ಬಳ್ಳಾರಿ (ಗ್ರಾಮೀಣ)-ಬಣವೆಗೆ ಬೆಂಕಿ ತಗುಲಿ ಭಸ್ಮ

Contributed byajaykappagalmutt@gmail.com|Vijaya Karnataka

ಬಳ್ಳಾರಿ ಗ್ರಾಮೀಣ ತಾಲೂಕಿನ ಚಾಗನೂರು ಗ್ರಾಮದಲ್ಲಿ ದುರಾದೃಷ್ಟಕರ ಘಟನೆ ನಡೆದಿದೆ. ತುಂಗಭದ್ರಾ ಜಲಾಶಯ ದುರಸ್ತಿಯಿಂದಾಗಿ ರೈತರು ಸಂಗ್ರಹಿಸಿದ್ದ 15ಕ್ಕೂ ಹೆಚ್ಚು ಜೋಳ ಮತ್ತು ಭತ್ತದ ಬಣವೆಗಳಿಗೆ ಬೆಂಕಿ ತಗುಲಿ ಭಸ್ಮವಾಗಿವೆ. ಸುಮಾರು 15 ಲಕ್ಷ ರೂಪಾಯಿ ನಷ್ಟ ಅಂದಾಜಿಸಲಾಗಿದೆ. ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದವು. ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ರೈತರು ಪರಿಹಾರಕ್ಕಾಗಿ ಆಗ್ರಹಿಸಿದ್ದಾರೆ.

over 15 barns destroyed in chaganur village fire incident

ಬಣವೆಗೆ ಬೆಂಕಿ ತಗುಲಿ ಭಸ್ಮ

* 52 ಬಣವೆಗಧಿಳಲ್ಲಿ15ಕ್ಕೂ ಹೆಚ್ಚು ಬಣವೆಗಧಿಳು ಭಸ್ಮ

* ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ

ವಿಕ ಸುದ್ದಿಲೋಕ ಬಳ್ಳಾರಿ (ಗ್ರಾಮೀಣ)

ತುಂಗಭದ್ರಾ ಜಲಾಶಯ ದುರಸ್ತಿಯಿಂದಾಗಿ ಒಂದೇ ಬೆಳೆ ಬೆಳೆದು ಜಾನುವಾರುಗಳಿಗೆ ಆಧಿಹಾಧಿರ ಸಂಗ್ರಹಿಸಿದ್ದ 15ಕ್ಕೂ ಹೆಚ್ಚು ಜೋಳ ಹಾಗೂ ಭತ್ತದ ಬಣವೆಗಳಿಧಿಗೆ ಬುಧಿಧಧಿವಾರ ತಧಿಡಧಿರಾಧಿತ್ರಿ ಬೆಂಕಿ ತಧಿಗುಧಿಲಿ ಭಸ್ಮವಾಗಿರುವ ಘಟನೆ ತಾಲೂಕಿನ ಚಾಗನೂರು ಗ್ರಾಮದಲ್ಲಿನಧಿಡೆಧಿದಿದೆ. ಜಿ.ಗೋಪಾಲ್ , ರೇವಣಸಿದ್ಧ, ತೇಜಮ್ಮ, ರಾಮಚಂದ್ರಪ್ಪ, ರಾಜಾಸಾಬು, ಕಾಜಾಸಾಬು, ಮಹಮದ್ ಸಾಬು, ಪೀರಸಾಬು, ಅಶ್ವಿನಿ, ಭಾಗ್ಯಮ್ಮ, ಕೃಷ್ಣ ಮೂರ್ತಿ, ಸತ್ಯನಾರಾಯಣ ರೆಡ್ಡಿ ಹಾಧಿಗೂ ಇತರರಿಗೆ ಸೇರಿದ್ದ ಬಣವೆಗಳಿಗೆ ಬೆಂಕಿ ತಗುಲಿದೆ. ಸುತ್ತಲಿನಲ್ಲಿದ್ದ 52 ಬಣವೆಗಳ ಪೈಕಿ 15 ಲಕ್ಷ ರೂ. ಮೌಲ್ಯದ 15ಕ್ಕೂ ಹೆಚ್ಚು ಬಣವೆಗಳು ಭಸ್ಮವಾಗಿವೆ. ಬೆಂಕಿ ನಂದಿಸಲು ಬಳ್ಳಾರಿ ಅಗ್ನಿ ಶಾಮಕ ಠಾಣೆಯಿಂದ 2, ಕುರುಗೋಡು- 1, ಜೆಎಸ್ ಡಬ್ಲ್ಯುಯೂ - 2, ಕುಧಿಡಿತಿನಿ ಬಿಟಿಪಿಎಸ್ -1 ಅಗ್ನಿ ಶಾಮಕ ವಾಹನಗಳ ಸಹಾಯದಿಂದ ಸುತ್ತಲಿನ ಇತರೆ ಬಣವೆಗಳಿಗೆ ಬೆಂಕಿ ಹರಡದಂತೆ ನಂದಿಸಲಾಯಿತು. ಬಳಿಕ ಪಾಲಿಕೆಯ 2, ಗ್ರಾಪಂ 1 ಜೆಸಿಬಿಗಳ ಮೂಲಕ ಭಸ್ಮವಾದ ಬಣವೆಗಳ ತೆರವಿಗೆ ಸುಮಾರು 11 ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ಮಾಡಲಾಯಿತು. ಆದಷ್ಟು ಶೀಘ್ರ ಅಧಿಕಾರಿಗಳು ಹಾಗೂ ಸರಕಾರ ಸೂಕ್ತ ಪರಿಹಾರ ಒದಗಿಸಬೇಕೆಂದು ಮಾಲೀಕರು ಆಗ್ರಹಿಸಿದ್ದಾರೆ. ಘಟನಾ ಸ್ಥಳಕ್ಕೆ ತಹಸೀಲ್ದಾರ್ ರೇಖಾ, ಉಪ ತಹಸೀಲ್ದಾರ್ ಮಂಜುನಾಥ್ , ಎಸಿ ರಾಜೇಶ್ , ಕಂದಾಯ ಇಲಾಖೆ ಅಧಿಕಾರಿ ಸೈಯದ್ ಸಿಕಂದರ್ , ಅಗ್ನಿ ಶಾಮಕ ದಳದ ಅಧಿಕಾರಿ ರವೀಂದ್ರ, ನಾನಾ ಗ್ರಾಮಗಳ ವಿಎಗಳಾದ ಚಾಗನೂರು ಬಸವರಾಜ್ , ಸಂಗನಕಲ್ಲುತಿಪ್ಪಯ್ಯ, ಸಿರಿವಾರ ಶಶಿಕುಮಾರ್ , ಡಿ.ನಾಗೇನಹಳ್ಳಿ ಮಲ್ಲಿಕಾರ್ಜುನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

30 ಬಿಎಲ್ ವೈ ಅಜಯ್ 02

ಬಳ್ಳಾರಿ ತಾಲೂಕಿನ ಚಾಗನೂರು ಗ್ರಾಮದಲ್ಲಿ15ಕ್ಕೂ ಹೆಚ್ಚು ಭತ್ತದ ಬಣವೆಗಳಿಗೆ ಬುಧವಾರ ಬೆಂಕಿ ತಗುಲಿರುವುದು.