ಪುತ್ರಿ ಮನೆಯ ಬಂಗಾರವನ್ನೇ ಕದ್ದ ತಾಯಿ!

Contributed byravi.gosavi@timesofindia.com|Vijaya Karnataka

ಅನಗೋಳದಲ್ಲಿ ನಡೆದ ಚಿನ್ನಾಭರಣ ಕಳ್ಳತನ ಪ್ರಕರಣದಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಮಗಳು ಉಜ್ವಲಾ ರವಿ ಕಮ್ಮಾರ ಮತ್ತು ಶಿವಾ ಶಂಕರ ಅಪ್ಪಯನವರ ಬಂಧಿತರಾಗಿದ್ದಾರೆ. 16 ಲಕ್ಷ ರೂ.ಗೂ ಅಧಿಕ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಗರ್ಭಿಣಿಯಾಗಿದ್ದ ಮಗಳನ್ನು ನೋಡಲು ಬಂದ ತಾಯಿ ಕಳ್ಳತನದಲ್ಲಿ ಭಾಗಿಯಾಗಿದ್ದಳು. ಪ್ರಕರಣ ಭೇದಿಸಿದ ತಂಡಕ್ಕೆ ಬಹುಮಾನ ಘೋಷಿಸಲಾಗಿದೆ.

mother steals jewelry from daughters house

- 16 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕದ್ದ ಇಬ್ಬರ ಬಂಧನ

ವಿಕ ಸುದ್ದಿಲೋಕ ಬೆಳಗಾವಿ

ಪುತ್ರಿ ಮನೆಯಿಂದಲೇ ಚಿನ್ನಾಭರಣ ಕಳ್ಳತನ ಮಾಡಿದ್ದ ತಾಯಿ ಸೇರಿ ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರು 16 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಮಲ್ಪನಹಳ್ಳಿ ಮೂಲದ ಉಜ್ವಲಾ ರವಿ ಕಮ್ಮಾರ(40) ಹಾಗೂ ಬೈಲಹೊಂಗಲ ತಾಲೂಕಿನ ಮಧನಬಾವಿ ಮೂಲದ, ಹಾಲಿ ಹಿಂಡಲಗಾ ನಿವಾಸಿ ಶಿವಾ ಶಂಕರ ಅಪ್ಪಯನವರ (30) ಬಂಧಿತರು.

ಏನಿದು ಪ್ರಕರಣ?: ತಮ್ಮ ಮನೆಯಲ್ಲಿಕಳ್ಳತನ ನಡೆದ ಕುರಿತು ಅನಗೋಳದ ಮಾರುತಿ ಗಲ್ಲಿನಿವಾಸಿ ಯಲ್ಲಪ್ಪ ಈರಪ್ಪ ಕಮ್ಮಾರ ಏ.25ರಂದು ದೂರು ನೀಡಿದ್ದರು. ಈ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಯಲ್ಲಪ್ಪ ಅವರ ಪತ್ನಿ ಗರ್ಭಿಣಿಯಾಗಿದ್ದು, ಪುತ್ರಿಯನ್ನು ನೋಡಲು ತಾಯಿ ಉಜ್ವಲಾ ಆಗಾಗ ಭೇಟಿ ನೀಡುತ್ತಿದ್ದರು. ಈ ವೇಳೆ ಪುತ್ರಿ ಮನೆಯಿಂದ ಆರೋಪಿಗಳು ಬಂಗಾರದ ಆಭರಣ ಕಳ್ಳತನ ಮಾಡಿದ್ದಾರೆ. ಮಂಗಳಸೂತ್ರ, ಉಂಗುರ, ನೆಕ್ಲೇಸ್ ಸೇರಿದಂತೆ ಒಟ್ಟು 16,57,350 ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ಭೇದಿಸಿದ ತಂಡಕ್ಕೆ ಪೊಲೀಸ್ ಕಮಿಷನರ್ ಭೂಷಣ ಬೋರಸೆ ಬಹುಮಾನ ಘೋಷಿಸಿದ್ದಾರೆ.

*ಫೋಟೋ-30ರವಿಜಿ3

ಉಜ್ವಲಾ ಕಮ್ಮಾರ

*ಫೋಟೋ-30ರವಿಜಿ4

ಶಿವಾ ಅಪ್ಪಯನವರ