ವಿಕ ಸುದ್ದಿಲೋಕ ಕಡಬ
ಕಡಬ ಪೇಟೆಯಲ್ಲಿರುವ ಬಸ್ ಪ್ರಯಾಣಿಕರ ತಂಗುದಾಣದಲ್ಲಿ ದಾನಿಗಳ ನೆರವಿನಿಂ¨ Üಅಳವಡಿಸಲಾಗಿರುವ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಪ್ರಯಾಣಿಕರ ವಿಸ್ತೃತ ವಿಶ್ರಾಂತಿ ಕೊಠಡಿಯ ಉದ್ಘಾಟನೆ ಮಂಗಳವಾರ ನಡೆಯಿತು.
ಉದ್ಘಾಟನೆ ನೆರವೇರಿಸಿದ ಕಡಬ ಪಟ್ಟಣ ಪಂಚಾಯಿತಿ ಅಧ್ಯಕ್ಷæ ತಮನ್ನಾ ಜಬೀನ್ ಮಾತನಾಡಿ, ಸಾರ್ವಜನಿಕರ ಅನುಕೂಲತೆಗಾಗಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಪ್ರಯಾಣಿಕರ ವಿಸ್ತೃತ ವಿಶ್ರಾಂತಿ ಕೊಠಡಿ ವ್ಯವಸ್ಥೆಗೊಳಿಸಲಾಗಿದೆ. ನಮ್ಮ ಕೋರಿಕೆಯ ಮೇರೆಗೆ ಕಡಬದ ಜೆಎಂಜೆ ಆಸ್ಪತ್ರೆಯ ಆಡಳಿತ ಮಂಡಳಿ ಕೊಡುಗೆಯಾಗಿ ನೀಡಿದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಅಳವಡಿಸಿದೆ. ಇಬ್ಬರು ಸ್ಥಳೀಯ ವರ್ತಕರು ಬಸ್ ಪ್ರಯಾಣಿಕರಿಗೆ ಕುಳಿತುಕೊಳ್ಳುವ ಬೆಂಚುಗಳನ್ನು ಕೊಡುಗೆಯಾಗಿ ನೀಡಿ ಸಹಕರಿಸಿದ್ದಾರೆ. ಪಟ್ಟಣ ಪಂಚಾಯಿತಿ ವತಿಯಿಂದ ನಿಲ್ದಾಣಕ್ಕೆ ಸುಣ್ಣ ಬಣ್ಣ ಬಳಿದು ದುರಸ್ತಿ ನಡೆಸಲಾಗಿದೆ. ಹೊಸದಾಗಿ ನೀರಿನ ಟ್ಯಾಂಕ್ ಅಳವಡಿಸಲಾಗಿದೆ ಎಂದರು.
ಕೆಎಸ್ಸಾರ್ಟಿಸಿ ಸಂಚಾರ ನಿಯಂತ್ರಕ ಕುಶಾಲಪ್ಪ ಗೌಡ ಮಾತನಾಡಿ, ಬಹಳಷ್ಟು ಜನ ಪ್ರಯಾಣಿಕರ ಬೇಡಿಕೆಯಾಗಿದ್ದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಪ್ರಯಾಣಿಕರ ವಿಸ್ತೃತ ವಿಶ್ರಾಂತಿ ಕೊಠಡಿ ಉದ್ಘಾಟನೆಯಾಗಿರುವುದು ಸಂತಸ ತಂದಿದೆ. ಅದರ ಜತೆಗೆ ಹೂವಿನ ಗಿಡಗಳ ಕುಂಡಗಳನ್ನು ಇರಿಸಿ ಬಸ್ ತಂಗುದಾಣದ ಗೋಡೆಗಳಿಗೆ ಸುಣ್ಣ ಬಣ್ಣ ಬಳಿದು ಸೌಂದರ್ಯ ವೃದ್ಧಿಸಿರುವುದು ಅಭಿನಂದನಾರ್ಹ ಎಂದರು.
ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಂ.ಹನೀಫ್ , ಉಪಾಧ್ಯಕ್ಷೆ ನೀಲಾವತಿ ಶಿವರಾಮ್ , ಮುಖ್ಯಾಧಿಕಾರಿ ಲೀಲಾವತಿ ಇ., ಸದಸ್ಯರಾದ ದಯಾನಂದ ಪಿಜಕ್ಕಳ, ಕೃಷ್ಣಪ್ಪ ಬೈಲಂಗಡಿ, ರೋಹಿತ್ ಪಣೆಮಜಲು, ಅಕ್ಷತಾ ಮಣಿಮುಂಡ, ಗುಣವತಿ ರಘುರಾಮ, ಮೋಹನ, ಕೃಷ್ಣಪ್ಪ ನಾಯ್ ್ಕ, ಕುಸುಮ ಅಂಗಡಿಮನೆ, ಪ್ರಮುಖರಾದ ಸಯ್ಯದ್ ಇಕ್ಬಾಲ್ , ಸತೀಶ್ ನಾಯ್ ್ಕ ಮೇಲಿನಮನೆ ಮತ್ತಿತರರು ಉಪಸ್ಥಿತರಿದ್ದರು.
ಪಟ್ಟಣ ಪಂಚಾಯಿತಿ ಸಿಬಂದಿ ಹರೀಶ್ ಬೆದ್ರಾಜೆ ಸ್ವಾಗತಿಸಿ, ವಂದಿಸಿದರು.
(ಅಧ್ಯಕ್ಷæ ತಮನ್ನಾ ಜಬೀನ್ ಉದ್ಘಾಟಿಸಿದರು:ಫೋಟೋ....31ಕೆಡಿಬಿ ಯುಜಿ)

