ಎಲ್ ಡಿಎಫ್ ಹಾಗೂ ಯುಡಿಎಫ್ ನಿಂದ ಸುಳ್ಳು ಭವರಸೆ: ಎ.ಪಿ. ಅಬ್ದುಲ್ಲಕುಟ್ಟಿ

Contributed bygangadhar.korekkana@gmail.com|Vijaya Karnataka

ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಎ.ಪಿ. ಅಬ್ದುಲ್ಲಕುಟ್ಟಿ ಅವರು ಎಲ್‌ಡಿಎಫ್‌ ಮತ್ತು ಯುಡಿಎಫ್‌ ಕಾಸರಗೋಡು ಜಿಲ್ಲೆಯಿಂದ ಮಹಿಳಾ ಪ್ರತಿನಿಧಿಯನ್ನು ಕಳುಹಿಸಿಲ್ಲ ಎಂದು ಹೇಳಿದ್ದಾರೆ. ಈ ಬಾರಿ ಎಂ.ಎಲ್‌. ಅಶ್ವಿನಿ ಜಿಲ್ಲೆಯ ಮೊದಲ ಮಹಿಳಾ ಶಾಸಕರಾಗಲಿದ್ದಾರೆ. ಕಾಸರಗೋಡಿನಲ್ಲಿ ಆಯುರ್ವೇದ ಅಥವಾ ಅಲೋಪತಿ ಏಮ್ಸ್‌ ಸ್ಥಾಪನೆ, ಆರು ಪಥಗಳ ಹೆದ್ದಾರಿ ಮೋದಿ ಕೊಡುಗೆ ಎಂದರು. ಹೆದ್ದಾರಿ ಅಭಿವೃದ್ಧಿಯಿಂದ ಸಾರಿಗೆ ಸುಧಾರಿಸಿದೆ, ಜೀವ ಉಳಿದಿದೆ ಎಂದು ತಿಳಿಸಿದರು.

ap abdullakutty attacks ldf and udf misses woman representative

ಕಾಸರಗೋಡು : ಪ್ರಗತಿ ಮತ್ತು ಮಹಿಳಾ ಸಮಾನತೆಯ ಬಗ್ಗೆ ಮಾತನಾಡುವ ಎಲ್ ಡಿಎಫ್ ಹಾಗೂ ಯುಡಿಎಫ್ ಇಲ್ಲಿಯವರೆಗೆ ಕಾಸರಗೋಡು ಜಿಲ್ಲೆಯಿಂದ ಒಬ್ಬ ಮಹಿಳಾ ಪ್ರತಿನಿಧಿಯನ್ನು ವಿಧಾನ ಸಭೆಗೆ ಕಳುಹಿಸಿಲ್ಲಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಎ.ಪಿ. ಅಬ್ದುಲ್ಲಕುಟ್ಟಿ ಹೇಳಿದರು.

ಕಾಸರಗೋಡು ಕ್ಷೇತ್ರದ ಎನ್ ಡಿಎ ಅಭ್ಯರ್ಥಿಯ ವಾಹನ ಪ್ರಚಾರ ರಾರ ಯಲಿಯನ್ನು ಉದ್ಘಾಟಿಸಿ ಮಾತನಾಡಿದರು.

ಈ ಬಾರಿಯ ಚುನಾವಣಾ ಫಲಿತಾಂಶಗಳು ಬಂದಾಗ, ಬಿಜೆಪಿಯ ಎಂ.ಎಲ್ . ಅಶ್ವಿನಿ ಜಿಲ್ಲೆಯ ಇತಿಹಾಸದಲ್ಲಿ ಮೊದಲ ಮಹಿಳಾ ಶಾಸಕಿಯಾಗಲಿದ್ದಾರೆ. ಪ್ರಸ್ತಾವಿತ ಆಯುರ್ವೇದ ಏಮ್ಸ್ , ಅಲೋಪತಿ ಏಮ್ಸ್ , ಅವುಗಳಲ್ಲಿಯಾವುದಾದರೂ ಒಂದನ್ನು ಕಾಸರಗೋಡಿನಲ್ಲಿ ಸ್ಥಾಪಿಸಲಾಗುವುದು. ಆರು ಪಥಗಳ ಹೆದ್ದಾರಿ ಮೋದಿ ಅವರ ಕೊಡುಗೆ ಎಂದವರು ಹೇಳಿದರು.

ಕೇರಳದಲ್ಲಿಪ್ರತಿ ವರ್ಷ 4000 ಮಂದಿ ಸಾವಿಗೀಡಾಗುವ ಮತ್ತು 50,000 ಜನರು ರಸ್ತೆ ಅಪಘಾತಗಳಲ್ಲಿ ಗಾಯಗೊಳ್ಳುವ ರಾಜ್ಯವಾಗಿದೆ. ಇದಕ್ಕೆ ಪರಿಹಾರವೆಂಬಂತೆ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಯಿಂದ ಸಾರಿಗೆ ಸೌಲಭ್ಯ ಸುಧಾರಿಸಿದೆ ಮತ್ತು ಸಮಯವನ್ನು ಉಳಿಸಿದೆ. ಮಾತ್ರವಲ್ಲದೆ ಜೀವಗಳನ್ನು ಉಳಿಸಿದೆ ಎಂದು ಅಬ್ದುಲ್ಲಕುಟ್ಟಿ ಹೇಳಿದರು.

ಕಾಸರಗೋಡು ಮಂಡಲ ಅಧ್ಯಕ್ಷ ಗುರುಪ್ರಸಾದ್ ಪ್ರಭು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ರಾಜ್ಯ ಸಮಿತಿ ಸದಸ್ಯೆ ಸವಿತಾ ಟೀಚರ್ , ಜಿಲ್ಲಾಪ್ರಧಾನ ಕಾರ್ಯದರ್ಶಿ ಪಿ.ಆರ್ .ಸುನೀಲ್ , ಜಿಲ್ಲಾಕಾರ್ಯದರ್ಶಿ ಪುಷ್ಪಾ ಗೋಪಾಲನ್ , ಒಬಿಸಿ ಮೋರ್ಚಾ ಜಿಲ್ಲಾಉಪಾಧ್ಯಕ್ಷ ಮುರಳಿಕುಮಾರ್ ಟಿ.ಡಿ., ಅಶ್ರಫ್ , ರಜಿನಿದೇವಿ ಮಾತನಾಡಿದರು.

ಕಾಸರಗೋಡು ಹೊಸ ನಿಲ್ದಾಣ ಪ್ರದೇಶದಿಂದ ಆರಂಭವಾದ ವಾಹನ ಯಾತ್ರೆಯು ಬಿ.ಸಿ. ರೋಡ್ , ಅಣಂಗೂರು, ರೈಲು ನಿಲ್ದಾಣ, ಕೊಲ್ಲಂಗಾನ, ಮಧೂರು, ಚೌಕಿ, ಪೆರಿಯಟಡ್ಕ, ಪೆರ್ನಡ್ಕದಲ್ಲಿಸಂಚರಿಸಿ ಉಳಿಯತಡ್ಕದಲ್ಲಿ ಸಮಾರೋಪಗೊಂಡಿತು.

ಚಿತ್ರ:4ಕೆಎಸ್ ಕುಟ್ಟಿ- ಅಬ್ದುಲ್ಲಕುಟ್ಟಿ ಮಾತನಾಡಿದರು.