈಕ್ವಿಟಿಗಳನ್ನು ಖರೀದಿಸಿದರೂ ರೂಪಾಯಿ ಮೌಲ್ಯ ಹೆಚ್ಚಳಕ್ಕೆ ಇದು ನೆರವಾಗಲಿಲ್ಲ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಈಕ್ವಿಟಿಗಳನ್ನು ಖರೀದಿಸಿದರೆ ರೂಪಾಯಿ ಮೌಲ್ಯ ಹೆಚ್ಚಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.

rupee value declines slight drop to 9344 against dollar

ಮುಂಬಯಿ: ಡಾಲರ್ ಎದುರು ರೂಪಾಯಿ ಮೌಲ್ಯ ಬುಧವಾರ 9 ಪೈಸೆ ಇಳಿದು 93.44 ರೂ. ಆಯಿತು. ಕಚ್ಚಾ ತೈಲದ ಬೆಲೆ ಏರಿಕೆ, ದೇಶೀಯ ಹಣದುಬ್ಬರ ಏರಿಕೆಯಿಂದ ರೂಪಾಯಿ ಬಲಗೊಳ್ಳಲಿಲ್ಲ. ದೇಶೀಯ ಹೂಡಿಕೆದಾರರು ಭಾರಿ ಪ್ರಮಾಣದಲ್ಲಿಈಕ್ವಿಟಿಗಳನ್ನು ಖರೀದಿಸುತ್ತಿದ್ದರೂ ಇದು ರೂಪಾಯಿ ಮೌಲ್ಯವರ್ಧನೆಗೆ ಯಾವುದೇ ಒತ್ತಾಸೆ ನೀಡಿಲ್ಲ. ಸಾಂಸ್ಥಿಕ ವಿದೇಶಿ ಹೂಡಿಕೆದಾರರು ಈಕ್ವಿಟಿಗಳ ಮಾರಾಟಕ್ಕಿಂತ ಖರೀದಿ ಮಾಡಲು ಅಪೇಕ್ಷಿಸಿದರೆ ಅದು ರೂಪಾಯಿ ಮೌಲ್ಯವನ್ನು ಹೆಚ್ಚಿಸುತ್ತದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.