ಲಕ್ಷಿತ್ರ್ಮನರಸಿಂಹ ಜಯಂತ್ಯುತ್ಸವ
ವಿಕ ಸುದ್ದಿಲೋಕ ಕಂಪ್ಲಿ
ಸ್ಥಳೀಯ ಕೋಟೆ ಪ್ರದೇಶದ ಪಟ್ಟಾಭಿರಾಮಚಂದ್ರ ದೇಗುಲದಲ್ಲಿ, ಲಕ್ಷಿತ್ರ್ಮ ನರಸಿಂಹ, ಪಟ್ಟಾಭಿರಾಮಚಂದ್ರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಲಕ್ಷಿತ್ರ್ಮ ನರಸಿಂಹ ಜಯಂತ್ಯುತ್ಸವವನ್ನು ಗುರುವಾರ ಆಚರಿಸಲಾಯಿತು.
ಲೇಖಕ ಡಾ.ಧೀರಣ್ಣ ವೈದ್ಯರು ಲಕ್ಷಿತ್ರ್ಮ ನರಸಿಂಹ ಕುರಿತು ಮಾತನಾಡಿ, ‘‘ಭಕ್ತ ಪ್ರಹ್ಲಾದನನ್ನು ರಕ್ಷಿಸಲು ಭಗವಾನ್ ವಿಷ್ಣು ಉಗ್ರ ನರಸಿಂಹನ ಅವತಾರ ತಾಳಿ ಹಿರಣ್ಯಕಷ್ಯಪುನನ್ನು ಸಂಹರಿಸಿದ ದಿನವಾಗಿದೆ. ಶಿಷ್ಟರನ್ನು ರಕ್ಷಿಸಿ, ದುಷ್ಟರನ್ನು ಶಿಕ್ಷಿಸುವ ಪ್ರತೀಕವಾಗಿ ಲಕ್ಷಿತ್ರ್ಮ ನರಸಿಂಹ ಜಯಂತ್ಯುತ್ಸವ ಆಚರಿಸಲಾಗುತ್ತದೆ,’’ ಎಂದರು.
ಅರ್ಚಕ ರಾಘವೇಂದ್ರ ಆಚಾರ್ , ಶ್ರೀನಿವಾಸ ಆಚಾರ್ ಪೌರೋಹಿತ್ಯದಲ್ಲಿಪಂಚಾಮೃತ ಅಭಿಷೇಕ, ಅಲಂಕಾರ, ತೀರ್ಥಪ್ರಸಾದ, ಕೋಟೆ ಭಜನಾ ಮಂಡಳಿಯವರಿಂದ ಭಜನೆ ನಡೆಯಿತು. ಸದ್ಭಕ್ತರಾದ ಪ್ರಸನ್ನ ವೈದ್ಯ, ಗೌಡ್ರು ಗೋಪಾಲಕೃಷ್ಣ, ದಿಗ್ಗಾವಿ ವೇಣುಗೋಪಾಲ ಆಚಾರ್ , ಕೋಟೆ-ಪೇಟೆಯ ಸದ್ಭಕ್ತರು ಪಾಲ್ಗೊಂಡಿದ್ದರು. ಇಲ್ಲಿನ ಸತ್ಯನಾರಾಯಣಪೇಟೆ ವೆಂಕಟರಮಣ ದೇಗುಲದಲ್ಲಿನರಸಿಂಹ ಜಯಂತ್ಯುತ್ಸವ ನಡೆಯಿತು. ಪಂಚಾಮೃತಾಭಿಷೇಕ, ಪುರುಷ ಸೂಕ್ತ, ಶ್ರೀಸೂಕ್ತ ಅಭಿಷೇಕ. ಅಲಂಕಾರ, ಅಷ್ಟೋತ್ತರ, ಸಹಸ್ರನಾಮ ಕಾರ್ಯಕ್ರಮಗಳು ಜರುಗಿದವು. ಶ್ರೀಮನ್ನಾರಾಯಣ ಆಶ್ರಮದ ಪರಮಹಂಸ ನಾರಾಯಣ ವಿದ್ಯಾಭಾರತಿಶ್ರೀ ಅವರು ಲಕ್ಷಿತ್ರ್ಮ ನರಸಿಂಹ ಅವತಾರ ಕುರಿತು ಪ್ರವಚನ ನೀಡಿದರು.
ಇಲ್ಲಿನ ಭಾವಸಾರ ಕ್ಷತ್ರಿಯ ಸಮಾಜದ ಪೇಟೆ ಆಂಜನೇಯ ದೇವಸ್ಥಾನದಲ್ಲಿನರಸಿಂಹ ಜಯಂತ್ಯುತ್ಸವ ನಡೆಯಿತು. ಶಾಲಿವಾಹನ ಶಕೆ 1498ರಲ್ಲಿಪ್ರಾಣಪ್ರತಿಷ್ಠಾಪನೆಗೊಂಡ ಉಗ್ರನರಸಿಂಹ ದೇವರಿಗೆ ಅರ್ಚಕರಾದ ಪ್ರಹ್ಲಾದ ಆಚಾರ್ , ಪವನ್ ಆಚಾರ್ ಪೌರೋಹಿತ್ಯದಲ್ಲಿಅಭಿಷೇಕ ನಾನಾ ಕಾರ್ಯಕ್ರಮಗಳು ನಡೆದವು. ರಜತ ಕವಚದಿಂದ ಅಲಂಕರಿಸಲಾಗಿತ್ತು. ಸಮಾಜದ ಅಧ್ಯಕ್ಷ ವಿಶ್ವನಾಥರಾವ್ ಪುಲಸ್ಕರ್ , ಉಪಾಧ್ಯಕ್ಷ ಶೇಷಾಪತಿರಾವ್ ಎಲ್ಲಸಮುದಾಯಗಳ ಸದ್ಭಕರು ಭಾಗವಹಿಸಿದ್ದರು.
---
ಪೊ.ಶೀ.30ಕೆಎಂಪಿ1;-
ಕಂಪ್ಲಿ-ಕೋಟೆ ಪಟ್ಟಾಭಿರಾಮಚಂದ್ರ ದೇವಸ್ಥಾನದಲ್ಲಿನರಸಿಂಹ ಜಯಂತ್ಯುತ್ಸವ ನಿಮಿತ್ತ ಪಟ್ಟಾಭಿರಾಮಚಂದ್ರ, ಲಕ್ಷಿತ್ರ್ಮ ನರಸಿಂಹ ದೇವರ ಮೂರ್ತಿಗಳನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು.

