ತಾಪಮಾನ ಹೆಚ್ಚಳ : ಜಾಗೃತಿ ಅವಶ್ಯ

Contributed bymadhugirinews@gmail.com|Vijaya Karnataka

ಈ ಬೇಸಿಗೆಯಲ್ಲಿ ತಾಪಮಾನ ಹೆಚ್ಚಳದ ಸಾಧ್ಯತೆ ಇದೆ. ಚಿಕ್ಕ ಮಕ್ಕಳು, ಗರ್ಭಿಣಿಯರು, ಬಾಣಂತಿಯರು, ವಯೋವೃದ್ಧರ ಆರೋಗ್ಯದ ಬಗ್ಗೆ ಕುಟುಂಬದವರು ಹೆಚ್ಚು ಗಮನ ಹರಿಸಬೇಕು. ಶುದ್ಧ ನೀರು ಕುಡಿಯುವುದು, ಮಸಾಲೆಯುಕ್ತ ಆಹಾರ ಕಡಿಮೆ ಮಾಡುವುದು ಮುಖ್ಯ. ತುರ್ತು ಪರಿಸ್ಥಿತಿಯಲ್ಲಿ 108ಕ್ಕೆ ಕರೆ ಮಾಡಿ ಸಹಾಯ ಪಡೆಯಬಹುದು.

heat and health important awareness information

ವಿಕ ಸುದ್ದಿಲೋಕ ತುಮಕೂರು

ಪ್ರಸ್ತುತ ವರ್ಷದ ಬೇಸಿಗೆಯು ಪ್ರಖರವಾಗಿರುವ ಸಾಧ್ಯತೆಗಳ ಬಗ್ಗೆ ವರದಿ ಹಿನ್ನೆಲೆಯಲ್ಲಿಮುಖ್ಯವಾಗಿ ಚಿಕ್ಕ ಮಕ್ಕಳು, ಗರ್ಭಿಣಿಯರು, ಬಾಣಂತಿಯರು, ವಯೋವೃದ್ಧರ ಕಾಳಜಿಗಾಗಿ ಕುಟುಂಬದ ಸದಸ್ಯರು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಡಿ.ಎಚ್ .ಒ ಡಾ ಚಂದ್ರಶೇಖರ್ ತಿಳಿಸಿದ್ದಾರೆ.

ಹೆರಿಗೆ ನಂತರ ಬಾಣಂತಿಯರು ನವಜಾತ ಶಿಶುವಿಗೆ ಮೇಲಿಂದ ಮೇಲೆ ಎದೆ ಹಾಲುಣಿಸುವ ಮೂಲಕ ಶಿಶುವಿನಲ್ಲಾಗುವ ನಿರ್ಜಲೀಕರಣ ತಡೆಯಲು ಸಹಕಾರಿಯಾಗುತ್ತದೆ. ರೋಗ ನಿರೋಧಕ ಶಕ್ತಿ ವೃದ್ಧಿಸಲು 12 ಮಾರಕ ರೋಗಗಳ ವಿರುದ್ಧ ಲಸಿಕೆ ಹಾಕಿಸಬೇಕು. ಪ್ರಖರ ಬಿಸಿಲಿನ ಅವಧಿಯಲ್ಲಿಆದಷ್ಟು ಮನೆಯ ಹೊರಗೆ ಹೋಗದಂತೆ ಮುತುವರ್ಜಿ ವಹಿಸಿ, ಮನೆಯ ಒಳಗೆ ಅಥವಾ ನೆರಳು ಇರುವ ಸ್ಥಳದಲ್ಲಿವಿಶ್ರಾಂತಿ ಪಡೆಯಬೇಕು. ಆದಷ್ಟು ಮಸಾಲೆಯುಕ್ತ ಪದಾರ್ಥಗಳ ಸೇವನೆ ಕಡಿಮೆ ಮಾಡಬೇಕು ಎಂದು ತಿಳಿಸಿದ್ದಾರೆ.

ವಾಂತಿ ಬೇಧಿ ತಡೆ: ಬೇಸಿಗೆಯಲ್ಲಿಕಲುಷಿತ ನೀರಿನ ಸೇವನೆಯಿಂದ ಸಂಭಾವ್ಯ ವಾಂತಿ-ಬೇಧಿ ಪ್ರಕರಣಗಳು ಉಂಟಾಗುವ ಹಿನ್ನೆಲೆಯಲ್ಲಿಶುದ್ಧೀಕರಿಸಿದ ನೀರು ಅಥವಾ ಶುದ್ಧೀಕರಣ ಘಟಕದ ನೀರನ್ನು ಕುಡಿಯಲು ಬಳಸಬೇಕು. ಅಲ್ಲದೆ, ಊಟದ ಮೊದಲು ಶೌಚದ ನಂತರ ಕೈಗಳನ್ನು ಸಾಬೂನು ಮತ್ತು ನೀರಿನಿಂದ 45 ಸೆಕೆಂಡ್ ಗಳ ಕಾಲ ತೊಳೆದ ನಂತರ ಆಹಾರ ಸೇವಿಸಬೇಕು. ಎಲ್ಲಸರಕಾರಿ ಆಸ್ಪತ್ರೆಗಳಲ್ಲಿಅಗತ್ಯ ಮುಂಜಾಗ್ರತಾ ಔಷಧಗಳು ಲಭ್ಯವಿದ್ದು, ಯಾವುದೇ ತುರ್ತು ಸಂದರ್ಭದಲ್ಲಿ108ಕ್ಕೆ ಕರೆ ಮಾಡಿ ಆಂಬ್ಯುಲೆನ್ಸ್ ಸದುಪಯೋಗ ಪಡೆದುಕೊಳ್ಳುಬಹುದು ಎಂದು ಡಾ ಚಂದ್ರಶೇಖರ್ ಪ್ರಕಟಣೆಯಲ್ಲಿತಿಳಿಸಿದ್ದಾರೆ.