(ವಿಕ ಫೋಕಸ್ ) ತಟ್ಟೆಗೆ ಬಿದ್ದ ಲೈಕು

Contributed byKeerthi Kolgar|Vijaya Karnataka

ಸಾಮಾಜಿಕ ಜಾಲತಾಣಗಳ ಮೋಹ ಯುವಜನರ ಆಹಾರ ಪದ್ಧತಿಯನ್ನು ಬದಲಾಯಿಸುತ್ತಿದೆ. ಲೈಕ್‌ಗಳಿಗಾಗಿ ದೇಹವನ್ನು ವಿನ್ಯಾಸಗೊಳಿಸಿಕೊಳ್ಳುವ ಪ್ರವೃತ್ತಿ ಹೆಚ್ಚಾಗಿದೆ. ಇದರಿಂದಾಗಿ ತಿನ್ನುವ ನಡವಳಿಕೆಯ ಅಸ್ವಸ್ಥತೆ, ಖಿನ್ನತೆ, ಆತಂಕಗಳು ಕಂಡುಬರುತ್ತಿವೆ. ದೇಹದ ಚಿತ್ರಣದ ಬಗ್ಗೆ ಅತಿಯಾದ ಚಿಂತೆ ಆರೋಗ್ಯಕ್ಕೆ ಹಾನಿಕಾರಕವಾಗುತ್ತಿದೆ. ವಾಸ್ತವ ಬದುಕಿಗೂ ರೀಲ್‌ಗಳಿಗೂ ವ್ಯತ್ಯಾಸ ಅರಿಯುವುದು ಮುಖ್ಯವಾಗಿದೆ.

are we all plates the like that falls into the plate of social media

ಸೋಷಿಯಲ್ ಮೀಡಿಯಾ ಬಾಡಿ ಟ್ರ್ಯಾಪ್

- - -

ಇಂಟ್ರೊ: ಸಾಮಾಜಿಕ ಜಾಲತಾಣ ಬಳಕೆ ಮೋಹ ನಮ್ಮ ‘ಊಟದ ತಟ್ಟೆ’ಯನ್ನೂ ಪ್ರಭಾವಿಸುತ್ತಿದೆ. ತಿನ್ನುವ ಆಹಾರ, ತೊಡುವ ಬಟ್ಟೆ, ಮಾತನಾಡುವ ಶೈಲಿ ಎಲ್ಲವನ್ನೂ ಎಲ್ಲೋ ಕುಳಿತ ಸೋ ಕಾಲ್ಡ್ ಆಗಂತುಕ ಸ್ನೇಹಿತರು ನಿರ್ಧರಿಸುತ್ತಿದ್ದಾರೆ. ಎಲ್ಲವೂ ಅಭಿಮಾನಿಗಳಿಗಾಗಿ, ಅನುಯಾಯಿಗಳಿಗಾಗಿ ಎನ್ನುವಂತೆ ಕೆಲವು ಹದಿಹರೆಯದವರು ತಮ್ಮ ದೇಹವನ್ನು ವಿನ್ಯಾಸ ಮಾಡಿಕೊಳ್ಳುತ್ತಿದ್ದಾರೆ. ಇದು ಅವರೊಳಗೆ ಸೋಷಿಯಲ್ ಮೀಡಿಯಾ ಹುಟ್ಟುಹಾಕಿದ ‘ಫುಡ್ ಡಿಸಾರ್ಡರ್ ’.

ಧಿ- - -

- ಆತೀಶ್ ಬಿ.ಕನ್ನಾಳೆ ಶಿವಮೊಗ್ಗ

aaಠಿಜಿsh.ka್ಞ್ಞa್ಝಛಿಃಠಿಜಿಞಛಿsಟ್ಛಜ್ಞಿdಜಿa.್ಚಟಞ

‘‘ಅಬ್ಬಾ! ನಾನು ಇಷ್ಟು ದಪ್ಪ ಇದೀನಾ, ಸೊಂಟದ ಟಯರ್ ನೋಡು ಹೇಗಿದೆ! ಹೇ... ನಂಗೆ ಸರಿಯಾಗಿ ಮಸಲ್ಸೇ ಇಲ್ವಲ್ಲ... ನನ್ನ ಬಗ್ಗೆ ಸೋಷಿಯಲ್ ಮೀಡಿಯಾ ಫಾಲೋವರ್ಸ್ ಏನು ಅನ್ಕೊಬೇಡ? ಅದಕ್ಕಾಗಿಯಾದರೂ ಸಣ್ಣ ಆಗಬೇಕು. ಸರಿಯಾಗಿ ಜಿಮ್ ಮಾಡಿ ಬಾಡಿ ಬಿಲ್ಡ್ ಮಾಡ್ಕೋಬೇಕು.’’

