30ಸಿಟಿಪಿಆರ್ 1 ಗ್ರಾಮದ ಮುಖಂಡ ಭಿಮಾಶಂಕರ ಇಂದೂರ ಪೋಟೋ ಬಳಸಿ.a
****
ಕಮರವಾಡಿ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವ.
ನಾಳೆಯಿಂದ ಪುರಾಣ , ವಿವಿಧ ಧಾರ್ಮಿಕ ಕಾರ್ಯಕ್ರಮ
ವಿಕ ಸುದ್ದಿಲೋಕ ಚಿತ್ತಾಪುರ
ತಾಲೂಕಿನ ಕಮರವಾಡಿ ಗ್ರಾಮದಲ್ಲಿಆದಿದೇವ ಶರಣಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಮೇ.2 ರಿಂದ ಮೇ.12ರ ವರೆಗೆ ಮಹಾದಾಸೋಹಿ ಶ್ರೀ ಶರಣಬಸವೇಶ್ವರ ಪುರಾಣ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಗ್ರಾಮದ ಮುಖಂಡ ಭಿಮಾಶಂಕರ ಇಂದೂರ ತಿಳಿಸಿದ್ದಾರೆ.
ಪುರಾಣ ಪ್ರವೀಣ ಪರಮ ಪೂಜ್ಯ ಅನ್ನದಾನ ಶಾಸ್ತ್ರಿ ಹಿರೇಮಠ ಇರಕಲ್ ಗೂಡೂರ ಅವರು ಪ್ರತಿ ದಿನ ರಾತ್ರಿ 7.30ಕ್ಕೆ ಪುರಾಣ ನಡೆಸಿಕೊಡಲಿದ್ದಾರೆ. ಪುರಾಣ ಕಾರ್ಯಕ್ರಮದಲ್ಲಿವಿವಿಧ ಮಠಾಧೀಶರು ಸಾನಿಧ್ಯವಹಿಸಲಿದ್ದಾರೆ. ವಿವಿಧ ಪಕ್ಷದ ರಾಜಕೀಯ ಮುಖಂಡರು ಮತ್ತು ವಿವಿಧ ಕ್ಷೇತ್ರದಲ್ಲಿಸಾಧನೆಗೈದವರು ಉಪಸ್ಥಿತರಿರುತ್ತಾರೆ.
ಮೇ. 13ರಂದು ಪಲ್ಲಕ್ಕಿ ಮಹೋತ್ಸವ ಸಂಜೆ 4.30ಕ್ಕೆ ಕುಂಭ ಕಳಸ ವಾದ್ಯಗಳೊಂದಿಗೆ ಮೆರವಣಿಗೆ ಮತ್ತು ಮೇ.14 ರಂದು ಸಂಜೆ.6.30ಕ್ಕೆ ಭವ್ಯ ರಥೋತ್ಸವ ನಡೆಯಲಿದೆ.
ಕಲಬುರ್ಗಿ ಶರಣಬಸವೇಶ್ವರ ಮಹಾಸಂಸ್ಥಾನದ 9ನೇ ಪೀಠಾಧಿಪತಿಗಳಾದ ಚಿರಂಜೀವಿ ದೊಡ್ಡಪ್ಪ ಅಪ್ಪಾ ಹಾಗೂ ಮಾತೋಶ್ರೀ ಡಾ.ದಾಕ್ಷಯಿಣಿ ಎಸ್ .ಅಪ್ಪಾ ರವರು ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.ನಂತರ ಧಾರ್ಮಿಕ ಸಭೆ ಮತ್ತು ಹಾಸ್ಯಸಂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಚಿರಂಜೀವಿ ದೊಡ್ಡಪ್ಪ ಅಪ್ಪಾ ಅವರಿಗೆ ಮಲ್ಲಮ್ಮ ಶ್ರೀಭಿಮರೆಡ್ಡಿ ಹತ್ತಿಕುಣಿ ಹಾಗೂ ಪಾರ್ವತಿ ಜಗನಾಥರೆಡ್ಡಿಗೌಡ ಹತ್ತಿಕುಣಿ ಬೊಮ್ಮನಳ್ಳಿ ದಂಪತಿಗಳಿಂದ ತುಲಾಭಾರ ಸೇವೆ ಜರುಗಲಿದೆ. ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿಪಾಲ್ಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.

