ಮಾನವ ಹಕ್ಕುಗಳ ಕಿರುಚಿತ್ರ ಸ್ಪರ್ಧೆಗೆ ಪ್ರವೇಶ ಆಹ್ವಾನ

Contributed bymaheshbadiger05@gmail.com|Vijaya Karnataka

ಭಾರತದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು 2026ರ 12ನೇ ಆವೃತ್ತಿಯ ಕಿರುಚಿತ್ರ ಸ್ಪರ್ಧೆಗೆ ಪ್ರವೇಶಗಳನ್ನು ಆಹ್ವಾನಿಸಿದೆ. ದೇಶದ ನಾಗರಿಕರು ಆನ್‌ಲೈನ್ ಮೂಲಕ ತಮ್ಮ ಕಿರುಚಿತ್ರಗಳನ್ನು ಸಲ್ಲಿಸಬಹುದು. ಅತ್ಯುತ್ತಮ ಚಿತ್ರಗಳಿಗೆ 2 ಲಕ್ಷ ರೂ. ವರೆಗೆ ಬಹುಮಾನವಿದೆ. ಹಿಂದಿ ಅಥವಾ ಯಾವುದೇ ಭಾರತೀಯ ಭಾಷೆಯ ಚಿತ್ರಗಳಿಗೆ ಇಂಗ್ಲಿಷ್ ಉಪಶೀರ್ಷಿಕೆ ಕಡ್ಡಾಯ. ಜೂನ್ 30ರೊಳಗೆ ಪ್ರವೇಶ ಸಲ್ಲಿಸಬೇಕು.

human rights short film competition call for entries for the 12th edition

28ಮಹೇಶ7

ಮಾನವ ಹಕ್ಕುಗಳ ಕಿರುಚಿತ್ರ ಸ್ಪರ್ಧೆಗೆ ಪ್ರವೇಶ ಆಹ್ವಾನ

ವಿಕ ಸುದ್ದಿಲೋಕ ಧಾರವಾಡ

ಭಾರತದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ 2015ರಿಂದ ಮಾನವ ಹಕ್ಕುಗಳ ಕುರಿತು ಕಿರುಚಿತ್ರ ಸ್ಪರ್ಧೆಯನ್ನು ನಡೆಸಿಕೊಂಡು ಬರುತ್ತಿದೆ. 2026ರಲ್ಲಿಸ್ಪರ್ಧೆಯ 12ನೇ ಆವೃತ್ತಿಗೆ, ದೇಶದ ನಾಗರಿಕರಿಂದ ಆನ್ ಲೈನ್ ನಲ್ಲಿಪ್ರವೇಶಗಳನ್ನು ಆಹ್ವಾನಿಸಿದೆ. ಮೊದಲ, ಎರಡನೇ ಮತ್ತು ಮೂರನೇ ಅತ್ಯುತ್ತಮ ಚಿತ್ರಕ್ಕೆ ಬಹುಮಾನದ ಮೊತ್ತವು ಕ್ರಮವಾಗಿ 2 ಲಕ್ಷ ರೂ., 1 ಲಕ್ಷ 50 ಸಾವಿರ ರೂ. ಮತ್ತು 1 ಲಕ್ಷ ರೂ. ಆಗಿರುತ್ತದೆ. ಆಯೋಗವು ಮೂರು ನಗದು ಪ್ರಶಸ್ತಿಗಳು, ಪ್ರಮಾಣಪತ್ರಗಳು ಮತ್ತು ಟ್ರೋಫಿಗಳ ಜತೆಗೆ, ತೀರ್ಪುಗಾರರು ಶಿಫಾರಸು ಮಾಡಿದ ಗರಿಷ್ಠ ನಾಲ್ಕು ಚಿತ್ರಗಳಿಗೆ ತಲಾ 50 ಸಾವಿರ ರೂ. ನಗದು ಬಹುಮಾನದೊಂದಿಗೆ ಪ್ರಮಾಣಪತ್ರವನ್ನು ನೀಡಲಾಗುವುದು.

ಕಿರುಚಿತ್ರಗಳು ಹಿಂದಿ ಅಥವಾ ಯಾವುದೇ ಭಾರತೀಯ ಭಾಷೆಯಲ್ಲಿರಹುದು, ಇಂಗ್ಲಿಷ್ ನಲ್ಲಿಉಪಶೀರ್ಷಿಕೆಗಳನ್ನು ಹಾಕಿರಬೇಕು, ಕಿರುಚಿತ್ರದ ಅವಧಿ ಕನಿಷ್ಠ 3 ಮತ್ತು ಗರಿಷ್ಠ 10 ನಿಮಿಷ. ಪ್ರವೇಶಗಳನ್ನು ಸ್ವೀಕರಿಸಲು ಜೂ.30 ಕೊನೆಯ ದಿನವಾಗಿದೆ.

ಎಟಟಜ್ಝಛಿ ಡೈ್ರವ್ ಬಳಸಿ ್ಞh್ಟ್ಚshಟ್ಟಠ್ಛಿಜ್ಝಿಞಃಜಞaಜ್ಝಿ.್ಚಟಞ ಗೆ ಆನ್ ಲೈನ್ ನಲ್ಲಿಕಿರುಚಿತ್ರಗಳನ್ನು ಸ್ಪರ್ಧೆಗೆ ಕಳಿಸಬೇಕು. ನಿಯಮ, ಷರತ್ತು ಮತ್ತು ಅರ್ಜಿ ನಮೂನೆಯ ಪ್ರತಿಗಾಗಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ವೆಬ್ ಸೈಟ್ : hಠಿಠಿps://್ಞh್ಟ್ಚ.್ಞಜ್ಚಿ.ಜ್ಞಿ ಅಥವಾ ಲಿಂಕ್ : hಠಿಠಿps://್ಞh್ಟ್ಚ.್ಞಜ್ಚಿ.ಜ್ಞಿ/್ಛ್ಝಜಿpಚಿಟಟk/್ಛಜ್ಝಿಛಿs/255 ನಿಂದ ಡೌನ್ ಲೋಡ್ ಮಾಡಬಹುದು.

ಮಾನವ ಹಕ್ಕುಗಳ ಸಂಸ್ಕೃತಿ ಮತ್ತು ಸಂವೇದನೆಯನ್ನು ಮೂಡಿಸುವ ಉದ್ದೇಶದ ಈ ಸ್ಪರ್ಧೆಯಲ್ಲಿಸಾರ್ವಜನಿಕರು ಯಾವುದೇ ವಯೋಮಿತಿಯ ನಿಬಂರ್ ಧವಿಲ್ಲದೇ ಭಾಗವಹಿಸಬಹುದು. ಹೆಚ್ಚಿನ ವಿವರಗಳಿಗೆ ದೂ. 011-24663281/24663367 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.