ಕುಂತ್ರೆ, ನಿಂತ್ರೆ ಸೋಷಿಯಲ್ ಮೀಡಿಯಾದ್ದೇ ಧ್ಯಾನ. ಊಟದ ತಟ್ಟೆ ಮುಂದೆ ಕುಳಿತಾಗಲೂ ಅದರದ್ದೇ ಚಿಂತೆ. ಇದು ಬಹುತೇಕ ಹದಿಹರೆಯರ ಮನಸ್ಸಿನ ಈಗಿನ ತುಮುಲ. ಫೇಸ್ ಬುಕ್ , ಇನ್ ಸ್ಟಾಗ್ರಾಂನಲ್ಲಿಹೆಚ್ಚೆಚ್ಚು ಲೈಕ್ ಬರಬೇಕು. ‘‘ನನ್ ಸ್ನೇಹಿತೆ ಪ್ರಮ್ಮಿಗಿಂತ ಅಧಿಕ ಫಾಲೋವರ್ಸ್ ನಂಗಿರಬೇಕು. ಅಜಯ್ ದು ಫಿಸಿಕ್ ನೋಡು ಹೇಗಿದೆ? ಒಂದು ಫೋಟೊ ಇನ್ ಸ್ಟಾಗೆ ಬಿಟ್ಟರೆ ಸಾವಿರಾರು ಜನ ಲೈಕ್ ಮಾಡ್ತಾರೆ. ಇದೆಲ್ಲನಾನೂ ಮಾಡಬೇಕು...’’. ಈ ತುಮುಲದಿಂದ ಶುರುವಾಗುವ ಸಾಮಾಜಿಕ ಜಾಲತಾಣದ ಗೀಳು ‘ಗೋಳಾ’ಗಿ ಮಾರ್ಪಡುತ್ತಿದೆ. ಹದಿಹರೆಯರ ಈ ಮಾನಸಿಕ ಸ್ಥಿತಿ ಮನಗಂಡೇ ಕೆಲವು ಮೊಬೈಲ್ ಕಂಪನಿಗಳು ಸ್ಮಾರ್ಟ್ ಫೋನ್ ಗಳಲ್ಲಿ‘ಫಿಲ್ಟರ್ ’ಗೆ ಎಲ್ಲಿಲ್ಲದ ಆದ್ಯತೆ ನೀಡುತ್ತಿವೆ.

ಸಾಮಾಜಿಕ ಜಾಲತಾಣ ಹದಿಹರೆಯರ ತಟ್ಟೆಗೂ ಕೈಹಾಕಿ, ಆಹಾರ ಪದ್ಧತಿಯನ್ನೇ ಬದಲಿಸುತ್ತಿದೆ. ಕೋಲ್ಕೊತಾ ವಿಶ್ವವಿದ್ಯಾಲಯದ ತೋಟಗಾರಿಕೆ ವಿಭಾಗದ ಸಂಶೋಧನಾರ್ಥಿಗಳು ‘ಆಹಾರ ಪದ್ಧತಿಯ ಮೇಲೆ ಸಾಮಾಜಿಕ ಮಾಧ್ಯಮದ ಪ್ರಭಾವ’ ವಿಷಯ ಕುರಿತು ಇತ್ತೀಚೆಗೆ ಕೈಗೊಂಡ ಅಧ್ಯಯನದ ಪ್ರಕಾರ, ಸಂಶೋಧನೆಗೆ ಒಳಪಟ್ಟ ವಿದ್ಯಾರ್ಥಿಗಳ ಪೈಕಿ ಶೇ.43ರಷ್ಟು ಸಾಮಾನ್ಯವಾಗಿ ಮನೆಯಲ್ಲಿತಯಾರಿಸಿದ ಆಹಾರವನ್ನು ಸೇವಿಸಿದರೆ, ಶೇ.53ರಷ್ಟು ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮದಿಂದ ಪ್ರಭಾವಿತರಾಗಿ ದೈನಂದಿನ ಆಹಾರದಲ್ಲಿಹೊಸ ಪದ್ಧತಿಯನ್ನು ರೂಢಿಸಿಕೊಂಡಿದ್ದಾರೆ.

