ಮೀಸಲು ಅಧಿನಿಯಮ ಬೆಂಬಲಿಸಿ ಬೈಕ್ ರಾರ ಯಲಿ

Contributed bymadhugirinews@gmail.com|Vijaya Karnataka

ತುಮಕೂರಿನಲ್ಲಿ ಮಹಿಳಾ ಶಕ್ತಿ ವೇದಿಕೆ ವತಿಯಿಂದ ನಾರಿಶಕ್ತಿ ವಂದನ್ ಅಧಿನಿಯಮವನ್ನು ಬೆಂಬಲಿಸಿ ಬೈಕ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ಲೋಕಸಭೆ ಮತ್ತು ರಾಜ್ಯ ಶಾಸಕಾಂಗ ಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ಈ ಅಧಿನಿಯಮವು ದೇಶದ ಮಹಿಳೆಯರಿಗೆ ಸಲ್ಲುವ ಗೌರವ ಎಂದು ಶಾಸಕ ಜಿ.ಬಿ. ಜ್ಯೋತಿಗಣೇಶ್ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರ ಈ ಹೆಜ್ಜೆಯು ನಿಜವಾದ ಮಹಿಳಾ ಸಬಲೀಕರಣಕ್ಕೆ ನಾಂದಿ ಹಾಡಲಿದೆ.

bike rally in support of womens reservation bjp womens wing initiative

ದೇಶದ ಮಹಿಳೆಯರಿಗೆ ಸಲ್ಲುವ ಗೌರವ: ಜ್ಯೋತಿಗಣೇಶ್

ವಿಕ ಸುದ್ದಿಲೋಕ ತುಮಕೂರು

ಎಲ್ಲಾಕ್ಷೇತ್ರದಲ್ಲೂಸಮರ್ಥವಾಗಿ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ನೀಡಿ ಅವರು ರಾಜ್ಯ, ಕೇಂದ್ರದ ಆಡಳಿತ ನಡೆಸುವ ರಾಜಕೀಯ ಸ್ಥಾನಮಾನ ಕಲ್ಪಿಸುವ ಮಹಿಳಾ ಮೀಸಲಾತಿ ಅಧಿನಿಯಮ ಜಾರಿಯಾಗುತ್ತಿರುವುದು ದೇಶದ ಮಹಿಳೆಯರಿಗೆ ಸಲ್ಲುವ ಗೌರವವಾಗಿದೆ ಎಂದು ಶಾಸಕ ಜಿ.ಬಿ. ಜ್ಯೋತಿಗಣೇಶ್ ಹೇಳಿದರು.

ನಗರದ ಎಸ್ ಐಟಿ ಕಾಲೇಜಿನ ಮುಂಭಾಗ ಮಹಿಳಾ ಶಕ್ತಿ ವೇದಿಕೆ ನೇತೃತ್ವದಲ್ಲಿಲೋಕಸಭೆ ಮತ್ತು ರಾಜ್ಯ ಶಾಸಕಾಂಗ ಸಭೆಗಳಲ್ಲಿಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ನಾರಿಶಕ್ತಿ ವಂದನ್ ಅಧಿನಿಯಮ ಜಾರಿಗೊಳಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಸರಕಾರವನ್ನು ಬೆಂಬಲಿಸಿ ಹಮ್ಮಿಕೊಂಡಿದ್ದ ಮಹಿಳಾ ಬೈಕ್ ರಾರ ಯಲಿಗೆ ಚಾಲನೆ ನೀಡಿ ಮಾತನಾಡಿದ ಅವರು, ಲೋಕಸಭೆ, ರಾಜ್ಯ ಶಾಸಕಾಂಗ ಸಭೆಗಳಲ್ಲಿಮಹಿಳೆಯರಿಗೆ ಪ್ರಾತಿನಿಧ್ಯ ಸಿಗಬೇಕು ಎಂಬ ಬೇಡಿಕೆ ಪ್ರಧಾನಿ ನರೇಂದ್ರ ಮೋದಿಯವರ ಮೂಲಕ ಈಡೇರುತ್ತಿದೆ ಎಂದು ಹೇಳಿದರು.

