(ಜಾಹೀರಾತು) ಕೊಡಿಪಾಡಿ: ಪುನರ್ ಪ್ರತಿಷ್ಠಾ ಬ್ರಹ್ಕಕಲಶೋತ್ಸವ ಸಂಪನ್ನ

Contributed bylokeshsurathkal@gmail.com|Vijaya Karnataka

ಕೊಡಿಪಾಡಿ ಶ್ರೀ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಗರೋಡಿಯಲ್ಲಿ ಧರ್ಮರಸು ಉಳ್ಳಾಯ, ಶ್ರೀ ಕೊಡಮಣಿತ್ತಾಯ, ಬ್ರಹ್ಮಬೈದರ್ಕಳ ಮಾಯಂದಾಲೆ ದೈವಗಳ ಪುನರ್‌ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಗುರುವಾರ ವೈಭವದಿಂದ ನಡೆಯಿತು. ತಂತ್ರಿವರೇಣ್ಯರಾದ ದಿನೇಶ್‌ ಪೆಜತ್ತಾಯ ನೇತೃತ್ವ ವಹಿಸಿದ್ದರು. ಧ್ವಜಸ್ಥಂಭ ಕಲಶ, ಶಿಖರ ಕಲಶ, ಪ್ರಸನ್ನ ಪೂಜೆ, ಧರ್ಮದೈವಗಳ ದರ್ಶನ ಸೇವೆ, ಪಲ್ಲಪೂಜೆ, ಅಮೃತವಾಕ್ಯ, ಗಂಧ ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ, ಯಕ್ಷಹಾಸ್ಯ ವೈಭವ, ನವರಸ ನಾಟ್ಯ ಲಾಸ್ಯ, ಧ್ವಜಾರೋಹಣ ಇತ್ಯಾದಿ ಕಾರ್ಯಕ್ರಮಗಳು ನಡೆದವು. ಮೇ 1 ರಿಂದ 3 ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

reinstallation brahmakalashotsava in kodipadi glory of the deities

ವಿಕ ಸುದ್ದಿಲೋಕ ಸುರತ್ಕಲ್

ಸಂಪೂರ್ಣ ಪುನರ್ ನಿಮಾಣಗೊಂಡಿರುವ ಕೊಡಿಪಾಡಿ ಶ್ರೀ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಗರೋಡಿಯ ಶಿಲಾಮಯ ಆಲಯಗಳಲ್ಲಿಶ್ರೀ ಧರ್ಮರಸು ಉಳ್ಳಾಯ, ಶ್ರೀ ಕೊಡಮಣಿತ್ತಾಯ, ಬ್ರಹ್ಮಬೈದರ್ಕಳ ಮಾಯಂದಾಲೆ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಗುರುವಾರ ಬೆಳಗ್ಗೆ 8.02ರ ವೃಷಭ ಲಗ್ನದಲ್ಲಿವೈಭವದಿಂದ ನಡೆಯಿತು.

ಕ್ಷೇತ್ರದ ತಂತ್ರಿವರೇಣ್ಯರಾದ ಮಿಜಾರು ಪೂಮಾವರಗುತ್ತು ದಿನೇಶ್ ಪೆಜತ್ತಾಯ ನೇತೃತ್ವ ವಹಿಸಿದ್ದರು.

ಧ್ವಜಸ್ಥಂಭ ಕಲಶ, ಶಿಖರ ಕಲಶ, ಪ್ರಸನ್ನ ಪೂಜೆ, ಧರ್ಮದೈವಗಳ ದರ್ಶನ ಸೇವೆ, ಪಲ್ಲಪೂಜೆ, ಅಮೃತವಾಕ್ಯ, ಗಂಧ ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ, ಪ್ರಸಿದ್ದ ತಂಡದಿಂದ ಯಕ್ಷಹಾಸ್ಯ ವೈಭವ, ನವರಸ ನಾಟ್ಯ ಲಾಸ್ಯ, ಧ್ವಜಾರೋಹಣ ಇತ್ಯಾದಿ ನಡೆಯಿತು.