ಅದೇ ರೀತಿ, ಟರ್ಕಿಯ ಸಂಶೋಧಕ ಗಾಮ್ಝೆ ಯುತ್ ರ್ ದಾಸ್ ಡೆಪ್ಪಾಯ್ಲು, ಗುಲ್ಸಾ ಕನೆರ್ ಮತ್ತು ಸೆಮಿಹಾ ಓಜ್ಕಾಕಲ್ ಅವರು ನಡೆಸಿದ ಅಧ್ಯಯನದಲ್ಲಿಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯು ಅನಾರೋಗ್ಯಕರ ಆಹಾರ ಪದ್ಧತಿಯನ್ನು ರೂಢಿಸಿದೆ. ರೀಲ್ಸ್ ಗಳಲ್ಲಿತಾನು ಚೆನ್ನಾಗಿ ಕಾಣಬೇಕೆಂಬ ಕಲ್ಪನೆಯೊಂದಿಗೆ ಅನೇಕರು ಆಹಾರ ಸೇವನೆಯನ್ನೇ ಕಡಿಮೆ ಮಾಡುತ್ತಿರುವುದು ಪತ್ತೆಯಾಗಿದೆ.

ಅಧ್ಯಯನದ ವೇಳೆ 1,200ಕ್ಕೂ ಹೆಚ್ಚು ಪ್ರೌಢಶಾಲಾ ವಿದ್ಯಾರ್ಥಿಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ಇವರಲ್ಲಿಬಹುತೇಕರು ಬಾಲಕಿಯರಿದ್ದಾರೆ. ಹುಡುಗರಿಗಿಂತ ಹುಡುಗಿಯರು ಸಾಮಾಜಿಕ ಜಾಲತಾಣದಲ್ಲಿಹೆಚ್ಚು ಆಕರ್ಷಣೆಗೆ ಒಳಗಾಗುವುದರಿಂದ ತನ್ನ ಫಾಲೋವರ್ಸ್ಗಳಿಗೆ ಚೆನ್ನಾಗಿ ಕಾಣಬೇಕೆಂಬ ಖಯಾಲಿಯಲ್ಲಿಪೌಷ್ಟಿಕಾಂಶ ಆಹಾರದ ಬಗ್ಗೆಯೇ ಸದಾ ಯೋಚಿಸುವುದು, ಗೂಗಲ್ ನಲ್ಲಿಅದನ್ನೇ ಹುಡುಕುವುದು ಮತ್ತು ಸೇವನೆಗೆ ಒತ್ತು ನೀಡುತ್ತಿದ್ದಾರೆ. ಇದರಿಂದ ಬಾಲಕಿಯರಲ್ಲಿಹೆಚ್ಚು ‘ತಿನ್ನುವ ನಡವಳಿಯ ಅಸ್ವಸ್ಥತೆ’ ಕಂಡುಬಂದಿದೆ. ಈ ಸ್ಪರ್ಧೆಯಲ್ಲಿಹುಡುಕರೂ ಹಿಂದೇನುಳಿದಿಲ್ಲ!

- - -

ಹೋಲಿಕೆಯ ಬಲೆಯೊಳಗೆ...

ಸ್ನೇಹಿತರು ಸಾಮಾಜಿಕ ಜಾಲತಾಣದಲ್ಲಿಚೆನ್ನಾಗಿರುವ ರೀಲ್ಸ್ ಅಥವಾ ಚಿತ್ರ ಹಾಕಿದರೆ ಅಲ್ಲಿಂದ ಶುರುವಾಗುವ ‘ಹೋಲಿಕೆ’ಯ ಫಲವೇ ‘ಕರುಬುವಿಕೆ’. ಈ ಬಲೆಗೆ ಸಿಲುಕುವ ಯುವಕ, ಯುವತಿಯರ ಮಾನಸಿಕ ಆರೋಗ್ಯ ಹದಗೆಡುತ್ತಿದೆ. ಖಿನ್ನತೆ, ಆತಂಕಕ್ಕೆ ಸಿಲುಕುತಿದ್ದಾರೆ. ಇದೇ ಗೀಳಾಗಿ ಮಾರ್ಪಟ್ಟು ನಿದ್ರಾಹೀನತೆ, ನಿರ್ಬಂಧಿತ ಆಹಾರ ಕ್ರಮಕ್ಕೆ ಒಳಗಾಗುತ್ತಿದ್ದಾರೆ.