ಮಹಿಳೆಯರಿಗೆ ದೇಶ ಆಳುವ ಅರ್ಹತೆ, ಸಾಮರ್ಥ್ಯವಿದೆ. ಆಡಳಿತದಲ್ಲಿಮಹಿಳೆಯರ ಸಹಭಾಗಿತ್ವದ ಅವಶ್ಯಕತೆಯೂ ಇದೆ. ಈ ಹಿಂದೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಲೋಕಸಭೆಯಲ್ಲಿಮಹಿಳಾ ಮೀಸಲಾತಿ ಜಾರಿಗೆ ಅಡ್ಡಿಪಡಿಸಿದ್ದರು. ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ದೊರಕಿಸಬೇಕು ಎಂದು ಪ್ರಧಾನಿ ಮೋದಿಯವರ ಸರಕಾರ ಲೋಕಸಭೆಯ ವಿಶೇಷ ಅಧಿವೇಶನದಲ್ಲಿಮಹಿಳಾ ಮೀಸಲಾತಿ ಅಧಿನಿಯಮ ಜಾರಿಗೊಳಿಸಲು ಮುಂದಾಗಿದೆ. ಈ ಮೂಲಕ ನಿಜವಾದ ಮಹಿಳಾ ಸಬಲೀಕರಣ ಸಾಧ್ಯವಾಗುತ್ತದೆ ಎಂದರು.

ಜಿಲ್ಲಾಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸುಮಿತ್ರಮ್ಮ ಮಾತನಾಡಿ, ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ಬೇಕು ಎಂಬ ಆಶಯ ಪ್ರಧಾನಿ ಮೋದಿಯವರ ಸರಕಾರದ ಮೂಲಕ ಈಡೇರುತ್ತಿದೆ. ಅಂತೆಯೇ ಬೈಕ್ ರಾರ ಯಲಿ ನಡೆಸಿ ಮೋದಿ ಅವರನ್ನು ಬೆಂಬಲಿಸಿ, ಅಭಿನಂದಿಸುತ್ತಿದ್ದೇವೆ ಎಂದರು.

ಎಪಿಎಂಸಿ ಮಾಜಿ ಅಧ್ಯಕ್ಷೆ ತಾರಾದೇವಿ, ಜಿಲ್ಲಾಬಿಜೆಪಿ ಕಾರ್ಯದರ್ಶಿ ಜ್ಯೋತಿ ತಿಪ್ಪೇಸ್ವಾಮಿ, ನಗರ ಉಪಾಧ್ಯಕ್ಷೆ ರೇಖಾ ಶಿವಕುಮಾರ್ ಮಾತನಾಡಿದರು.

ಈ ಸಂದರ್ಭದಲ್ಲಿನಗರ ಬಿಜೆಪಿ ಅಧ್ಯಕ್ಷ ಟಿ.ಕೆ. ಧನುಷ್ , ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷಪ್ಪ, ಜಿಲ್ಲಾಯುವ ಮೋರ್ಚಾ ಅಧ್ಯಕ್ಷ ನವಚೇತನ್ , ಮಹಿಳಾ ಮೋರ್ಚಾ ನಗರ ಅಧ್ಯಕ್ಷೆ ವಸಂತ ಸುದರ್ಶನ್ , ಮುಖಂಡರಾದ ಗಣೇಶ್ ಪ್ರಸಾದ್ , ಶೋಭಾ ಅಭಿಲಾಷ್ , ರಕ್ಷಿತ್ , ರಾಧಾ ಗಂಗಾಧರ್ , ಅಂಬಿಕಾ, ಮಂಜುಳಾ ಲೋಕೇಶ್ , ಲತಾಬಾಬು, ಲೀಲಾವತಿ, ನಾಗರತ್ನ ಹಾಜರಿದ್ದರು.

ಫೋಟೋ 15ಕೆಜಿಎಚ್ 15: ತುಮಕೂರು ಎಸ್ ಐಟಿ ಕಾಲೇಜಿನ ಮುಂಭಾಗ ಮಹಿಳಾ ಶಕ್ತಿ ವೇದಿಕೆ ನೇತೃತ್ವದಲ್ಲಿಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ನಾರಿಶಕ್ತಿ ವಂದನ್ ಅಧಿನಿಯಮ ಜಾರಿಗೊಳಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಸರಕಾರವನ್ನು ಬೆಂಬಲಿಸಿ ಮಹಿಳಾ ಬೈಕ್ ರಾರ ಯಲಿ ಹಮ್ಮಿಕೊಳ್ಳಲಾಗಿತ್ತು.