ಗೋರಕ್ಷಣೆ, ಎಲ್ಲರ ಹೊಣೆ
ವಿಕ ಸುದ್ದಿಲೋಕ ಶಿವಮೊಗ್ಗ
ಸನಾತನ ಧರ್ಮದಲ್ಲಿಗೋಮಾತೆ, ಗೋಪೂಜೆ, ಗೋದಾನಕ್ಕೆ ವಿಶೇಷ ಗೌರವವಿದ್ದು, ಗೋ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಟ್ರಸ್ಟಿ ಸುರೇಂದ್ರ ಕುಮಾರ್ ತಿಳಿಸಿದರು.
ಗೋವರ್ಧನ ಟ್ರಸ್ಟ್ ನಿಂದ ನಗರದ ಶುಭಮಂಗಳ ಸಮುದಾಯ ಭವನದ ಆವರಣದಲ್ಲಿಸೋಮವಾರ ಗೋವುಗಳ ಸೇವೆಗೆ ಆಂಬ್ಯುಲೆನ್ಸ್ ಸಮರ್ಪಣೆ, ಗೋಶಾಲೆ , ಸಾವಯವ ಕೃಷಿಕರ ಟ್ರಸ್ಟ್ ಉದ್ಘಾಟನೆ ಮತ್ತು ಗೋಸೇವಾ ಹಿತೈಷಿಗಳಿಗೆ ಅಭಿನಂದನೆ ಹಾಗೂ 11 ಎಕರೆ ಜಾಗದಲ್ಲಿಗೋವಿಗಾಗಿ ಮೇವು ಬಿತ್ತನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗೋವರ್ಧನ ಟ್ರಸ್ಟ್ ಕೇವಲ 4 ತಿಂಗಳಲ್ಲಿಬಹಳಷ್ಟು ಕೆಲಸಗಳನ್ನು ಮಾಡಿದೆ. ನಗರದ ಮೂರು ಗೋಶಾಲೆಗಳಿಗೆ ಮೂಲಸೌಲಭ್ಯ, ಮೇವು ವಿತರಣೆ, ಆಂಬ್ಯುಲೆನ್ಸ್ ಲೋಕಾರ್ಪಣೆ ಜತೆಗೆ 5 ಸಾವಿರಕ್ಕೂ ಹೆಚ್ಚು ಗೋ ಕಾರ್ಯಕರ್ತರನ್ನು ಸಂಘಟಿಸಿರುವುದು ಶ್ಲಾಘನೀಯ. ನಮ್ಮ ಕ್ಷೇತ್ರದಿಂದಲೂ 5 ಲಕ್ಷ ರೂ.ಗಳ ನೆರವನ್ನು ಟ್ರಸ್ಟ್ ಗೆ ನೀಡಿದ್ದೇವೆ. ಎಲ್ಲರೂ ಈ ಕಾರ್ಯಕ್ಕೆ ಸಹಕಾರ ನೀಡಬೇಕು ಎಂದರು.
ಮಾಜಿ ಸಚಿವ ಕೆ.ಎಸ್ . ಈಶ್ವರಪ್ಪ ಮಾತನಾಡಿ, ಧರ್ಮ ಮತ್ತು ಗೋವಿನ ಬಗ್ಗೆ ಅನ್ಯಾಯ ಮಾಡಿದವರು ಶಿಕ್ಷೆ ಅನುಭವಿಸುತ್ತಾರೆ. ಧರ್ಮಸ್ಥಳದ ಬಗ್ಗೆ ಷಡ್ಯಂತ್ರ ಮಾಡಿದವರು ಜೈಲು ಪಾಲಾಗಿದ್ದಾರೆ. ಬಾಂಬ್ ಇಟ್ಟು ಧ್ವಂಸ ಮಾಡಲು ಹೊರಟವನು ಸಹ ಜೈಲು ಪಾಲಾಗಿದ್ದಾನೆ. ಧರ್ಮವಿರೋಧಿ ಕೃತ್ಯ ಮಾಡಿದವರು ಯಾರೂ ಉದ್ಧಾರವಾಗುವುದಿಲ್ಲ ಎಂದರು.
ಗೋವರ್ಧನ ಟ್ರಸ್ಟ್ ಗೆ ನೆರವು ನೀಡಿದ ಗಣ್ಯರನ್ನು ಸನ್ಮಾನಿಸಲಾಯಿತು. ಟ್ರಸ್ಟ್ ಅಧ್ಯಕ್ಷ ಕೆ.ಈ. ಕಾಂತೇಶ್ , ಪ್ರಮುಖರಾದ ನಟರಾಜ್ ಭಾಗವತ್ , ಉಮೇಶ್ ಆರಾಧ್ಯ, ನವ್ಯಶ್ರೀ ನಾಗೇಶ್ , ಎಸ್ .ಕೆ. ಶೇಷಾಚಲ, ಮಹಾಲಿಂಗಯ್ಯ ಶಾಸ್ತ್ರೀ, ರಮೇಶ್ ಜಾಧವ್ ಮತ್ತಿತರರಿದ್ದರು.
=====
26ಎಸ್ ಎಂಜಿಗುರು26
ಶಿವಮೊಗ್ಗದ ಶುಭಮಂಗಳ ಸಮುದಾಯ ಭವನ ಆವರಣದಲ್ಲಿಗೋವರ್ಧನ ಟ್ರಸ್ಟ್ ನ ಗೋವುಗಳ ಆಂಬ್ಯುಲೆನ್ಸ್ ಗೆ ಧರ್ಮಸ್ಥಳದ ಸುರೇಂದ್ರ ಕುಮಾರ್ ಗೋಪೂಜೆ ಸಲ್ಲಿಸಿ ಚಾಲನೆ ನೀಡಿದರು.