* ಸೌಂದರ್ಯ ಆದರ್ಶ ಉತ್ತೇಜನ: ಸಾಮಾಜಿಕ ಕಾರ್ಯಕರ್ತರಾದ ಬ್ರಿಟಾನಿ ಹೈಡ್ ನಡೆಸಿದ ಅಧ್ಯಯನವಿದು. ‘ಸಾಮಾಜಿಕ ಮಾಧ್ಯಮ ವಿದ್ಯಾರ್ಥಿಗಳ ಆಹಾರ ಕ್ರಮದ ಮೇಲೆ ನೇರ ಪರಿಣಾಮ ಬೀರುತ್ತಿದೆ. ಇವು ತಮ್ಮ ದೇಹದೆಡೆಗಿನ ಸೌಂದರ್ಯ ಆದರ್ಶವನ್ನು ಪ್ರೇರೇಪಿಸುತ್ತಿವೆ. ಸೈಬರ್ ಬುಲ್ಲಿಂಗನ್ನು ಸಕ್ರಿಯಗೊಳಿಸುತ್ತಿವೆ, ಸಹವರ್ತಿಯೊಂದಿಗೆ ಅತಿಯಾದ ಹೋಲಿಕೆಗೆ ಉತ್ತೇಜಿಸುತ್ತಿವೆ. ಸಾಮಾಜಿಕ ಮಾಧ್ಯಮಗಳಲ್ಲಿಖಾತೆಗಳನ್ನು ಹೊಂದಿರುವ 13-14 ವರ್ಷದ ಶೇ.51.7 ಹುಡುಗಿಯರ ತಿನ್ನುವ ನಡವಳಿಕೆಯಲ್ಲಿಗಮನಾರ್ಹ ಬದಲಾವಣೆಗಳು ವರದಿಯಾಗಿವೆ. ಅದೇ ವಯಸ್ಸಿನ ಶೇ.45ರಷ್ಟು ಹುಡುಗರಲ್ಲೂಇಂಥದ್ದೇ ಬದಲಾವಣೆಗಳು ಕಂಡುಬಂದಿವೆ. ಹದಿಹರೆಯದಲ್ಲಿಅನಾರೋಗ್ಯಕರ ಆಹಾರ ಪದ್ಧತಿ ಮತ್ತು ವ್ಯಾಯಾಮ ಅಭ್ಯಾಸಗಳಿಗೆ ಒಳಗಾಗುತ್ತಿದ್ದಾರೆ. ನೋಡಲು ಕೃಷಕಾಯದಂತಿದ್ದರೂ ಇನ್ನೂ ಸ್ಲಿಮ್ ಆಗಿ ಕಾಣಬೇಕೆಂದು ಊಟದಿಂದ ದೂರ ಉಳಿಯುತ್ತಿದ್ದಾರೆ. ಆಹಾರ ಕೇಂದ್ರಿತ ಇನ್ ಸ್ಟಾಗ್ರಾಂ ಖಾತೆಗಳನ್ನು ಅನುಸರಿಸುತ್ತಿರುವ ಶೇ.49ರಷ್ಟು ಯುವಜನರಲ್ಲಿ‘ಅನೋರೆಕ್ಸಿಯಾ ನರ್ವೋಸಾ’ (ಆಹಾರ ಸೇವನೆ ಅನಾರೋಗ್ಯ)ದ ಲಕ್ಷಣಗಳು ಪತ್ತೆಯಾಗಿವೆ.

