ನಟನಾ ಕ್ಷೇತ್ರದಲ್ಲಿಸಾಧಿಸುವ ಆಸೆ
ಇಂಟ್ರೊ: ಕನ್ನಡ ಮತ್ತು ತೆಲುಗಿನಲ್ಲಿಏಕಕಾಲದಲ್ಲಿಮೂಡಿಬರುತ್ತಿರುವ ‘ ಮೂಗುತಿ ಮಲ್ಲಿ ’ ಧಾರಾವಾಹಿಯಲ್ಲಿವಿರಾಜ್ ಪಾತ್ರದಲ್ಲಿಅಭಿನಯಿಸುತ್ತಿರುವ ನಟ ಚಂದನ್ ಗೌಡ ತಮ್ಮ ಪಾತ್ರ ಮತ್ತು ನಟನಾ ಪ್ರೀತಿ ಬಗ್ಗೆ ಲವಲವಿಕೆಯೊಂದಿಗೆ ಮಾತನಾಡಿದ್ದಾರೆ.
-----------
ರಿಯಾಲಿಟಿ ಶೋ ಮೂಲಕ ಕಿರುತೆರೆ ಅಂಗಳಕ್ಕೆ ಕಾಲಿಟ್ಟ ಚಂದನ್ ಗೌಡ, ಪ್ರಸ್ತುತ ಕಿರುತೆರೆ ಪ್ರೇಕ್ಷಕರ ನೆಚ್ಚಿನ ನಟ. ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳ ಹೃದಯ ಗೆದ್ದಿರುವ ಅವರಿಗೆ ಚಿಕ್ಕಂದಿನಿಂದಲೂ ನಟನೆ ಮೇಲೆ ಒಲವು. ಸದ್ಯ ‘ಮೂಗುತಿ ಮಲ್ಲಿ’ ಧಾರಾವಾಹಿಯಲ್ಲಿಬಿಝಿಯಾಗಿರುವ ಚಂದನ್ ಅವರು ನಟನೆ ಜತೆ ಬಿಸ್ನೆಸ್ ನಲ್ಲಿತೊಡಗಿಸಿಕೊಂಡಿದ್ದಾರೆ.
---
ಎರಡು ವರ್ಷಗಳ ಬ್ರೇಕ್ ನಂತರ ‘ಮೂಗುತಿ ಮಲ್ಲಿ’ಯ ವಿರಾಜ್ ಆಗಿದ್ದೀರಿ. ಹೇಗಿದೆ ಅನುಭವ?
‘ಮೂಗುತಿ ಮಲ್ಲಿ’ ನನ್ನ ಎರಡನೇ ಧಾರಾವಾಹಿ. ಈ ಹಿಂದೆ ನಟಿಸಿದ್ದ ‘ಅಂತರಪಟ’ ಧಾರಾವಾಹಿ ಮುಗಿದ ಒಂದು ತಿಂಗಳ ನಂತರ ನನ್ನ ಮಗಳು ಜನಿಸಿದಳು. ಈ ಸಮಯದಲ್ಲಿಅವಕಾಶಗಳು ಬರುತ್ತಿದ್ದವು. ಆದರೆ ಕುಟುಂಬಕ್ಕಾಗಿ ನಾನು ಸಮಯ ಕೊಡಲು ಸ್ವಲ್ಪ ಸಮಯ ಬ್ರೇಕ್ ತೆಗೆದುಕೊಂಡೆ. ‘ಮೂಗುತಿ ಮಲ್ಲಿ’ ಧಾರಾವಾಹಿಯ ಅವಕಾಶ ಕಳೆದ ಜುಲೈನಲ್ಲೇ ಬಂದಿತ್ತು. ಕಾರಣಾಂತರಗಳಿಂದ ಧಾರಾವಾಹಿ ಲಾಂಚ್ ಆಗಿದ್ದು ತುಸು ತಡವಾಯಿತು. ಸೀರಿಯಲ್ ನಲ್ಲಿ ಶ್ರೀಮಂತ ಹುಡುಗ ವಿರಾಜ್ ಪಾತ್ರದಲ್ಲಿನಟಿಸುತ್ತಿದ್ದೇನೆ. ಉತ್ತಮ ಹಾಗೂ ವಿಭಿನ್ನ ಪಾತ್ರ. ಎರಡು ಶೇಡ್ ಗಳಲ್ಲಿಕಾಣಿಸಿಕೊಳ್ಳುತ್ತಿದ್ದೇನೆ. ವೈಯಕ್ತಿಕವಾಗಿ ಪಾತ್ರ ನನಗೆ ಹೆಚ್ಚು ಹತ್ತಿರವಾಗಿದೆ. ಪ್ರೇಕ್ಷಕರಿಂದಲೂ ಒಳ್ಳೆಯ ಅಭಿಪ್ರಾಯ ಮೂಡಿಬರುತ್ತಿದೆ.
---------
ಧಾರಾವಾಹಿ ಎರಡು ಭಾಷೆಗಳಲ್ಲಿಮೂಡಿ ಬರುತ್ತಿದೆ. ಹೇಗೆ ಬ್ಯಾಲೆನ್ಸ್ ಮಾಡುತ್ತಿದ್ದೀರಾ?
