ವೃತ್ತಿಯಲ್ಲಿಬದ್ಧತೆ ಇಧಿದ್ದರೆ ಯಶಸ್ಸು

Contributed bychowlurmaheshgowda@gmail.com|Vijaya Karnataka

ಹೊಸದುರ್ಗದಲ್ಲಿಶಿಕ್ಷಕರಿಗೆ ದ್ವಿಭಾಷಾ ತರಗತಿ ಬೋಧನೆ ಕುರಿತು ತರಬೇತಿ ನೀಡಲಾಯಿತು. ಚಿತ್ರದುರ್ಗ ಡಯಟ್‌ ಉಪನ್ಯಾಸಕ ಎಸ್‌.ಬಸವರಾಜು ಮಾತನಾಡಿ, ಮಕ್ಕಳಲ್ಲಿಇಂಗ್ಲಿಷ್‌ ಭಾಷಾ ಕೌಶಲ್ಯ ಬೆಳೆಸುವಂತೆ ತಿಳಿಸಿದರು. ವೃತ್ತಿಯಲ್ಲಿಬದ್ಧತೆ ರೂಢಿಸಿಕೊಂಡರೆ ಯಶಸ್ಸು ಸಿಗುತ್ತದೆ ಎಂದರು. 659 ಶಿಕ್ಷಕರಿಗೆ 5 ದಿನಗಳ ತರಬೇತಿ ನೀಡಲಾಗಿದೆ. ಶಿಕ್ಷಕರು ಕಲಿತ ಜ್ಞಾನವನ್ನು ತರಗತಿಯಲ್ಲಿಅನುಷ್ಠಾನ ಮಾಡಬೇಕು ಎಂದು ಬಿಆರ್‌ಸಿ ಶ್ರೀನಿವಾಸ್‌ ಹೇಳಿದರು.

commitment to profession and success training workshop for teachers

ವೃತ್ತಿಯಲ್ಲಿಬದ್ಧತೆ ಇಧಿದ್ದರೆ ಯಶಸ್ಸು

---

ವಿಕ ಸುದ್ದಿಲೋಕ ಹೊಸದುರ್ಗ

ವಿದ್ಯಾರ್ಥಿಗಳಲ್ಲಿಇಂಗ್ಲಿಷ್ ಭಾಷೆಯಲ್ಲಿಅಭಿವ್ಯಕ್ತಿ ಮತ್ತು ಸಂವಹನ ಸಾಮರ್ಥ್ಯ ಬೆಳೆಸಬೇಕು ಎಂದು ಚಿತ್ರದುರ್ಗ ಡಯಟ್ ಉಪನ್ಯಾಸಕ ಎಸ್ .ಬಸವರಾಜು ಹೇಳಿದರು.

ಪಟ್ಟಣದ ಕೆಕೆಬಿಜಿವಿಯಲ್ಲಿತಾಲೂಕಿನ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ದ್ವಿಭಾಷಾ ತರಗತಿ ಬೋಧನೆ ಕುರಿತು ಆಯೋಜಿಸಿದ್ದ ತರಬೇತಿ ಕಾರ್ಯಾಗಾರದ ಸಮಾರೋಪ ಕಾರ್ಯಕ್ರಮದಲ್ಲಿಮಾತನಾಡಿದರು.

ಶಿಕ್ಷಕರು ತರಗತಿ ನಿರ್ವಹಣೆಯಲ್ಲಿಮಕ್ಕಳ ಕಲಿಕಾ ಭಿನ್ನತೆ ಅರ್ಥೈಸಿಕೊಂಡು ನಾನಾ ಚಟುವಟಿಕೆಗಳನ್ನು ಅಳವಡಿಸಿಕೊಂಡು ಬೋಧಿಸಬೇಕು. ಪ್ರಸ್ತುತ ಸಂದರ್ಭದಲ್ಲಿಇಂಗ್ಲಿಷ್ ಭಾಷಾ ಕಲಿಕೆ ಅಗತ್ಯವಾಗಿದ್ದು, ಭಾಷಾ ಕೌಶಲ್ಯಗಳಲ್ಲಿಸಾಮರ್ಥ್ಯ ಬೆಳೆಸಬೇಕು. ನಮ್ಮ ವೃತ್ತಿಯನ್ನು ಪ್ರೀತಿಸಬೇಕು. ನಾವು ವೃತ್ತಿಯಲ್ಲಿಬದ್ಧತೆ ರೂಢಿಸಿಕೊಂಡಾಗ ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ. 1ರಿಂದ 5ನೇ ತರಗತಿಗೆ ಬೋಧಿಸುವ ತಾಲೂಕಿನ 659 ಶಿಕ್ಷಕರಿಗೆ 5 ದಿನಗಳ ತರಬೇತಿ ನೀಡಲಾಗಿದ್ದು, ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು ಎಂದರು.

ಬಿಆರ್ ಸಿ ಶ್ರೀನಿವಾಸ್ ಮಾತನಾಡಿ, ಸಂಪನ್ಮೂಲ ವ್ಯಕ್ತಿಗಳು ಉತ್ತಮವಾಗಿ ತರಬೇತಿ ನೀಡಿದ್ದಾರೆ. ಶಿಕ್ಷಕರು ತರಬೇತಿಯಲ್ಲಿಕಲಿತ ವಿಷಯ ಜ್ಞಾನವನ್ನು ತರಗತಿಯಲ್ಲಿಅನುಷ್ಠಾನ ಮಾಡುವುದರ ಮೂಲಕ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಬೋಧನೆಯಲ್ಲಿಕಂಡುಬರುವ ಸಮಸ್ಯೆಗಳಿಗೆ ಸಂಪನ್ಮೂಲ ವ್ಯಕ್ತಿಗಳ ಜತೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು ಎಂದರು.

ತಾಲೂಕು ನೋಡಲ್ ಅಧಿಕಾರಿ ಸುಜಾತ, ಬಿಆರ್ ಪಿ ರುದ್ರೇಶ್ , ಸುರೇಂದ್ರನಾಯ್ ್ಕ, ಸಂಪನ್ಮೂಲ ವ್ಯಕ್ಯಿಗಳಾದ ಸಂತೋಷ್ ಕುಮಾರ್ , ಕೋಮಲತ, ಪೂರ್ಣಿಮ, ಅನಿತಾ, ವಿಶಾಲಾಕ್ಷಿ, ಚಂದ್ರಕಲಾ, ಅಜೀಮುಲ್ಲಾಷರೀಫ್ , ಸೋಮಶೇಖರ್ , ಲತಾ, ವೆಂಕಟೇಶ್ ಮತ್ತು ಶಿಕ್ಷಕರು ಇದ್ದರು.

16ಎಚ್ .ಎಸ್ .ಡಿ1

ಹೊಸದುರ್ಗ ಪಟ್ಟಣದ ಕೆಕೆಬಿಜಿವಿಯಲ್ಲಿದ್ವಿಭಾಷಾ ತರಗತಿ ಬೋಧನೆ ಕುರಿತು ಆಯೋಜಿಸಿದ್ದ ತರಬೇತಿಯ ಸಮಾರೋಪ ಕಾರ್ಯಕ್ರಮದಲ್ಲಿಭಾಗವಹಿಸಿರುವ ಶಿಕ್ಷಕರು.