- - -

(ಬಾಕ್ಸ್ )

ದೇಹವೇ ಈಗ ಪ್ರಯೋಗಶಾಲೆ

* ಬುಲಿಮಿಯಾ ನರ್ವೋಸಾ (ಆ್ಠ್ಝಜಿಞಜಿa Nಛ್ಟಿvಟsa)

ಇದು ಗಂಭೀರ ಸಮಸ್ಯೆ. ಒಂದು ಹಂತದಲ್ಲಿಅತಿಯಾದ ಆಹಾರ ಸೇವಿಸುವುದು ನಂತರ ತೂಕ ಹೆಚ್ಚಾಗುವುದನ್ನು ತಡೆಯಲು ಬಲವಂತದ ವಾಂತಿ, ವಿರೇಚಕಗಳ ಬಳಕೆ ಅಥವಾ ಅತಿ ವ್ಯಾಯಾಮ ಮಾಡಲಾಗುತ್ತದೆ. ತಿಂದು ವಾಂತಿಯಾಗುವುದರಿಂದ ಗಂಟಲು ನೋವು, ಹಲ್ಲುಗಳ ಸವೆತ, ನಿರ್ಜಲೀಕರಣ, ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಸೋಷಿಯಲ್ ಮೀಡಿಯಾದಲ್ಲಿತೆಳ್ಳಗೆ ಕಾಣಬೇಕೆಂಬ ಸಾಮಾಜಿಕ ಒತ್ತಡದಿಂದಾಗಿ ಆರೋಗ್ಯಕ್ಕೆ ಪೂರಕವಲ್ಲದ ಪ್ರಕ್ರಿಯೆಗೆ ಒಳಗಾಗುವುದರಿಂದ ಮಾನಸಿಕ ಒತ್ತಡ, ಹೃದಯ ಸಂಬಂಧಿ ಕಾಯಿಲೆ, ಮೂತ್ರಪಿಂಡದ ಸಮಸ್ಯೆ, ಆತ್ಮವಿಶ್ವಾಸದ ಕೊರತೆ ಉಂಟಾಗುತ್ತದೆ.

* ಅನೋರೆಕ್ಸಿಯಾ ನರ್ವೋಸಾ (ಅ್ಞಟ್ಟಛ್ಡಿಜಿa Nಛ್ಟಿvಟsa)

ಇದು ಕೂಡ ಒಂದು ಈಟಿಂಗ್ ಡಿಸಾರ್ಡರ್ . ತೂಕ ಹೆಚ್ಚುತ್ತದೆ ಎಂಬ ಭಯದಿಂದ ಆಹಾರ ಸೇವನೆಯನ್ನು ಕಟ್ಟುನಿಟ್ಟಾಗಿ ಕಡಿಮೆ ಮಾಡುವುದು, ತಾನು ದಪ್ಪಗಿದ್ದೇನೆಂದು ಭಾವಿಸಿ ಕ್ಯಾಲೊರಿಗಳನ್ನು ಎಣಿಸಿ, ಲೆಕ್ಕಾಚಾರ ಹಾಕಿ, ತೂಗಿ ಅಳತೆ ಮಾಡಿ ಸೇವಿಸುವ ಪ್ರಭೇದದವರಿವರು. ಇದರಿಂದ ದೇಹದಲ್ಲಿಪೋಷಕಾಂಶಗಳ ಕೊರತೆ, ಹೃದಯ ಸಮಸ್ಯೆಗಳು, ಮೂಳೆಸಾಂದ್ರತೆ ಕಡಿಮೆ, ಕೂದಲು ಉದುರುವುದು, ಖಿನ್ನತೆ ಕಾಣಿಸಿಕೊಳ್ಳಬಹುದು. ತಜ್ಞ ಮನೋವೈದ್ಯರಲ್ಲಿಇದಕ್ಕೆ ಚಿಕಿತ್ಸೆ ಪಡೆಯಬಹುದು. ಈ ಎರಡು ಸ್ಥಿತಿಗಳು ಆಳವಾದ ಭಾವನಾತ್ಮಕ ಸಂಘರ್ಷದಂತಿವೆ.

- - -

ಬದುಕು ರೀಲ್ ಅಲ್ಲ...

