ಅಂಗನವಾಡಿ ನಿರ್ಮಾಣಕ್ಕೆ ಭೂಮಿ ಪೂಜೆ
ವಿಕ ಸುದ್ದಿಲೋಕ ದೇವನಹಳ್ಳಿ
ದೇವನಹಳ್ಳಿ ಪುರಸಭೆ ವ್ಯಾಪ್ತಿಯ 19ನೇ ವಾರ್ಡ್ ಕತ್ತಾಳಿಪುರದಲ್ಲಿಅಂಗನವಾಡಿ ನಿರ್ಮಾಣಕ್ಕೆ ಪುರಸಭೆಯಿಂದ ನಿವೇಶನ ನೀಡಿದೆ. 20 ಲಕ್ಷ ವೆಚ್ಚದಲ್ಲಿಸುಸಜ್ಜಿತವಾದ ಅಂಗನವಾಡಿ ಕಟ್ಟಡ ನಿರ್ಮಿಸಲಾಗುವುದು ಎಂದು ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕವಿತ ತಿಳಿಸಿದರು.
ಅಂಗನವಾಡಿ ಕಟ್ಟಣ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಗುತ್ತಿಗೆದಾರರು 5 ತಿಂಗಳಲ್ಲಿಕಾಮಗಾರಿ ಪೂರ್ಣಗೊಳಿಸಿ, ಕಟ್ಟಡ ಹಸ್ತಾಂತರಿಸುವ ಭರವಸೆ ನೀಡಿದ್ದಾರೆ ಎಂದರು.
ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಕೈಗೊಂಡು, ತ್ವರಿತವಾಗಿ ಕಟ್ಟಡವನ್ನು ಹಸ್ತಾಂತರಿಸಬೇಕು. ಅನೇಕ ವರ್ಷಗಳಿಂದ 19ನೇ ವಾರ್ಡ್ ನಲ್ಲಿಅಂಗನವಾಡಿಯನ್ನು ಸಮುದಾಯ ಭವನದಲ್ಲಿನಡೆಸಲಾಗುತ್ತಿದೆ ಸ್ವಂತ ಕಟ್ಟಡ ಇರಲಿಲ್ಲ. ಹಾಗಾಗಿ, ಪುರಸಭೆಯಿಂದ ಜಾಗ ಮಂಜೂರು ಮಾಡಿಕೊಟ್ಟಿದ್ದಾರೆ ಎಂದರು.
ಸ್ಥಳೀಯ ಮುಖಂಡ ಮಂಜುನಾಥ್ ಮಾತನಾಡಿ, 19ನೇ ವಾರ್ಡ್ ನಲ್ಲಿಸಮುದಾಯ ಭವನದಲ್ಲಿಅಂಗನಾಡಿ ಕೇಂದ್ರ ನಡೆಯುತ್ತಿತ್ತು. ಇದರಿಂದ ಅಲ್ಲಿನ ಸಮುದಾಯದವರು ಕಾರ್ಯಕ್ರಮಗಳ ಆಯೋಜನೆ ಮಾಡಲು ಅನಾನುಕೂಲವಾಗುತ್ತಿತ್ತು. ಅಂಗನವಾಡಿ ಖಾಲಿ ಮಾಡುವಂತೆ ತಿಳಿಸಿದ್ದರು. ಪುರಸಭೆ ಅಧಿಕಾರಿಗಳಿಗೆ ಅಂಗನವಾಡಿಗೆ ಜಾಗ ಮಂಜೂರು ಮಾಡಿಕೊಡುವಂತೆ ಅನೇಕ ಬಾರಿ ಮನವಿ ಸಲ್ಲಿಸಿದ್ದೆವು. ಈಗ ಅಂಗನವಾಡಿಗೆ ಜಾಗ ಗುರುತಿಸಿ ಶಿಶು ಅಭಿವೃದ್ಧಿ ಇಲಾಖೆಗೆ ಜಾಗ ಮಂಜೂರು ಮಾಡಿದ್ದು, ಪುರಸಭೆ ಅಧಿಕಾರಿಗಳಿಗೆ ವಾರ್ಡ್ ನ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇವೆ ಎಂದರು.
ಈ ವೇಳೆ ಪುರಸಭೆ ಕಂದಾಯ ನಿರೀಕ್ಷಕ ಎ.ಮಂಜುನಾಥ್ , ಪೌರಸೇವಾನೌಕರರ ಸಂಘದ ಅಧ್ಯಕ್ಷ ಮಂಜಪ್ಪ, ಪುರಸಭೆ ಮಾಜಿ ಸದಸ್ಯೆ ಸುಮಿತ್ರ ಮಂಜುನಾಥ್ , ನೀರಿಗಂಟಿ ಮೇಸ್ತ್ರಿ ಗಡ್ಡಮುನಿರಾಜು, ಅಂಗನವಾಡಿ ಕಾರ್ಯಕರ್ತೆ ಬೇಬಿ, ಸಹಾಯಕಿ ಬೇಬಿ, ಸ್ಥಳಿಯ ಮುಖಂಡರಾದ ನಾಗರಾಜ್ , ಹರೀಶ, ಮುನಿರಾಜು, ವಿಜಯ್ ಕುಮಾರ್ , ಶಿವಕುಮಾರ್ , ಮಂಜುನಾಥ್ , ಮುನಿರಾಜು, ಮರಿಯಪ್ಪ, ಮುನಿಕೃಷ್ಣ ಮತ್ತಿತರರು ಇದ್ದರು.
ಚಿತ್ರಸುದ್ದಿ:ದ್ 15 ದೇವನಹಳ್ಳಿ ಪೊ-1
ದೇವನಹಳ್ಳಿ ಪುರಸಭೆ ವ್ಯಾಪ್ತಿಯ 19ನೇ ವಾರ್ಡ್ ಕತ್ತಾಳಿಪುರದಲ್ಲಿಅಂಗನಾಡಿ ಕಟ್ಟಡ ನಿರ್ಮಾಣಕ್ಕೆ ಶಿಶುಅಭಿವೃದ್ಧಿ, ಹಾಗೂ ಪುರಸಭೆ ಅಧಿಕಾರಿಗಳು ಭೂಮಿಪೂಜೆ ನೆರವೇರಿಸಿದರು.

