ಮೊಬೈಲ್ ನಿಂದ ಜೀವನೋತ್ಸಾಹ ಕ್ಷೀಣ

Contributed bygururaja.jd@gmail.com|Vijaya Karnataka

ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊಬೈಲ್ ಬಳಕೆ ಹೆಚ್ಚಳದಿಂದ ಯುವಜನತೆಯ ಜೀವನೋತ್ಸಾಹ ಕಡಿಮೆಯಾಗುತ್ತಿದೆ ಎಂದು ನಿವೃತ್ತ ಪ್ರಾಂಶುಪಾಲ ಡಾ. ಸಿ. ಎಸ್‌. ನಂಜುಂಡಯ್ಯ ಹೇಳಿದರು. ಸಾಹಿತ್ಯ, ಸಂಗೀತ ಮನಸ್ಸಿಗೆ ಉಲ್ಲಾಸ ನೀಡುತ್ತವೆ ಎಂದರು. ಬ್ರಿಟಿಷರ ಕಾಲದ ದೌರ್ಜನ್ಯದಿಂದ ದೇಶಭಕ್ತಿ ಮೂಡಿತು. ವಚನಕಾರರು ಅಸಮಾನತೆ, ಮೂಢನಂಬಿಕೆಗಳ ವಿರುದ್ಧ ಧ್ವನಿ ಎತ್ತಿದರು.

how mobile is a threat to our enthusiasm for life

ಮೊಬೈಲ್ ನಿಂದ ಜೀವನೋತ್ಸಾಹ ಕ್ಷೀಣ

ವಿಕ ಸುದ್ದಿಲೋಕ ಶಿವಮೊಗ್ಗ

ಯುವಜನತೆ ಮೊಬೈಲ್ ಮತ್ತು ಇಂಗ್ಲಿಷ್ ಗೆ ಅವಲಂಬಿತರಾಗುತ್ತಿರುವುದು ಕಳವಳಕಾರಿ. ಮೊಬೈಲ್ ನಮ್ಮ ಜೀವನಶೈಲಿ ಬದಲಿಸಿ, ಜೀವನೋತ್ಸಾಹ ಕಡಿಮೆ ಮಾಡುತ್ತದೆ ಎಂದು ನಿವೃತ್ತ ಪ್ರಾಂಶುಪಾಲ ಡಾ. ಸಿ. ಎಸ್ . ನಂಜುಂಡಯ್ಯ ಹೇಳಿದರು.

ಬಾಪೂಜಿ ನಗರದ ಡಾ. ಬಿ. ಆರ್ . ಅಂಬೇಡ್ಕರ್ ವೃತ್ತಿಪರ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿಸೋಮವಾರ ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನಿಂದ ಆಯೋಜಿಸಿದ್ದ ಚಿಂತಾಮಣಿ ಸುಬ್ಬರಾವ್ ಸಾವಿತ್ರಮ್ಮ ಸ್ಮಾರಕ ದತ್ತಿ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.

ವಿದ್ಯಾರ್ಥಿಗಳು ಮೊಬೈಲ್ ಬಳಕೆ ಕಡಿಮೆ ಮಾಡಿ, ಉತ್ತಮ ಹಾಡುಗಳನ್ನು ಕಲಿಯಬೇಕು. ಸಾಹಿತ್ಯ ಮತ್ತು ಸಂಗೀತ ಮನಸ್ಸು ಉಲ್ಲಾಸಗೊಳ್ಳಲು ಅಗತ್ಯವಾಗಿವೆ ಎಂದರು.

ಉಪನ್ಯಾಸಕ ಡಾ.ಸರ್ಫಾಜ್ ರ್ ಚಂದ್ರಗುತ್ತಿ ಮಾತನಾಡಿ, ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿನಡೆದ ಹಿಂಸೆ ಹಾಗೂ ದೌರ್ಜನ್ಯಗಳಿಂದ ಭಾರತೀಯರಲ್ಲಿದೇಶಭಕ್ತಿ ಮೂಡಿತು. ಕನ್ನಡ ಸಾಹಿತ್ಯದಲ್ಲಿರಾಷ್ಟ್ರಕವಿ ಕುವೆಂಪು ಅವರ ಭರತ ಭೂಮಿ ನಮ್ಮ ತಾಯಿ ಹಾಗೂ ನಡೆ ಮುಂದೆ ನಡೆ ಮುಂದೆ ಹಾಡುಗಳನ್ನು ಉಲ್ಲೇಖಿಸಿದರು.

ಲಿಂಗೈಕ್ಯ ಉಚ್ಚಪ್ಲರ ಉಚ್ಚಜ್ಜ ಮತ್ತು ಉಚ್ಚಪ್ಲರ ಹನ್ಮಮ್ಮ ಸ್ಮಾರಕ ದತ್ತಿ ಅಂಗವಾಗಿ ದಾನಿ ಡಾ. ಎಚ್ . ಶಿವಲಿಂಗಪ್ಪ ಆಶಯದಂತೆ, ವಚನ ಕಾರರ ವಚನಗಳ ಮಹತ್ವ ವಿಚಾರವಾಗಿ ಸಹ ಪ್ರಾಧ್ಯಾಪಕಿ ಡಾ. ಜಿ.ಕೆ. ಪ್ರೇಮ ಮಾತನಾಡಿ, ವಚನಕಾರರ ಮಹತ್ವವನ್ನು ವಿವರಿಸಿದರು. ವೇದಪುರಾಣಗಳಲ್ಲಿಸೃಷ್ಟಿಯಾದ ವರ್ಣವ್ಯವಸ್ಥೆ ಹಾಗೂ ಅಸಮಾನತೆ ವಿರುದ್ಧ ವಚನಕಾರರು ಧ್ವನಿ ಎತ್ತಿದರು. ಸ್ತ್ರೀ ಸಮಾನತೆ, ಶ್ರಮದ ಮಹತ್ವ ಮತ್ತು ಮೂಢನಂಬಿಕೆಗಳ ವಿರುದ್ಧ ಜಾಗೃತಿ ಮೂಡಿಸಿದವರೆ ವಚನಕಾರರು ಎಂದರು.

ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ. ಮಂಜುನಾಥ ಕಾರ್ಯಕ್ರಮ ಉದ್ಘಾಟಿಸಿದರು. ವಿದ್ಯಾರ್ಥಿ ನಿಲಯದ ಮೇಲ್ವಿಚಾರಕಿ ಸೈಯದ್ ಬಾನು ಹುಸೇನಿ ಅಧ್ಯಕ್ಷತೆ ವಹಿಸಿದ್ದರು. ಪ್ರಿಯಾಂಕಾ ಸ್ವಾಗತಿಸಿ, ರೇಣುಕಾ ವಂದಿಸಿದರು.

=====

28ಎಸ್ ಎಂಜಿಗುರು4

ಶಿವಮೊಗ್ಗ ಬಾಪೂಜಿ ನಗರದ ಡಾ.ಬಿ.ಆರ್ .ಅಂಬೇಡ್ಕರ್ ವೃತ್ತಿಪರ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿಆಯೋಜಿಸಿದ್ದ ದತ್ತಿ ಉಪನ್ಯಾಸವನ್ನು ಡಿ.ಮಂಜುನಾಥ್ ಉದ್ಘಾಟಿಸಿದರು.