ರೀಲ್ ಮತ್ತು ರಿಯಲ್ ಬದುಕಿನ ಮಧ್ಯೆ ಸಾಕಷ್ಟು ವ್ಯತ್ಯಾಸ ಇದೆ. ಆದರೆ, ಈಗಿನ ಮಕ್ಕಳಿಗೆ ಕಾಲ್ಪನಿಕ ಮತ್ತು ವಾಸ್ತವದ ಕಲ್ಪನೆ ಗೊತ್ತಾಗುತ್ತಿಲ್ಲ. ನಿತ್ಯ ಇಷ್ಟು ಲೈಕ್ ಹಾಗೂ ಫ್ರೆಂಡ್ ರಿಕ್ವೆಸ್ಟ್ ಬರಬೇಕು. ಇಲ್ಲದಿದ್ದರೆ ಖಿನ್ನತೆಗೆ ಒಳಗಾಗುವವರೂ ಇದ್ದಾರೆ. ಸೋಷಿಯಲ್ ಮೀಡಿಯಾ ಸ್ನೇಹಿತರ ನಡುವೆ ಇವರು ‘ಒಂಟಿ’ಗಳಾಗಿದ್ದಾರೆ. ಪರಿಣಾಮ ಸಾಮಾಜಿಕ ಕೌಶಲ ಕಡಿಮೆ ಕಳೆದುಕೊಳ್ಳುತ್ತಿದ್ದಾರೆ. ವಿಚಿತ್ರವೆಂದರೆ, ಕೆಲವರು ಆಹಾರ ಸೇವಿಸುವ ತಟ್ಟೆಯ ಚಿತ್ರವನ್ನೂ ಸಾಮಾಜಿಕ ಜಾಲತಾಣದಲ್ಲಿಹಂಚಿಕೊಳ್ಳುತ್ತಾರೆ. ಕ್ಯಾಲೊರಿ ಲೆಕ್ಕ ಹಾಕಿ ಸೇವಿಸುವವರೂ ಇದ್ದಾರೆ. ಸಮತೋಲಿನ ಆಹಾರದಿಂದ ದೂರ ಸರಿದು, ಆರೋಗ್ಯದ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ. ನಾನು ಎಂದರೆ ನನ್ನ ಪೂರ್ಣ ವ್ಯಕ್ತಿತ್ವವೇ ವಿನಾ ದೇಹ, ಬಣ್ಣ, ಗಾತ್ರ ಅಲ್ಲಎಂಬುದನ್ನು ಮಕ್ಕಳು ಅರಿತುಕೊಳ್ಳಬೇಕು. ಬಾಡಿ ಇಮೇಜ್ ನಡುವೆ ಕಳೆದುಹೋಗಬಾರದು. ಈಗ ಎಲ್ಲದಕ್ಕೂ ಸಾಮಾಜಿಕ ಜಾಲತಾಣ ಬೇಕು. ನಿರ್ದಿಷ್ಟ ಗುರಿಗೆ ಬಳಸಿದರೆ ಅನುಕೂಲ ಅಧಿಕ.

- ಡಾ. ಕೆ.ಎಸ್ . ಶುಭ್ರತಾ, ಮನೋವೈದ್ಯರು, ಶಿವಮೊಗ್ಗ

(ಫೋಟೊ: 50ಎಸ್ ಎಂಜಿ50 ಡಾ ಕೆ ಎಸ್ ಶುಭ್ರತಾ)

===

ಭಾರತದಲ್ಲಿಸಾಮಾಜಿಕ ಜಾಲತಾಣ ಬಳಕೆದಾರರು

* 90 ಕೋಟಿ (ಫೇಸ್ ಬುಕ್ 6.79 ಕೋಟಿ, ಇನ್ ಸ್ಟಾಗ್ರಾಂ 5.17 ಕೋಟಿ)

* ಪುರುಷ ಶೇ.64.4, ಮಹಿಳೆ ಶೇ.35.6

* 14-25 ವರ್ಷದವರಲ್ಲಿಸಂಭವನೀಯ ಆಹಾರ ಅನಾರೋಗ್ಯ: ಶೇ.42 (ಅಸಹಜ ತಿನ್ನುವ ಅನಾರೋಗ್ಯ: ಶೇ.22)

* ಸೋಷಿಯಲ್ ಮೀಡಿಯಾ ಬಳಕೆ: ನಿತ್ಯ 2 ಗಂಟೆ 36 ನಿಮಿಷ (12-29 ವರ್ಷದವರು)

* ಮೊಬೈಲ್ ವೀಕ್ಷಣೆ ಪ್ರಮಾಣ: ನಿತ್ಯ 58 ಸಲ

* ಸಕ್ರಿಯ ಬಳಕೆದಾರರು: 4.91 ಕೋಟಿ