ತೆರಿಗೆ ಪಾವತಿಸಲು ಹೆಣಗಾಟ

Contributed byyadawad108@gmail.com|Vijaya Karnataka

ತೇರದಾಳ ಪುರಸಭೆಯಲ್ಲಿ ತೆರಿಗೆ ಪಾವತಿಸಲು ಸಾರ್ವಜನಿಕರು ಪರದಾಡುತ್ತಿದ್ದಾರೆ. ಸರ್ವರ್‌ ಸಮಸ್ಯೆಯಿಂದಾಗಿ ನಾಗರಿಕರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಆಸ್ತಿ ಉತಾರ ಪಡೆಯಲು ಸಹ ಸಮಸ್ಯೆ ಎದುರಾಗಿದೆ. ಆಡಳಿತಾಧಿಕಾರಿಗಳು ಕಚೇರಿಗೆ ಬಾರದೆ ಇರುವುದರಿಂದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ. ನೀರು ಸರಬರಾಜು ಮತ್ತು ಸ್ವಚ್ಛತೆ ವಿಚಾರದಲ್ಲೂ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

severe difficulties faced by the municipality in tax payment

ತೇರದಾಳ ಪುರಸಭೆಯಲ್ಲಿಸರ್ವರ್ ಬಿಜಿ | ಪರಿಹಾರ ಕಾಣದ ಸಮಸ್ಯೆ

ತೆರಿಗೆ ಪಾವತಿಸಲು ಹೆಣಗಾಟ

ವಿಕ ಸುದ್ದಿಲೋಕ ತೇರದಾಳ

ಸಾರ್ವಜನಿಕರು ಪುರಸಭೆಗೆ ತೆರಿಗೆ ಹಣ ಪಾವತಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭೆಯವರು ಧ್ವನಿವರ್ಧಕ ಮೂಲಕ ಸಾರಿ ಸಾರಿ ಹೇಳುತ್ತಿದ್ದಾರೆ. ಅಷ್ಟೇ ಏಕೆ ಏಪ್ರಿಲ್ , ಮೇ ತಿಂಗಳಲ್ಲಿತೆರಿಗೆ ಪಾವತಿಸಿದರೆ ರಿಯಾಯಿತಿ ನೀಡುವ ಬಗ್ಗೆ ಬ್ಯಾನರ್ ಗಳನ್ನು ಅಳವಡಿಸಲಾಗಿದೆ. ಆದರೆ, ತೆರಿಗೆ ಪಾವತಿಸಲು ಪುರಸಭೆಗೆ ಹೋದರೆ ಸರ್ವರ್ ಬಿಜಿಯಿಂದ ನಾಗರಿಕರು ಕಿರಿಕಿರಿ ಅನುಭವಿಸುವಂತಾಗಿದೆ.

ಕಚೇರಿಯಲ್ಲಿಕಾಯ್ದು ಕುಳಿತರೂ ಸರ್ವರ್ ಸಹಜ ಸ್ಥಿತಿಗೆ ಮರಳುತ್ತದೆ ಎಂಬುದರ ಬಗ್ಗೆ ಗ್ಯಾರಂಟಿ ಇರುವುದಿಲ್ಲ. ಬಿಸಿಲಲ್ಲಿಬಂದು ಕೆಲಸವಾಗದೆ ವಾಪಸ್ ಹೋಗುವ ಸಾರ್ವಜನಿಕರು ಪುರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ಪಟ್ಟಣದಲ್ಲಿನ ಆಸ್ತಿಗಳ ಉತಾರಗಳನ್ನು ಕೈಬರಹದಲ್ಲಿನೀಡುವುದನ್ನು ನಿಲ್ಲಿಸಲಾಗಿದೆ. ಕಂಪ್ಯೂಟರ್ ಉತಾರ ಪಡೆಯಬೇಕಾದರೆ ನೂರೆಂಟು ಸವಾಲುಗಳ ಜತೆಗೆ ಸರ್ವರ್ ಕಾಟ. ಇನ್ನು ದೇವರಾಜ ನಗರದ ಆಸ್ತಿಗಳ ದಾಖಲೆಯನ್ನು ಕೈಬರಹದಲ್ಲೇ ನೀಡಲಾಗುತ್ತಿದೆ. ಆದರೆ ತೆರಿಗೆ ಪಾವತಿಸಬೇಕೆಂದರೆ ಸರ್ವರ್ ಬಿಜಿ ಸ್ಥಿತಿಯಲ್ಲಿರುವುದು ನಾಗರಿಕರನ್ನು ಕಂಗೆಡೆಸುತ್ತಿದೆ. ಉತಾರ ನೀಡಲು ಒಬ್ಬರನ್ನೇ ನಿಯೋಜನೆ ಮಾಡಿದ್ದರಿಂದ ಮತ್ತಷ್ಟು ವಿಳಂಬ ಆಗುತ್ತಿದೆ.

