ಏ.19ರಂದು ಸಾಸಲು ಚಿನ್ನಮ್ಮ ಉತ್ಸವ

Contributed byadarshkodi15@gmail.com|Vijaya Karnataka

ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯಲ್ಲಿ ಏ.19ರಂದು ಸಾಸಲು ಚಿನ್ನಮ್ಮ ಉತ್ಸವ ಆಯೋಜಿಸಲಾಗಿದೆ. ಡಾ.ಬಿ.ಆರ್‌.ಅಂಬೇಡ್ಕರ್‌ ಪ್ರೌಢಶಾಲೆ ಆವರಣದಲ್ಲಿ ಉತ್ಸವ ನಡೆಯಲಿದೆ. ಜಾನಪದ ಕಲಾ ತಂಡಗಳೊಂದಿಗೆ ಸಾಸಲು ಚಿನ್ನಮ್ಮ ಮೂರ್ತಿಯ ಮೆರವಣಿಗೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಚಾರಗೋಷ್ಠಿ, ನಾಟಕ ಪ್ರದರ್ಶನ ಇರಲಿದೆ. ಹಲವು ಗಣ್ಯರು ಭಾಗವಹಿಸಲಿದ್ದಾರೆ.

sasalu chinnamma utsav grand festival on april 19

ಏ.19ರಂದು ಸಾಸಲು ಚಿನ್ನಮ್ಮ ಉತ್ಸವ

ವಿಕ ಸುದ್ದಿಲೋಕ ದೊಡ್ಡಬಳ್ಳಾಪುರ

ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿ ಕೇಂದ್ರದ ಡಾ.ಬಿ.ಆರ್ .ಅಂಬೇಡ್ಕರ್ ಪ್ರೌಢಶಾಲೆ ಆವರಣದಲ್ಲಿಏ.19 ರಂದು ಸಾಸಲು ಚಿನ್ನಮ್ಮ ಉತ್ಸವ ನಡೆಯಲಿದೆ ಎಂದು ತಾಪಂ ಮಾಜಿ ಅಧ್ಯಕ್ಷ ಲಾವಣ್ಯ ನಾಗರಾಜ್ ತಿಳಿಸಿದರು.

ದೊಡ್ಡಬಳ್ಳಾಪುರ ನಗರದ ಪ್ರವಾಸಿ ಮಂದಿರದಲ್ಲಿನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಸಾಸಲು ಹೋಬಳಿ ಚಿನ್ನಮ್ಮ ಉತ್ಸವ ಸಮಿತಿ ವತಿಯಿಂದ ಮೊದಲ ಬಾರಿಗೆ ನಡೆಯುತ್ತಿರುವ ಸಾಸಲು ಚಿನ್ನಮ್ಮ ಉತ್ಸವ-2026 ಕಾರ್ಯಕ್ರಮವನ್ನು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಡಾ.ಡಿ.ಕೆ.ಚಿತ್ತಯ್ಯ ಪೂಜಾರ್ ಉದ್ಘಾಟಿಸುವರು. ಸಾಸಲು ಚಿನ್ನಮ್ಮ ಉತ್ಸವ ಏ.19ರ ಬೆಳಗ್ಗೆ 8ಕ್ಕೆ ಸಾದ್ವಿಮಣೆ ಸಾಸಲು ಚಿನ್ನಮ್ಮ ದೇವಾಲಯ ಮುಂಭಾಗದಿಂದ ಡಾ.ಬಿ.ಆರ್ . ಅಂಬೇಡ್ಕರ್ ಪ್ರೌಢಶಾಲೆಯ ವೇದಿಕೆ ತನಕ ಜಾನಪದ ಕಲಾ ತಂಡಗಳೊಂದಿಗೆ ಸಾಸಲು ಚಿನ್ನಮ್ಮ ಮೂರ್ತಿಯನ್ನು ಚಿಲಕಲ ಬಂಡಿ ಮೂಲಕ ಮೆರವಣಿಗೆ ನಡೆಯುತ್ತದೆ ಎಂದರು.

ಪ್ರಮುಖರು ಭಾಗಿ:

ಉತ್ಸವದ ಮುಖ್ಯ ವೇದಿಕೆಯಲ್ಲಿಜಾನಪದ ವಿದ್ವಾಂಸರಾದ ಸಣ್ಣ ನಾಗಪ್ಪ ಅವರು ಸಾಸಲು ಚಿನ್ನಮ್ಮ ಪರಿಚಯದ ಕಿರುಪುಸ್ತಕ ಬಿಡುಗಡೆ ಮಾಡುತ್ತಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಧೀರಾಜ್ ಮುನಿರಾಜು, ಮಾಜಿ ಶಾಸಕ ಟಿ.ವೆಂಕಟರಮಣಯ್ಯ, ಕಿಮ್ಸ್ ಆಸ್ಪತ್ರೆ ಮಾಜಿ ಅಧ್ಯಕ್ಷ ಬಿ.ಮುನೇಗೌಡ ಭಾಗವಹಿಸಲಿದ್ದಾರೆ. ದೊಡ್ಡಬಳ್ಳಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ.ಗೋವಿಂದರಾಜು ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನ 12ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿರುತ್ತದೆ. ಸಾಸಲು ಹೋಬಳಿ ಕುರಿತು ಚಿಂತನ-ಮಂಥನ ವಿಚಾರಗೋಷ್ಠಿ , ರಾತ್ರಿ 7 ಗಂಟೆಗೆ ಸಾಸಲು ಚೆನ್ನಮ್ಮ ಕುರಿತ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿದೊಡ್ಡಬಳ್ಳಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ.ಗೋವಿಂದರಾಜು, ಗೌರವ ಕಾರ್ಯದರ್ಶಿ ಎ.ಜಯರಾಮ್ , ಸಾಸಲು ಹೋಬಳಿ ಕಸಾಪ ಘಟಕ ಅಧ್ಯಕ್ಷ ಜಿ.ಎಂ.ನಾಗರಾಜು, ಸಾಸಲು ಚಿನ್ನಮ್ಮ ಉತ್ಸವ ಸಮಿತಿಯ ಮುಖಂಡ, ವಕೀಲ ನರಸಿಂಹಗೌಡ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ , ಗ್ರಾಪಂ ಸದಸ್ಯ ಪಚ್ಚಾರಹಳ್ಳಿ ರಮೇಶ್ , ಉಪನ್ಯಾಸಕ ಕೇಶವಮೂರ್ತಿ, ಚಂದ್ರಶೇಖರ್ ಇದ್ದರು.

ಫೋಟೋ: 1604ವಿಕೆ6: ದೊಡ್ಡಬಳ್ಳಾಪುರದ ಪ್ರವಾಸಿ ಮಂದಿರದಲ್ಲಿಸಾಸಲು ಚಿನ್ನಮ್ಮ ಉತ್ಸವ ಬಗ್ಗೆ ಪೋಸ್ಟರ್ ಬಿಡುಗಡೆ ಮಾಡಲಾಯಿತು.