ಸಾರ್ವಜನಿಕರ ಮೊರೆ ಹೋದ ಮಾಜಿ ಸೈನಿಕರು

Contributed bymahammed.arif@timesgroup.com|Vijaya Karnataka

ಮಂಗಳೂರಿನಲ್ಲಿ ಮಾಜಿ ಸೈನಿಕರ ಸಂಘದ ಕಟ್ಟಡದ ತಡೆಗೋಡೆ ದುರಸ್ತಿಗೆ ಸಾರ್ವಜನಿಕರ ಸಹಾಯ ಕೋರಲಾಗಿದೆ. ಕಳೆದ ವರ್ಷದ ಮಳೆಗೆ ತಡೆಗೋಡೆ ಕುಸಿದು ಕಟ್ಟಡಕ್ಕೂ ಹಾನಿಯಾಗಿದೆ. ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಮುಂಗಾರು ಆರಂಭದ ಮೊದಲು ಕಾಮಗಾರಿ ಪೂರ್ಣಗೊಳಿಸದಿದ್ದರೆ ಕಟ್ಟಡ ಕುಸಿಯುವ ಆತಂಕವಿದೆ. ಸಂಘಕ್ಕೆ ಸ್ವಂತ ನಿಧಿಯ ಕೊರತೆ ಇರುವುದರಿಂದ ನೆರವು ನೀಡುವಂತೆ ಮನವಿ ಮಾಡಲಾಗಿದೆ.

former soldiers reach out for public assistance

ಸಂಘದ ಕಟ್ಟಡದ ಆವರಣ ತಡೆಗೋಡೆ ದುರಸ್ತಿಗಾಗಿ ಸಹಾಯಕ್ಕೆ ಮನವಿ

ವಿಕ ಸುದ್ದಿಲೋಕ ಮಂಗಳೂರು

ದಕ್ಷಿಣ ಕನ್ನಡ ಜಿಲ್ಲಾಮಾಜಿ ಸೈನಿಕರ ಸಂಘದ ಕಟ್ಟಡದ ಆವರಣ ತಡೆಗೋಡೆ ಮರುನಿರ್ಮಾಣಕ್ಕಾಗಿ ಮಾಜಿ ಸೈನಿಕರು ಸಾರ್ವಜನಿಕರ ನೆರವಿಗೆ ಮೊರೆ ಹೋಗಿದ್ದಾರೆ.

ಕಳೆದ ವಷÜರ್ ಮೇ 28ರಂದು ರಾತ್ರಿ ಸುರಿದ ಭಾರಿ ಮಳೆಗೆ ತಡೆ ಗೋಡೆ ಕುಸಿದು ಬಿದ್ದಿತ್ತು. ಅದರ ಮರು ನಿರ್ಮಾಣಕ್ಕೆ ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿಸಾರ್ವಜನಿಕರು ಸಹಕಾರ ಕೊಡಬೇಕು ಎಂದು ಸಂಘದ ಸದಸ್ಯ ಗ್ರೂಪ್ ಕ್ಯಾಪ್ಟನ್ ಸುಧೀರ್ ಜಿ. ಅಮೀನ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿಕೇಳಿಕೊಂಡರು.

ಬಾವುಟಗುಡ್ಡೆಯಲ್ಲಿಜಿಲ್ಲಾಡಳಿತ ಒದಗಿಸಿದ್ದ ಕಡಿದಾದ ಐದು ಸೆಂಟ್ಸ್ ಜಾಗದಲ್ಲಿಸಂಘದ ಕಟ್ಟಡ ನಿರ್ಮಿಸಲಾಗಿದೆ. 2023ರಲ್ಲಿಸುಮಾರು 25 ಲಕ್ಷ ರೂ. ವೆಚ್ಚದಲ್ಲಿತಡೆಗೋಡೆ ನಿರ್ಮಿಸಲಾಗಿತ್ತು. ತಡೆಗೋಡೆ ಕುಸಿದ ಪರಿಣಾಮ ಕಟ್ಟಡಕ್ಕೂ ಹಾನಿಯಾಗಿದ್ದು, ಇದನ್ನು ಪಾಲಿಕೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಅವರು ಕಟ್ಟಡ ಉಪಯೋಗಿಸದಂತೆ ನೋಟಿಸ್ ನೀಡಿದ್ದಾರೆಯೇ ಹೊರತು ಕಾಮಗಾರಿಗೆ ಬೇಕಾದ ನೆರವು ನೀಡಿಲ್ಲಎಂದರು.

ಸ್ಥಳೀಯ ಶಾಸಕ ಡಿ.ವೇದವ್ಯಾಸ ಕಾಮತ್ ಗಮನಕ್ಕೆ ತಂದಾಗ ಅವರು ಸಭೆ ನಡೆಸಿ, ಪಾಲಿಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರೂ, ಅನುದಾನದ ಅಲಭ್ಯತೆ ಮತ್ತು ಸಾರ್ವಜನಿಕ ಹಿತಾಸಕ್ತಿಯ ಕಾಮಗಾರಿ ಅಲ್ಲಎನ್ನುವ ಕಾರಣ ನೀಡಿ ಅಧಿಕಾರಿಗಳು ಹಿಂದೆ ಸರಿದಿದ್ದಾರೆ. ಈ ಬಾರಿಯ ಮುಂಗಾರು ಆರಂಭಕ್ಕೆ ಮೊದಲು ಕಾಮಗಾರಿ ಪೂರ್ಣ ಗೊಳಿಸಬೇಕಾದ ಅಗತ್ಯವಿದೆ. ನಿರ್ಲಕ್ಷ್ಯ ವಹಿಸಿದರೆ ಕಟ್ಟಡವೇ ಕುಸಿಯುವ ಆತಂಕವಿದೆ. ಸಂಘಕ್ಕೆ ಸ್ವಂತ ನಿಧಿಯ ಕೊರತೆ ಇರುವುದರಿಂದ ಸಾರ್ವಜನಿಕರು ಮುಂದೆ ಬಂದು ಅರ್ಥಿಕ ಅಥವಾ ಇತರ ರೂಪದಲ್ಲಿನೆರವು ನೀಡುವಂತೆ ಅವರು ಮನವಿ ಮಾಡಿದರು.

ಸಂಘದ ಉಪಾಧ್ಯಕ್ಷ ಕರ್ನಲ್ ಜಯಚಂದ್ರನ್ , ಕಾರ್ಯದರ್ಶಿ ಕ್ಯಾಪ್ಟನ್ ದೀಪಕ್ ಅಡ್ಯಂತಾಯ, ಖಜಾಂಚಿ ವೆಟೆರನ್ ಸುಧೀರ್ ಪೈ ಸುದ್ದಿಗೋಷ್ಠಿಯಲ್ಲಿಉಪಸ್ಥಿತರಿದ್ದರು.