------------

ಬಾರದ ಆಡಳಿತಾಧಿಕಾರಿ

ಪುರಸಭೆ ಸದಸ್ಯರ ಅಧಿಕಾರವಧಿ ಪೂರ್ಣಗೊಂಡ ಬಳಿಕ ಆಡಳಿತಾಧಿಕಾರಿಯಾಗಿ ನೇಮಕಗೊಂಡ ಉಪವಿಭಾಗಾಧಿಕಾರಿಗಳು ಐದು ತಿಂಗಳಲ್ಲಿಒಂದು ಬಾರಿ ಮಾತ್ರ ಕಚೇರಿಗೆ ಬಂದಿದ್ದಾರೆ. ಮೊದಲ ಬಾರಿ ಆಗಮಿಸಿದಾಗ ಪ್ರತಿ ವಾರ ಬರುವುದಾಗಿ ಭರವಸೆ ನೀಡಿದ್ದರು. ತಾವು ಕೊಟ್ಟ ಭರವಸೆಯಂತೆ ನಡೆದುಕೊಳ್ಳದ ಕಾರಣ ಪುರಸಭೆಯಲ್ಲಿಹೇಳೋರೋ ಕೇಳೋರು ಯಾರೂ ಇಲ್ಲದಂತಾಗಿದೆ ಎಂದು ಸಾರ್ವಜನಿಕರು ಆಡಿಕೊಳ್ಳುತ್ತಿದ್ದಾರೆ.

ಬೇಸಿಗೆ ಶುರುವಾಗಿದ್ದು, ಕೆಲವು ಕಡೆಗಳಲ್ಲಿಸರಿಯಾಗಿ ನೀರು ಸರಬರಾಜು ಆಗುತ್ತಿಲ್ಲ. ಕಾರ್ಮಿಕರನ್ನು ಕೇಳಿದರೆ ವೇತನ ನೀಡದಿರುವ ಬಗ್ಗೆ ಯಾರೂ ಚಕಾರ ಎತ್ತುವುದಿಲ್ಲ. ಎಲ್ಲರೂ ಕೆಲಸ ಮಾತ್ರ ಕೇಳುತ್ತಾರೆಂದು ತಮ್ಮ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಪಟ್ಟಣದ ಸ್ವಚ್ಛತೆ ಬಗ್ಗೆ ಕೂಡ ನಿರ್ಲಕ್ಷತ್ರ್ಯ ವಹಿಸಲಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.

---------

ಇತ್ತೀಚೆಗೆ ಸರ್ವರ್ ಕಿರಿಕಿರಿ ಹೆಚ್ಚಾಗಿದೆ. ಸಾರ್ವಜನಿಕರ ಕೆಲಸಗಳನ್ನು ಮಾಡಲು ತೊಂದರೆ ಆಗುತ್ತಿದೆ. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ.

-ಎಫ್ .ಬಿ.ಗಿಡ್ಡಿ ಪುರಸಭೆ ಮುಖ್ಯಾಧಿಕಾರಿ ತೇರದಾಳ

ಫೋಟೊ ಫೈಲ್ ನೇಮ್ ಟಿಡಿಎಲ್ -15-2ಎ

ಎ) ತೇರದಾಳ ಪುರಸಭೆಯಲ್ಲಿಸರ್ವರ್ ಬಿಜಿಯಿಂದಾಗಿ ತೆರಿಗೆ ಪಾವತಿಸಲು ಸಾರ್ವಜನಿಕರ ಹೆಣಗಾಟ.