ವಿವೇಕಾನಂದ ಶಾಲೆಗೆ ಶೇ.100 ಫಲಿತಾಂಶ
ಬೀಳಗಿ: ಸಿಬಿಎಸ್ ಇ 10ನೇ ತರಗತಿಯ ಪರೀಕ್ಷೆಯಲ್ಲಿಪಟ್ಟಣದ ವಿವೇಕಾನಂದ ಅಂತಾರಾಷ್ಟ್ರೀಯ ಪಬ್ಲಿಕ್ ಶಾಲೆ ಶೇ. 100ರಷ್ಟು ಫಲಿತಾಂಶ ದಾಖಲಿಸಿದೆ. ಸತತ 7 ವರ್ಷದಿಂದ ಪರೀಕ್ಷೆಯಲ್ಲಿನೂರಕ್ಕೆ ನೂರರಷ್ಟು ಫಲಿತಾಂಶ ದಾಖಲಿಸಿರುವ ವಿವೇಕಾನಂದ ಶಾಲೆ ಗುಣಮಟ್ಟ ಶಿಕ್ಷಣದಲ್ಲಿ ಗಮನ ಸೆಳೆದಿದೆ.
ವಿಶ್ವನಾಥ ಗೌಡರ ಶೇ. 94 , ಪ್ರತೀಕ್ಷಾ ಮೇಟಿ ಶೇ.93, ಶ್ರೇಯಾ ರಾಮಸಾಲಿ ಶೇ. 92 ಅಂಕ ಗಳಿಸಿ ಕ್ರಮವಾಗಿ ಮೂರು ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆ ಸಂಸ್ಥಾಪಕ ಎಂ. ಎನ್ . ಪಾಟೀಲ, ಆಡಳಿತಾಧಿಕಾರಿ ವಿ. ಎಸ್ . ಮೇಟಿ, ಆಡಳಿತ ಮಂಡಳಿಯವರು, ಪ್ರಾಚಾರ್ಯರಾದ ಎಸ್ . ಎಂ. ಕಲಬುರ್ಗಿ ಹಾಗೂ ಶಿಕ್ಷಕ ವೃಂದದವರು ಹರ್ಷ ವ್ಯಕ್ತಪಡಿಸಿದ್ದಾರೆ.

