ಸಫಲಾಂಬ ದೇವಿ ದೇಗುಲ ಪ್ರತಿಷ್ಠಾಪನಾ ಮಹೋತ್ಸವ

Contributed bysri.vknews@gmail.com|Vijaya Karnataka

ಲಕ್ಕೂರು ಹೋಬಳಿಯ ಬಂಟಹಳ್ಳಿ ಗ್ರಾಮದಲ್ಲಿ ನೂತನ ಶ್ರೀ ಸಫಲಾಂಬ ದೇವಿ ದೇವಾಲಯದ ಪ್ರತಿಷ್ಠಾಪನಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ಶ್ರೀ ಸಫಲಾಂಬ ದೇವಿಯ ಉತ್ಸವ ಮೂರ್ತಿಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಮಾಜಿ ಶಾಸಕ ಕೆ.ಎಸ್‌.ಮಂಜುನಾಥ್‌ ಗೌಡ ಅವರು ದೇವಾಲಯಕ್ಕೆ ಭೇಟಿ ನೀಡಿ ದೇವಿಗೆ ಪೂಜೆ ಸಲ್ಲಿಸಿದರು.

sri saphalamba temple installation festival

ಸಫಲಾಂಬ ದೇವಿ ದೇಗುಲ ಪ್ರತಿಷ್ಠಾಪನಾ ಮಹೋತ್ಸವ

ವಿಕ ಸುದ್ದಿಲೋಕ ಲಕ್ಕೂರು

ಲಕ್ಕೂರು ಹೋಬಳಿಯ ಬಂಟಹಳ್ಳಿ ಗ್ರಾಮದಲ್ಲಿನೂತನವಾಗಿ ನಿರ್ಮಿಸಿರುವ ಶ್ರೀಸಫಲಾಂಬ ದೇವಿ ದೇವಾಲಯದ ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ದೇವಾಲಯದಲ್ಲಿಪೂಜಾ ಕಾರ ್ಯಕ್ರಮಗಳು ನಡೆಯಿತು.

ಮಾಲೂರು ತಾಲೂಕಿನ ಗಡಿಭಾಗ ಹಾಗೂ ತಮಿಳುನಾಡು ಗಡಿಗೆ ಹೊಂದಿಕೊಂಡಿರುವ ಡಿ.ಎನ್ .ದೊಡ್ಡಿ ಗ್ರಾಪಂ ವ್ಯಾಪ್ತಿಯ ಬಂಟಹಳ್ಳಿ ಗ್ರಾಮದಲ್ಲಿಸಾರ್ವಜನಿಕರು ಹಾಗೂ ಭಕ್ತಾದಿಗಳ ಸಹಕಾರದಿಂದ ಶ್ರೀಸಫಲಾಂಬ ದೇವಿ ದೇವಾಲಯವನ್ನು ನಿರ್ಮಿಸಿದ್ದು, ದೇವಾಲಯದ ಪ್ರತಿಷ್ಠಾಪನೆ, ಶಿಲಾ ಬಿಂಬ ಮಹೋತ್ಸವ ಪೂಜಾ ಕಾರ ್ಯಕ್ರಮದ ಅಂಗವಾಗಿ ದೇವಾಲಯದ ಪ್ರಧಾನ ಅರ್ಚಕರ ನೇತೃತ್ವದಲ್ಲಿಹಲವು ರೀತಿಯ ಪೂಜಾ ಕೈಂಕರ ್ಯಗಳು ನಡೆಯಿತು.

