ಬುದ್ಧನ ತತ್ವಗಳು, ಅಂಬೇಡ್ಕರ್ ಆದರ್ಶಗಳನ್ನು ಅರಿಯಬೇಕು

Contributed byMruthyunjayar77@gmail.com|Vijaya Karnataka

ಚಿಕ್ಕಬಳ್ಳಾಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬುದ್ಧನ ತತ್ವಗಳು, ಅಂಬೇಡ್ಕರ್ ಆದರ್ಶಗಳ ಬಗ್ಗೆ ಉಪನ್ಯಾಸ ನೀಡಲಾಯಿತು. ಭಾರತದ ಸಂವಿಧಾನ ಬುದ್ಧನ ತತ್ವಗಳ ಮೇಲೆ ನಿಂತಿದೆ. ಅಸ್ಪೃಶ್ಯತೆ ವಿರುದ್ಧ ಅಂಬೇಡ್ಕರ್ ಹೋರಾಟ ನಡೆಸಿದರು. ಶಿಕ್ಷಣವೇ ಪರಿಹಾರ ಎಂದು ಅವರು ತಿಳಿಸಿದರು. ಬುದ್ಧನ ಮೂರು ಶರಣಗಳ ಅರ್ಥವನ್ನು ವಿವರಿಸಲಾಯಿತು. ರಸಪ್ರಶ್ನೆ ಸ್ಪರ್ಧೆ ನಡೆಸಿ ಬಹುಮಾನ ವಿತರಿಸಲಾಯಿತು.

the importance of buddhas teachings and ambedkars ideals a workshop for students

ವಿಕ ಸುದ್ದಿಲೋಕ ಚಿಕ್ಕಬಳ್ಳಾಪುರ

ಭಾರತ ದೇಶದ ಸಂವಿಧಾನ ಬುದ್ಧನ ತತ್ವ, ಸಿದ್ಧಾಂತಗಳ ತಳಹದಿಯ ಮೇಲೆ ನಿಂತಿದೆ. ಬುದ್ಧ ಪ್ರತಿಪಾದಿಸಿದ ಶಾಂತಿ, ಅಹಿಂಸೆ, ಸಮಾನತೆ, ಕರುಣೆ ಇವೆಲ್ಲವನ್ನು ಒಳಗೊಂಡಿರುವ ಲಿಖಿತ ಸಂವಿಧಾನವನ್ನು ಡಾ. ಬಿ.ಆರ್ ಅಂಬೇಡ್ಕರ್ ನೀಡಿದ್ದಾರೆ ಎಂದು ಡಾ. ಕೆ. ಮೂರ್ತಿ ಸಾಮ್ರಾಟ್ ತಿಳಿಸಿದರು.

ನಗರದ ವಿಶ್ವ ವಿವೇಕ ಪ್ರಥಮ ದರ್ಜೆ ಕಾಲೇಜಿನಲ್ಲಿಕರ್ನಾಟಕ ಸಾಹಿತ್ಯ ಅಕಾಡೆಮಿಯ ‘ಚಕೋರ’ ಸಾಹಿತ್ಯ ವಿಚಾರ ವೇದಿಕೆ ವತಿಯಿಂದ ‘ಗೌತಮ ಬುದ್ಧ ಹಾಗೂ ಡಾ. ಬಿ.ಆರ್ . ಅಂಬೇಡ್ಕರ್ ಚಿಂತನೆಗಳು’ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.

ಪ್ರಸ್ತುತ ವಿದ್ಯಾರ್ಥಿಗಳು ನಮ್ಮ ತ್ರಿವರ್ಣ ಧ್ವಜದಲ್ಲಿರುವ ಸಾಮ್ರಾಟ್ ಅಶೋಕ ಚಕ್ರವು ಶಾಂತಿ ಸಾರುತ್ತದೆ. ಭಾರತೀಯ ಸಮಾಜದಲ್ಲಿದ್ದ ಅಸ್ಪೃಷ್ಯತೆ ಆಚರಣೆ ವಿರುದ್ಧ ಡಾ. ಬಿ. ಆರ್ . ಅಂಬೇಡ್ಕರ್ ಅನೇಕ ಹೋರಾಟಗಳು ರೂಪಿಸಿ ಇದಕ್ಕೆಲ್ಲಪರಿಹಾರ ಶಿಕ್ಷಣವೊಂದೇ ಎಂಬುದನ್ನು ಅರಿತು ಅನೇಕ ಪದವಿಗಳನ್ನು ಪಡೆದು ದೇಶ ವಿದೇಶಗಳಲ್ಲಿಓದಿ ವಿಶ್ವಜ್ಞಾನಿಯಾದರು ಎಂದರು.

ಬುದ್ಧಂ ಶರಣಂ ಗಚ್ಛಾಮಿ, ಧಮ್ಮಂ ಶರಣಂ ಗಚ್ಛಾಮಿ, ಸಂಘಂ ಶರಣಂ ಗಚ್ಛಾಮಿ ಎಂಬ ವಾಕ್ಯಗಳ ಅರ್ಥವನ್ನು ವಿದ್ಯಾರ್ಥಿಗಳಿಗೆ ಕವಿ ರಮಣ್ ಅಕೇಶ್ ವಿವರಿಸಿದರು. ಬುದ್ಧ ಹಾಗೂ ಡಾ. ಅಂಬೇಡ್ಕರ್ ಅವರ ಬಗ್ಗೆ ಕೇಳಿದ ರಸಪ್ರಶ್ನೆಗಳಿಗೆ ಉತ್ತರಿಸಿದ ವಿದ್ಯಾರ್ಥಿಗಳಿಗೆ ಪುಸ್ತಕ ಬಹುಮಾನ ನೀಡಿ ಗೌರವಿಸಲಾಯಿತು.

ಈ ಸಂದರ್ಭಲ್ಲಿವಿಶ್ವ ವಿವೇಕ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಎಚ್ .ಎಸ್ . ಅಂಜಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಚಕೋರ ಜಿಲ್ಲಾಸಂಚಾಲಕ ಪಾತಮುತ್ತಕಹಳ್ಳಿ ಮು. ಚಲಪತಿಗೌಡ, ಈ ಧರೆ ಪ್ರಕಾಶ್ , ಸಕಲ ರಂಗ ಹೆಜ್ಜೆ ಟ್ರಸ್ಟ್ ಅಧ್ಯಕ್ಷ ದಿಲೀಪ್ ಕುಮಾರ್ , ಉಪನ್ಯಾಸಕರಾದ ರಜನಿ, ಬಬಿತ, ಶಿಲ್ಪ ಮತ್ತಿತರರು ಉಪಸ್ಥಿತರಿದ್ದರು.

30 ಸಿಬಿಪಿಪೋಟೋ 1

ಕರ್ನಾಟಕ ಸಾಹಿತ್ಯ ಅಕಾಡೆಮಿಯ ‘ಚಕೋರ’ ಸಾಹಿತ್ಯ ವಿಚಾರ ವೇದಿಕೆ ವತಿಯಿಂದ ಗೌತಮ ಬುದ್ಧ ಹಾಗೂ ಅಂಬೇಡ್ಕರ್ ಚಿಂತನೆಗಳು ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.