‘ಮೂಗುತಿ ಮಲ್ಲಿ’ ಧಾರಾವಾಹಿ ತೆಲುಗಿನಲ್ಲಿ‘ಮುಕ್ಕೇರ ಮೀನಾಕ್ಷಿ’ ಹೆಸರಿನಲ್ಲಿಮೂಡಿ ಬರುತ್ತಿದೆ. ಸಾಮಾನ್ಯವಾಗಿ ಕನ್ನಡ ಧಾರಾವಾಹಿಯನ್ನು ತೆಲುಗು ಭಾಷೆಗೆ ಅಥವಾ ತೆಲುಗು ಧಾರವಾಹಿಯನ್ನು ಕನ್ನಡಕ್ಕೆ ಡಬ್ ಮಾಡಲಾಗುತ್ತದೆ. ಆದರೆ ಈ ಧಾರಾವಾಹಿಯನ್ನು ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲೂಪ್ರತ್ಯೇಕವಾಗಿ ಚಿತ್ರೀಕರಣ ಮಾಡಲಾಗುತ್ತಿದೆ. ಶೂಟಿಂಗ್ ಬೆಂಗಳೂರಿನಲ್ಲೇ ನಡೆಯುತ್ತಿರುವುದರಿಂದ ಸಮಯವನ್ನು ಸರಿದೂಗಿಸಲು ಸಾಧ್ಯವಾಗುತ್ತಿದೆ. ಎಲ್ಲವೂ ಹೊಸ ಅನುಭವ. ಖುಷಿ ನೀಡುತ್ತಿದೆ.
ವಿದೇಶದಲ್ಲಿಕೆಲಸ ಬಿಟ್ಟು ನಟನೆಯಲ್ಲಿತೊಡಗಿಸಿಕೊಳ್ಳಲು ಕಾರಣವೇನು?
ಹತ್ತು ವರ್ಷಗಳ ಕಾಲ ನಾನು ಹಾಂಕಾಂಗ್ ನಲ್ಲಿಕೆಲಸ ಮಾಡಿದ್ದೆ. ಈ ಸಂದರ್ಭದಲ್ಲಿಕುಟುಂಬವನ್ನು ಹೆಚ್ಚು ಮಿಸ್ ಮಾಡಿಕೊಳ್ಳುತ್ತಿದ್ದೆ. ಅಲ್ಲಿಂದ ಭಾರತಕ್ಕೆ ಮರಳಿದ್ದೇ ಕುಟುಂಬಕ್ಕಾಗಿ. ನನಗೆ ಚಿಕ್ಕಂದಿನಿಂದಲೂ ನಟನೆ ಮೇಲೆ ಒಲವು. ಕೆಲಸದ ಬಿಝಿಯಿಂದ ನಟನಾಗಲು ಸಾಧ್ಯವಾಗಲಿಲ್ಲ. ಕೆಲಸ ಬಿಟ್ಟರೆ ನಟನಾಗುಬೇಕೆಂಬುದೇ ನನ್ನ ಕನಸಾಗಿತ್ತು. ಇಲ್ಲಿಬಂದ ಮೇಲೆ ನೇಹಾ ಕೂಡ ನಟನೆಯಲ್ಲಿತೊಡಗಿಸಿಕೊಂಡಿದ್ದರಿಂದ ರಿಯಾಲಿಟಿ ಶೋಗಳಲ್ಲಿಭಾಗವಹಿಸಿದೆ. ನಂತರ ನನಗೆ ಸಿಕ್ಕಿದ್ದೇ ನಟನಾಗುವ ಅವಕಾಶ. ನಟನೆ ಮೇಲಿನ ಪ್ರೀತಿಯಿಂದಲೇ ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಆ್ಯಕ್ಟಿಂಗ್ ಜತೆ ಹಾಂಕಾಂಗ್ ನಲ್ಲಿಬಿಸ್ನೆಸ್ ನಲ್ಲಿತೊಡಗಿಸಿಕೊಂಡಿದ್ದೇನೆ. ತಿಂಗಳಿಗೊಮ್ಮೆ ವಿದೇಶದಕ್ಕೆ ಪ್ರಯಾಣ ಮಾಡುವೆ. ಸದ್ಯ ಸಿನಿಮಾಗಳಿಂದಲೂ ಅವಕಾಶ ಬರುತ್ತಿದೆ. ಅದರ ಮಾತುಕತೆಯಲ್ಲೂತೊಡಗಿಸಿಕೊಂಡಿದ್ದೇನೆ.
ಕೋಟ್ಸ್
ಕನ್ನಡ ಧಾರಾವಾಹಿ ಮೂಲಕ ತೆಲುಗು ಕಿರುತೆರೆ ಕ್ಷೇತ್ರಕ್ಕೂ ಕಾಲಿಟ್ಟಿದ್ದೇನೆ. ಇಂತಹ ಅಪೂರ್ವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ನಟನೆಯಲ್ಲೇ ಮತ್ತಷ್ಟು ಸಾಧನೆ ಮಾಡಬೇಕೆಂಬ ಹಂಬಲ, ಉತ್ಸಾಹ ಹೆಚ್ಚಾಗಿದೆ.
ಚಂದನ್ ಗೌಡ | ನಟ

