ಸಾತನೂರು ಹೋಬಳಿಯಲ್ಲಿ ಡಾ. ಬಿ.ಆರ್ .ಅಂಬೇಡ್ಕರ್ ಜಯಂತಿ

Contributed bywww.hvprasanna@gmail.com|Vijaya Karnataka

ಸಾತನೂರು ಹೋಬಳಿಯಾದ್ಯಂತ ಡಾ. ಬಿ.ಆರ್‌.ಅಂಬೇಡ್ಕರ್‌ ಅವರ 135ನೇ ಜಯಂತಿಯನ್ನು ಸಡಗರದಿಂದ ಆಚರಿಸಲಾಯಿತು. ಶಾಲಾ ಕಾಲೇಜುಗಳು, ಸರಕಾರಿ ಕಚೇರಿಗಳು, ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ, ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಅವರ ಜೀವನ, ಕೊಡುಗೆಗಳ ಬಗ್ಗೆ ಮಾಹಿತಿ ನೀಡಲಾಯಿತು. ಸಮಾನತೆಯ ದಿನವನ್ನಾಗಿ ಈ ದಿನವನ್ನು ಆಚರಿಸಲಾಯಿತು. ಗ್ರಾಮೀಣ ಪದವಿ ಪೂರ್ವ ಕಾಲೇಜು, ಪ್ರೌಢಶಾಲೆ, ನಾಡಕಚೇರಿ, ಮತ್ತು ಅರೆಕಟ್ಟೆದೊಡ್ಡಿ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯಕ್ರಮಗಳು ನಡೆದವು.

dr br ambedkars 135th jayanti celebrated in sathanooru hobli with grandeur

ವಿಕ ಸುದ್ದಿಲೋಕ ಸಾತನೂರು

ಡಾ. ಬಿ.ಆರ್ .ಅಂಬೇಡ್ಕರ್ ಅವರ 135 ನೇ ಜನ್ಮ ಜಯಂತಿಯನ್ನು ಸಾತನೂರು ಹೋಬಳಿಯ ಶಾಲಾ ಕಾಲೇಜು ಸರಕಾರಿ ಕಚೇರಿಗಳಲ್ಲಿಆಚರಿಸಲಾಯಿತು.

ಸಾತನೂರಿನ ಗ್ರಾಮಾಂತರ ಪದವಿ ಪೂರ್ವ ಕಾಲೇಜಿನಲ್ಲಿಗ್ರಾಮಾಂತರ ಪದವಿ ಪೂರ್ವ ಕಾಲೇಜು ಮತ್ತು ಗ್ರಾಮಾಂತರ ಪ್ರೌಢಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಉಪನ್ಯಾಸಕರು ಸೇರಿ ಡಾ. ಬಿ.ಆರ್ .ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸಿ ವಿದ್ಯಾರ್ಥಿಗಳಿಗೆ ಡಾ. ಬಿ.ಆರ್ .ಅಂಬೇಡ್ಕರ್ ಅವರ ಜೀವನ ಚರಿತ್ರೆ ಮತ್ತು ಸಂವಿಧಾನದ ರಚನೆ, ಕೊಡುಗೆಗಳ ಬಗ್ಗೆ ಮಾಹಿತಿ ನೀಡಿ ಮಾತನಾಡಿ, ಕಾಲೇಜಿನ ಪ್ರಾಂಶುಪಾಲ ಮಲ್ಲಿಕಾರ್ಜುನ ಅವರು, ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್ .ಅಂಬೇಡ್ಕರ್ ಅವರು ಏಪ್ರಿಲ್ 14, 1891 ರಂದು ಜನಿಸಿದರು. ಏಪ್ರಿಲ್ 14ರ ಈ ದಿನವನ್ನು ಸಮಾನತೆಯ ದಿನ ಎಂದು ಆಚರಣೆ ಮಾಡಲಾಗುತ್ತದೆ ಎಂದರು.

ಸಾತನೂರಿನ ಸರಕಾರಿ ಹಿರಿಯ ಮಾಧ್ಯಮಿಕ ಶಾಲೆಯಲ್ಲಿಮುಖ್ಯೋಪಾಧ್ಯಾಯ ತಿಪ್ಪೇಸ್ವಾಮಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

ಸಾತನೂರಿನ ಕಂದಾಯ ಇಲಾಖೆಯ ನಾಡಕಚೇರಿಯಲ್ಲಿಉಪ ತಹಸಿಲ್ದಾರ್ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಆಚರಣೆ ಮಾಡಿದರು. ಅರೆಕಟ್ಟೆದೊಡ್ಡಿ ಗ್ರಾಮ ಪಂಚಾಯಿತಿಯಲ್ಲಿಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅರ್ಜುನ್ ನೇತೃತ್ವದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗ್ರಾಮ ಪಂಚಾಯತಿ ಸಿಬ್ಬಂದಿ ಜಯಂತಿಯನ್ನು ಆಚರಿಸಿದರು.

ಸಾತನೂರು ಹೋಬಳಿಯ ಎಲ್ಲಾಸರಕಾರಿ ಖಾಸಗಿ ಶಾಲಾ ಕಾಲೇಜುಗಳಲ್ಲಿಸರಕಾರಿ ಸಂಘ ಸಂಸ್ಥೆ ಕಚೇರಿಗಳಲ್ಲಿ135ನೇ ಡಾ. ಬಿ.ಆರ್ .ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.

14 ಸಾತನೂರು 1: ಸಾತನೂರಿನ ಗ್ರಾಮಾಂತರ ಪ.ಪೂ. ಕಾಲೇಜಿನಲ್ಲಿಉಪನ್ಯಾಸಕರು ಪ್ರಾಂಶುಪಾಲರು, ವಿದ್ಯಾರ್ಥಿಗಳು, ಮತ್ತು ಅರೆಕಟ್ಟೆದೊಡ್ಡಿ ಗ್ರಾಪಂನಲ್ಲಿಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿ ಡಾ. ಬಿ.ಆರ್ .ಅಂಬೇಡ್ಕರ್ ಅವರ 135 ನೇ ಜನ್ಮ ಜಯಂತಿ ಆಚರಿಸಿದರು.