ಸಾಮೂಹಿಕ ಉಪನಯನ ದುಂದುವೆಚ್ಚಕ್ಕೆ ಕಡಿವಾಣ

Contributed byVIJAYKUMAR P|Vijaya Karnataka

ಹುಬ್ಬಳ್ಳಿಯಲ್ಲಿ ಎಸ್‌.ಎಸ್‌.ಕೆ. ಸಮಾಜ 151 ಸಾಮೂಹಿಕ ಉಪನಯನ ಕಾರ್ಯಕ್ರಮ ನಡೆಸಿತು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಾರ್ಯಕ್ರಮ ಉದ್ಘಾಟಿಸಿದರು. ದುಂದುವೆಚ್ಚಕ್ಕೆ ಕಡಿವಾಣ ಹಾಕುವ ಈ ಪ್ರಯತ್ನ ಶ್ಲಾಘನೀಯ. ಶಾಸಕ ಮಹೇಶ ಟೆಂಗಿನಕಾಯಿ ಹಾಗೂ ಶ್ರೀಗಳು ಎಸ್‌.ಎಸ್‌.ಕೆ. ಸಮಾಜದ ಕಾರ್ಯವನ್ನು ಮೆಚ್ಚಿದರು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಮಾಜದ ಕೊಡುಗೆಯನ್ನು ಸ್ಮರಿಸಲಾಯಿತು. ಅನೇಕ ಗಣ್ಯರು ಉಪಸ್ಥಿತರಿದ್ದರು.

union minister pralhad joshi supports community thread ceremony

ಸಾಮೂಹಿಕ ಉಪನಯನ ದುಂದುವೆಚ್ಚಕ್ಕೆ ಕಡಿವಾಣ

ವಿಕ ಸುದ್ದಿಲೋಕ ಹುಬ್ಬಳ್ಳಿ

ರಾಜ್ಯದಲ್ಲಿವರದಕ್ಷಿಣೆ ರಹಿತ ಸಮಾಜಕ್ಕೆ ಎಸ್ .ಎಸ್ .ಕೆ. ಸಮಾಜ ಮಾದರಿಯಾಗಿದೆ. 151 ಸಾಮೂಹಿಕ ಉಪನಯನ ಕಾರ್ಯ ಮಾಡುವುದು ಅಷ್ಟು ಸುಲಭವಲ್ಲ. ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಈ ರೀತಿಯ ಕಾರ್ಯಕ್ರಮಗಳು ಅವಶ್ಯವಾಗಿವೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮೆಚ್ಚುಗೆ ವ್ಯಕ್ತಪಡಿಸಿದರು.

ದಾಜೀಬಾನ ಪೇಟೆಯ ಶ್ರೀ ಗಜಾನನ ಉತ್ಸವ ಸಮಿತಿಯ ಹುಬ್ಬಳ್ಳಿ ಕಾ ರಾಜಾ ಸಮಿತಿಯ 50ನೇ ವಾರ್ಷಿಕೋತ್ಸವ ನಿಮಿತ್ತ ಮಂಗಳವಾರ ಗಂಗಾವತಿ ಸಿಲ್ ್ಕ ಪ್ಯಾಲೇಸ್ ಮಂಟಪದಲ್ಲಿನಡೆದ 151 ಸಾಮೂಹಿಕ ಉಪನಯನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಸಾಮೂಹಿಕ ಉಪನಯನದಿಂದ ಸಮಾಜದ ಹಿರಿಯರಾದಿಯಾಗಿ ಸಾವಿರಾರು ಸಂಖ್ಯೆಯ ಜನರ ಆಶೀರ್ವಾದ ಸಿಗುತ್ತದೆ. ಸಾಮೂಹಿಕವಾಗಿ ಉಪನಯನ ಕಾರ್ಯಕ್ರಮ ಮಾಡುತ್ತಾ ಬಂದಿರುವ ಎಸ್ .ಎಸ್ .ಕೆ. ಸಮಾಜವು ಮಾದರಿಯಾಗಿದೆ ಎಂದು ತಿಳಿಸಿದರು.

ಮೂರು ಸಾವಿರಮಠದ ಜ.ಗುರುಸಿದ್ದ ರಾಜಯೋಗೇಂದ್ರ ಶ್ರೀಗಳು ಮಾತನಾಡಿ, ಧಾರ್ಮಿಕ ಕಾರ್ಯಕ್ರಮ ಹಾಗೂ ಧರ್ಮ ರಕ್ಷಣೆಯಲ್ಲಿಎಸ್ ಎಸ್ ಕೆ ಸಮಾಜ ಮಾದರಿಯಾಗಿದೆ. ಧರ್ಮಕ್ಕೆ ಧಕ್ಕೆ ಬಂದರೆ ಎದ್ದು ನಿಲ್ಲುವ ವೀರ ಸಮಾಜವಾಗಿದೆ. ಎಸ್ .ಎಸ್ .ಕೆ. ಸಮಾಜದ ರಕ್ತವು ವೀರ-ಶೂರರ ರಕ್ತವಾಗಿದೆ ಎಂದು ಶ್ಲಾಘಿಘಿಸಿದರು.

ಡಾ.ಶ್ರೀ ಹರಿ ಆಚಾರ್ಯ ವಾಳ್ವೆಕರ, ಆನಂದ ಕಮತಗಿ, ಉದ್ಯಮಿ ಶಂಭು ಹಬೀಬ, ನಾರಾಯಣ ಜಿತೂರಿ, ಮಾಜಿ ಶಾಸಕ ಅಶೋಕ ಕಾಟವೆ, ತಾರಾಸಾ ಧೋಂಗಡಿ, ನೀಲಕಂಠ ಜಡಿ, ಭಾಸ್ಕರ ಜಿತೂರಿ, ಎನ್ .ಎಂ.ಮೆಹರವಾಡೆ, ಗಣಪತಸಾ ಜರತಾರಘರ, ವಿಠ್ಠಲ ಲದ್ವಾ, ಸಿದ್ಧಾರೂಢ ಮಠ ಟ್ರಸ್ಟ್ ಕಮಿಟಿಯ ಚೇರ್ಮನ್ ಬಾಳು ಮಗಜಿಕೊಂಡಿ, ಅಶೋಕ ಹಬೀಬ, ನಾಗೇಶ ಕಲಬುರ್ಗಿ, ಯುವ ಮುಖಂಡ ವೆಂಕಟೇಶ ಕಾಟವೆ, ಅಶೋಕ್ ಭಂಡಾರಿ, ಪಾಲಿಕೆ ಸದಸ್ಯೆ ಸುನಿತಾ ಬುರುಬುರೆ, ಮಾಜಿ ಮೇಯರ್ ಡಿ.ಕೆ. ಚವ್ಹಾಣ, ಪ್ರಕಾಶ ಬುರುಬುರೆ, ಡಿ.ಟಿ.ಮಿಸ್ಕಿನ, ಜಂಪಾಸಾ ಹಬೀಬ್ , ಕೃಷ್ಣ ಕಲಬುರ್ಗಿ, ರಂಗಾ ಬದ್ದಿ, ಸಂಜಯ ಮೆಹರವಾಡೆ ಉಪಸ್ಥಿತರಿದ್ದರು.

ಫೋಟೊ: 14ವಿಜಯ-9

ಹುಬ್ಬಳ್ಳಿ ದಾಜೀಬಾನ ಪೇಟದಲ್ಲಿನಡೆದ 151 ಸಾಮೂಹಿಕ ಉಪನಯನ ಕಾರ್ಯಕ್ರಮವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸಿದರು.