ಕಾಲೇಜಿಗೆ ಮುಕ್ತ ವಿವಿ ಸೌಲಭ್ಯ

Contributed bykakanakotekhedda@gmail.com|Vijaya Karnataka

ಎಚ್‌.ಡಿ.ಕೋಟೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ನಡುವೆ ಶೈಕ್ಷಣಿಕ ಒಡಂಬಡಿಕೆ ನಡೆದಿದೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡುವ ಉದ್ದೇಶದಿಂದ ಈ ಒಪ್ಪಂದ ಮಾಡಿಕೊಳ್ಳಲಾಗಿದೆ. ಕರಾಮುವಿವಿ ಮುಖ್ಯಸ್ಥ ಡಾ. ರಾಮೇಗೌಡ ಮತ್ತು ಪ್ರಾಂಶುಪಾಲ ಪ್ರೊ. ಅರುಣ್ ಕುಮಾರ್ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಜನಪದ ಉತ್ಸವದ ಸಮಾರಂಭದಲ್ಲಿ ಈ ಮಾಹಿತಿ ನೀಡಲಾಗಿದೆ.

open university facilities that lead to accessibility

ಕಾಲೇಜಿಗೆ ಮುಕ್ತ ವಿವಿ ಸೌಲಭ್ಯ

*ಪ್ರಾಂಶುಪಾಲ ಪ್ರೊ.ಅರುಣ್ ಕುಮಾರ್ ಮಾಧಿಹಿಧಿತಿಧಿ*ಒಧಿಡಂಬಧಿಡಿಧಿಕೆಗೆ ಸಹಿ

ವಿಕ ಸುದ್ದಿಲೋಕ ಎಚ್ .ಡಿ.ಕೋಟೆ

ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ನಧಿಡುವೆ ಶೈಕ್ಷಣಿಕ ಕ್ಷೇತ್ರದಲ್ಲಿಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಪ್ರಾಂಶುಪಾಲ ಪ್ರೊ.ಅರುಣ್ ಕುಮಾರ್ ತಿಳಿಸಿದರು.

ಪಟ್ಟಣದ ಗದ್ದಿಗೆ ವೃತ್ತದ ಬಳಿ ಇರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿನಡೆದ ವನಸಿರಿ ನಾಡಿನ ಜನಪದ ಕಲರವ ಮತ್ತು ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘‘ತಾಲೂಕಿನಲ್ಲಿಪದವಿ ನಂತರ ಸ್ನಾತಕೋತ್ತರ ಅಥವಾ ಇನ್ನೂ ಹೆಚ್ಚಿನ ವಿಧ್ಯಾಭ್ಯಾಸಕ್ಕೆ ಹೋಗುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ. ಹೆಚ್ಚಿನ ವಿಧ್ಯಾಭ್ಯಾಸಕ್ಕೆ ಮೈಸೂರು ನಗರಕ್ಕೆ ಹೋಗಬೇಕಾದ ಕಾರಣ ಸೇರಿದಂತೆ ಮನೆಯ ಆರ್ಥಿಕ ಪರಿಸ್ಥಿತಿಯಿಂದ ಹೆಚ್ಚಿನ ಶಿಕ್ಷಣ ನಿಲ್ಲಿಸುವುದು ವಿವಿ ಗಮನಕ್ಕೆ ಬಂದಿದೆ. ಹಾಗಾಗಿ ತಾಲೂಕಿನ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು, ಮನೆಯಲ್ಲಿಕುಳಿತು ಓದಿ, ಹೆಚ್ಚಿನ ವಿಧ್ಯಾಭ್ಯಾಸ ಮಾಡಬೇಕು. ಅವರ ಶಿಕ್ಷಣ ಸಂಪೂರ್ಣಗೊಳ್ಳಬೇಕು ಎನ್ನುವ ಉದ್ದೇಶದಿಂದ ಕಾಲೇಜಿಗೆ ಮುಕ್ತ ವಿವಿಯು ಸೌಲಭ್ಯ ಒದಗಿಸಿದೆ. ಇಂದು ಕರಾಮುವಿವಿಯ ಮುಖ್ಯಸ್ಥ ಡಾ. ರಾಮೇಗೌಡ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ’’ ಎಂದರು.

ಕರಾಮುವಿವಿಯ ಮುಖ್ಯಸ್ಥ ಡಾ. ರಾಮೇಗೌಡ ಮಾತನಾಡಿ,‘ಧಿ‘ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೂ ಉನ್ನತ ಶಿಕ್ಷಣ ಸಿಗಬೇಕು ಎನ್ನುವ ಉದ್ದೇಶದಿಂದ ಕಾಲೇಜಿನ ಪ್ರಾಂಶುಪಾಲ ಪ್ರೊ.ಅರುಣ್ ಕುಮಾರ್ ಮನವಿ ಮಾಡಿದ್ದರು. ಹಾಗಾಗಿ ಕಾಲೇಜಿಗೆ ಮುಕ್ತ ವಿವಿ ಸೌಧಿಲಭ್ಯ ಒದಗಿಸಲಾಗಿದೆ’ಧಿ’ ಎಂದರು.

‘ಧಿ‘ಜನಪದ ಉತ್ಸವವನ್ನು ಮಕ್ಕಳು ಅದ್ಭುತವಾಗಿ ಆಚರಿಸಿದ್ದಾರೆ. ಆಧುನಿಕತೆಯ ಭರದಲ್ಲಿನಮ್ಮ ಜನಪದ ಸಂಸ್ಕೃತಿ ಮರೆಯಾಗುತ್ತಿರುವ ಈ ದಿನಗಳಲ್ಲಿಪ್ರಾಂಶುಪಾಲರ ನೇತೃತ್ವದಲ್ಲಿಮಕ್ಕಳು ಜನಪದ ಜಾತ್ರೆ, ಕಲಾಮೇಳ, ಕಂಸಾಳೆ, ಜನಪದ ವಸ್ತುಗಳ ಪ್ರದರ್ಶನವನ್ನು ಅಚ್ಚುಕಟ್ಟಾಗಿ ನಡೆಸಿರುವುದು ಅಭಿನಂದನೀಯ’’ ಎಂದರು.

ಸಮಾರಂಭದಲ್ಲಿಬೋರೆದೇವರ ಮುಂಟಿಯ ಪ್ರವೀಣ್ , ಜ್ಞಾನವೀಣೆ ಟ್ರಸ್ಟ್ ನ ಆನಗಟ್ಟಿ ದೇವರಾಜು ಮತ್ತು ಜ್ಞಾನವೇಣಿ ಅವರು ಜನಪದ ಹಾಡುಗಳನ್ನು ಹೇಳಿದರು.

ಸನ್ಮಾನ: ಮೈಸೂರು ವಿವಿ ಕಬಿನಿ ವಲಯದಲ್ಲಿನಡೆದ ವಾಲಿಬಾಲ್ , ಸಾಫ್ಟ್ ಬಾಲ್ , ಹ್ಯಾಂಡ್ ಬಾಲ್ , ಬಾಸ್ಕೆಟ್ ಬಾಲ್ ಪಂದ್ಯಾವಳಿಯಲ್ಲಿವಿಜೇತರಾದ ವಿದ್ಯಾರ್ಥಿಗಳು ಮತ್ತು ಮೈಸೂರು ವಿವಿಯಲ್ಲಿಕಳೆದ ಸಾಲಿನಲ್ಲಿಚಿನ್ನದ ಪದಕ ಪಡೆದ ಸುಚಿತ್ರಾ, ಗ್ರಾಮ ಪಂಚಾಯಿತಿ ಗ್ರಂಥಾಲಯದಲ್ಲಿಉದ್ಯೋಗ ಪಡೆದ ಕಾಲೇಜಿನ ವಿದ್ಯಾರ್ಥಿ ಶಿವಕುಮಾರ ಆರಾಧ್ಯ, ಜನಪದ ಉತ್ಸವಕ್ಕೆ ಸತ್ತಿಗೆ ತಂದ ಚಕ್ಕೋಡನಹಳ್ಳಿಯ ನಿಂಗರಾಜಯ್ಯ, ಸಣ್ಣಯ್ಯ ಮತ್ತು ವಿನಯ್ ಅವರನ್ನು ಸನ್ಮಾನಿಸಲಾಯಿತು.

ಕಾಲೇಜಿನ ಕಧಿಚೇಧಿರಿ ಅಧೀಕ್ಷಕ ಕೆ.ವಿ.ಬಾಲಾಜಿ, ಉಪನ್ಯಾಸಕರಾದ ಡಾ.ಮಷ್ಪಲತಾ ಪಿ.ಮಂಜು , ಡಾ.ಗಣೇಶ್ , ಡಾ.ಪುಟ್ಟರಾಜು, ಕಾತ್ಯಾಯಿನಿ, ಪ್ರೊ. ಪೂರ್ಣಿಮ , ಪ್ರೊ.ಗುರುದತ್ ಕಾಮತ್ , ಪ್ರೊ.ರಾಜಶೇಖರ, ಪ್ರೊ.ಕೆಂಪರಾಜು, ಪ್ರೊ.ದಮ್ಮೂರಪ್ಪ, ಬೋರಮ್ಮ ಎಚ್ .ಅಂಗಡಿ, ಡಾ.ಶಶಿಕಲಾ, ಡಾ.ಜಯಸ್ವಾಮಿ, ಸ್ವಾಮಿ, ಸೋಮಶೇಖರ್ ಆರಾಧ್ಯ, ರುಕ್ಕಿಣ, ಅಭಿಲಾಷ್ ಹಾಜರಿದ್ದರು.

ಪೋಟೋ ಇದೆ;ಋ್ಗಖ29ಏಈಓ1ಇ

ಎಚ್ .ಡಿ.ಕೋಟೆ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿನಡೆದ ಕಾರ್ಯಕ್ರಮದಲ್ಲಿಕರಾಮುವಿವಿ ಯ ಡಾ. ರಾಮೇಗೌಡ ಮತ್ತು ಪ್ರೊ.ಅರುಣ್ ಕುಮಾರ್ ಅವರು ಒಂಡಬಡಿಕೆಗೆ ಸಹಿ ಹಾಕಿಧಿದಧಿರು.