ಗರೋಡಿಯ ಯಜಮಾನರು, ಗಡಿ ಪ್ರಧಾನರಾದ ಜಗನ್ನಾಥ ಅತ್ತಾರ್ , ಕ್ಷೇತ್ರಾಡಳಿತ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರೂಪೇಶ್ ರೈ ಕೊೖಕುಡೆ ಬಾಳಿಕೆ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪದ್ಮರಾಜ್ ಆರ್ .ಪೂಜಾರಿ ಕುದ್ರೋಳಿ, ಗೌರವಾಧ್ಯಕ್ಷ ಭುಜಂಗ ಶೆಟ್ಟಿ ಕೊಡಿಪಾಡಿ ಬಾಳಿಕೆ, ಉಪಾಧ್ಯಕ್ಷ ಕಾರ್ತಿಕ್ ಶೆಟ್ಟಿ ಕೊಡಿಪಾಡಿ, ಸಂಚಾಲಕ ಸುರೇಂದ್ರ ಶೆಟ್ಟಿ ಕೊಡಿಪಾಡಿ ಬಾಳಿಕೆ, ಪ್ರಧಾನ ಕಾರ್ಯದರ್ಶಿ ಅಭಿಲಾಷ್ ಚೌಟ ಕೊಡಿಪಾಡಿ ಬಾಳಿಕೆ, ಕಾರ್ಯದರ್ಶಿ ರತನ್ ಶೆಟ್ಟಿ ಸಿಪಾಯಿಮನೆ ಪಡುಬಿದ್ರಿ, ಕೋಶಾಧಿಕಾರಿ ರತನ್ ಶೆಟ್ಟಿ ಕೊಡಿಪಾಡಿ ಬಾಳಿಕೆ, ಪ್ರಮುಖರಾದ ಕೆ.ಪಾಂಡುರಂಗ ಪ್ರಭು, ಸತೀಶ್ ಮುಂಚೂರು, ಪಿ.ಗಣೇಶ್ ಐತಾಳ್ , ಮುಕ್ಕ ನಾನಾ ಕ್ಷೇತ್ರಗಳ ಗಡಿಪ್ರಧಾನರು, ನಾನಾ ಉಪಸಮಿತಿ ಪದಾಧಿಕಾರಿಗಳು, ಕೊಡಿಪಾಡಿಬಾಳಿಕೆ ಮನೆ ಕುಟುಂಬಸ್ಥರು ಉಪಸ್ಥಿತರಿದ್ದರು.

ಇಂದಿನಿಂದ ಗರೋಡಿ ಜಾತ್ರೆ

ಮೇ 1ರಂದು ಬೆಳಗ್ಗೆ 10ರಿಂದ ಧರ್ಮರಸು ಶ್ರೀ ಉಳ್ಳಾಯ ನೇಮ, ರಾತ್ರಿ 8ಕ್ಕೆ ಉತ್ಸವ ಬಲಿ ಅನ್ನ ಸಂತರ್ಪಣೆ, ಶ್ರೀ ಕೊಡಮಣಿತ್ತಾಯ ನೇಮ, ಮೇ 2ರಂದು ರಾತ್ರಿ 8ರಿಂದ ಅನ್ನ ಸಂತರ್ಪಣೆ ಉತ್ಸವ ಬಲಿ, ಶ್ರೀ ಬ್ರಹ್ಮಬೈದರ್ಕಳ ಮಾಯದಾಲೆ ನೇಮ, ಮೇ 3 ರಂದು ಬೆಳಗ್ಗೆ 6ರಿಂದ ಧ್ವಜಾವರೋಹಣ, ಸಂಪ್ರೋಕ್ಷಣೆ ಇತ್ಯಾದಿ ನಡೆಯಲಿದೆ.

30ಕೊಡಿ

ಕೊಡಿಪಾಡಿ ಶ್ರೀ ಕೊಡಮಣಿತ್ತಾಯ, ಶ್ರೀ ಬ್ರಹ್ಮಬೈದರ್ಕಳ ಗರೋಡಿಯಲ್ಲಿಧರ್ಮದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಿತು.

ಓದಲೇ ಬೇಕಾದ ಸುದ್ದಿ