ಕುಂದಾಪುರ: ನಿವೃತ್ತಿ ಹೊಂದಿದ ಪಡುಕೋಣೆ ಗುಡ್ಡೆಯಂಗಡಿ ಸೇನಾಪುರ ಸೈಂಟ್ ಅಂತೋನಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಐವಿ ರೇಗೊ ಅವರನ್ನು ಶಾಲಾ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.
32 ವರ್ಷಗಳ ಸುದೀರ್ಘ ಸೇವೆಯ ಮೂಲಕ ಅಸಂಖ್ಯ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಮುಖ್ಯ ಶಿಕ್ಷಕಿ ಎಂದು ನಿವೃತ್ತ ಶಿಕ್ಷಕಿ ಡೋರಾ ಸುವಾರಿಸ್ ಬಣ್ಣಿಸಿದರು. ಶಾಲೆಯ ಸಂಚಾಲಕ ಧರ್ಮಗುರು ಫ್ರಾನ್ಸಿಸ್ ಕರ್ನೆಲಿಯೊ ಅಧ್ಯಕ್ಷತೆ ವಹಿಸಿದ್ದರು. ಶಾಲಾಭಿವೃದ್ಧಿ ಸಹಕರಿಸುತ್ತಿರುವ ವಿನಯಾ ಮತ್ತು ಮಂಜು ಪೂಜಾರಿ ಸೇನಾಪುರ, ಜಯಂತಿ ಮತ್ತು ಡಾ.ವಿಜಯ್ ಕೃಷ್ಣ ಪಡುಕೋಣೆ ಅವರನ್ನು ಗೌರವಿಸಲಾಯಿತು.
ತಾಲೂಕು ಪಂಚಾಯಿತಿ ಅಧ್ಯಕ್ಷ ಶಂಕರ್ ಶೆಟ್ಟಿ, ಸೇನಾಪುರ ಗ್ರಾಮದ ಸದಸ್ಯರಾದ ಸಂದೀಪ್ ಪೂಜಾರಿ, ಮಂಜು ಪೂಜಾರಿ, ಪ್ರಭುಕೆನಡಿ ಪಿರೇರಾ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಫಾತಿಮಾ ಬೆರೆಟ್ಟೊ ಸ್ವಾಗತಿಸಿದರು ಶಿಕ್ಷಕಿ ರೇವತಿ ಕಾರ್ಯಕ್ರಮ ನಿರ್ವಹಿಸಿದರು. ಮುಖ್ಯ ಶಿಕ್ಷಕಿ ಶಾಂತಿ ಪಾಯಸ್ ವಂದಿಸಿದರು.
ಪೋಟೊ//16ಕೆ-ಪಿಡಿಕೆ/. ನಿವೃತ್ತರಾದ ಮುಖ್ಯ ಶಿಕ್ಷಕಿ ಐವಿ ರೇಗೊ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.

