ನರಸಿಂಹ ಜಯಂತಿ: ವಿವಿಧ ಧಾರ್ಮಿಕ ಕಾರ್ಯಕ್ರಮ ಯಲ್ಲಾಪ

Contributed bynagarajmadguni@gmail.com|Vijaya Karnataka

ಯಲ್ಲಾಪುರ ತಟಗಾರ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ನರಸಿಂಹ ಜಯಂತಿ ಪ್ರಯುಕ್ತ ಎರಡು ದಿನಗಳ ಧಾರ್ಮಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಿದವು. ಹೋಮ, ಹವನ, ನೂತನ ಧ್ವಜಸ್ತಂಭ ಪ್ರತಿಷ್ಠೆ ನಡೆಯಿತು. ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡವರನ್ನು ಗೌರವಿಸಲಾಯಿತು. ಎಸ್ಸೆಸ್ಸೆಲ್ಸ್ಸಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಸಾರ್ವಜನಿಕರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

narasimha jayanti successful religious events held

ಯಲ್ಲಾಪುರ: ತಾಲೂಕಿನ ತಟಗಾರ ಲಕ್ಷ್ಮೇ ನರಸಿಂಹ ದೇವಸ್ಥಾನದಲ್ಲಿನರಸಿಂಹ ಜಯಂತಿಯ ಅಂಗವಾಗಿ ಎರಡು ದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಗುರುವಾರ ಸಂಪನ್ನಗೊಂಡವು.

ನರಸಿಂಹ ಮೂಲಮಂತ್ರ ಹೋಮ, ಪುರಷಸೂಕ್ತ, ಶ್ರೀ ಸೂಕ್ತ ಹವನ, ನೂತನ ಶಿಲಾಮಯ ಧ್ವಜಸ್ತಂಭ ಪ್ರತಿಷ್ಠೆ ನಡೆಯಿತು.

ತಾಂತ್ರಿಕರಾದ ವಿ.ಕಟ್ಟೆ ಶಂಕರ ಭಟ್ ಮಾತನಾಡಿ, ‘‘ಆಗಮೋಕ್ತವಾಗಿ ಶಿಲಾಮಯ ಧ್ವಜ ಸ್ತಂಭ ಸ್ಥಾಪಿಸಲಾಗಿದೆ. ಇದರಿಂದ ದೇವಾಲಯಕ್ಕೂ, ಗ್ರಾಮಕ್ಕೂ ಒಳಿತಾಗಲಿದೆ’’ ಎಂದರು.

ನೂತನ ಶಿಲಾಮಯ ಧ್ವಜಸ್ತಂಭ ನೀಡಿದ ಮಂಚಿಕೇರಿ ಹೊಕ್ಕಳಜಡ್ಡಿಯ ಎನ್ .ಎಸ್ ಭಟ್ಟ ಹಾಗೂ ಸುಮಾ ಎನ್ ಭಟ್ಟ ದಂಪತಿಯನ್ನು, ಕಟ್ಟಿಗೆ ಪ್ರಭಾವಳಿ ನೀಡಿದ ವಿಶ್ವನಾಥ ಭಟ್ಟ ಹಂಗಾರಿ,

ಅವರನ್ನು ಸಮಿತಿಯ ವತಿಯಿಂದ ಗೌರವಿಸಲಾಯಿತು. ಎಸ್ಸೆಸ್ಸೆಲ್ಸ್ಸಿಯಲ್ಲಿರಾಜ್ಯಕ್ಕೆ ನಾಲ್ಕನೇಯ ಸ್ಥಾನ ಪಡೆದ ಗ್ರಾಮದ ಸಮೃದ್ಧಿ ಭಾಗ್ವತ್ ಹಾಗೂ ಗಣೇಶ ಭಟ್ ಅವರನ್ನು ಪುರಸ್ಕರಿಸಲಾಯಿತು. ಸಮಿತಿಯ ಪರವಾಗಿ ಅಧ್ಯಕ್ಷ ಗೋಪಾಲ ಹಂಗಾರಿ, ಕಾರ್ಯದರ್ಶಿ ನರಸಿಂಹ ಬೋಳಪಾಲ್ ಭಾಗವಹಿಸಿದ್ದರು. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಪೋಟೊ : 30ವೈಎಲಪಿ1ಎ : ನರಸಿಂಹ ದೇವರು

30ವೈಎಲಪಿ1ಬಿ : ನೂತನ ದೀಪ ಸ್ತಂಭ