ಶ್ರೀಸಫಲಾಂಬ ದೇವಿಯ ಉತ್ಸವ ಮೂರ್ತಿಗೆ ವಿಶೇಷ ಹೂವಿನ ಅಲಂಕಾರ ಮಾಡಿ ಮಂಗಳವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿಮೆರವಣಿಗೆ ಮಾಡಲಾಯಿತು. ಶ್ರೀಸಫಲಾಂಬ ದೇವಿಯ ನೂತನ ದೇವಾಲಯ ಪ್ರತಿಷ್ಠಾಪನಾ ಕಾರ ್ಯಕ್ರಮದ ಅಂಗವಾಗಿ ಬಂಟಹಳ್ಳಿ ಗ್ರಾಮದ ಮಹಿಳೆಯರು ದೇವಿಗೆ ಆರತಿ, ತಂಬಿಟ್ಟು, ದೀಪಗಳನ್ನು ವಿಶೇಷ ಅಲಂಕಾರದೊಂದಿಗೆ ತಲೆಯ ಮೇಲೆ ಹೊತ್ತು ಗ್ರಾಮದ ಪ್ರಮುಖ ಬೀದಿಗಳಲ್ಲಿಮೆರವಣಿಗೆಯ ಮೂಲಕ ದೇವಾಲಯಕ್ಕೆ ಆಗಮಿಸಿ ದೇವರಿಗೆ ಹರಿಕೆಯನ್ನು ಸಲ್ಲಿಸಿದರು. ದೇವಾಲಯಕ್ಕೆ ಆಗಮಿಸಿದ ಭಕ್ತಾದಿಗಳಿಗೆ ದೇವಾಲಯ ಸಮಿತಿಯ ವತಿಯಿಂದ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.

ಇದೇ ಸಂದರ್ಭದಲ್ಲಿಮಾಜಿ ಶಾಸಕ ಕೆ.ಎಸ್ .ಮಂಜುನಾಥ್ ಗೌಡ ಅವರು ತಮ್ಮ ಬೆಂಬಲಿಗರೊಂದಿಗೆ ಂಟಹಳ್ಳಿ ಗ್ರಾಮದಲ್ಲಿನೂತನವಾಗಿ ನಿರ್ಮಾಣವಾಗಿರುವ ಶ್ರೀಸಫಲಾಂಬ ದೇವಿ ದೇವಾಲಯಕ್ಕೆ ಭೇಟಿ ನೀಡಿ ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು. ಶ್ರೀಸಫಲಾಂಬ ದೇವಿಯ ಉತ್ಸವ ಮೂರ್ತಿಯ ಮೆರವಣಿಗೆಯಲ್ಲೂಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿಗ್ರಾಮಸ್ಥರು ಮಾಜಿ ಶಾಸಕ ಕೆ.ಎಸ್ .ಮಂಜುನಾಥ್ ಗೌಡ ಅವರನ್ನು ಅಭಿನಂದಿಸಿದರು.

30 ಲಕ್ಕೂರು ಪೋಟೊ 1. ಮಾಲೂರು ತಾಲೂಕಿನ ಡಿ.ಎನ್ .ದೊಡ್ಡಿ ಗ್ರಾಪಂ ವ್ಯಾಪ್ತಿಯ ಬಂಟಹಳ್ಳಿ ಗ್ರಾಮದಲ್ಲಿಸಾರ್ವಜನಿಕರು ಹಾಗೂ ಭಕ್ತಾದಿಗಳ ಸಗಹಕಾರದಿಂದ ನೂತನವಾಗಿ ಶ್ರೀಸಫಲಾಂಬ ದೇವಿ ದೇವಾಲಯದ ಪ್ರತಿಷ್ಠಾಪನೆ, ಶಿಲಾ ಬಿಂಬ ಮಹೋತ್ಸವ ಅಂಗವಾಗಿ ಶ್ರೀ ಸಫಲಾಂಬ ದೇವಿಯ ಉತ್ಸವ ಮೂರ್ತಿಯನ್ನು ಹೊತ್ತ ಮಾಜಿ ಶಾಸಕ ಕೆ.ಎಸ್ .ಮಂಜುನಾಥ್ ಗೌಡ ಮೆರವಣಿಗೆಯಲ್ಲಿಭಾಗವಹಿಸಿದ್ದರು.