ಬಸ್ ಸಂಚಾರದಲ್ಲೂಕಲಬುರಗಿಗೆ ಅನ್ಯಾಯ

Contributed byvenkatesh.narasappa@timesgroup.com|Vijaya Karnataka

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ಇತರ ನಿಗಮಗಳಿಗೆ ಹೆಚ್ಚಿನ ಬಸ್‌ಗಳು ಸಂಚರಿಸುತ್ತಿವೆ. ಆದರೆ, ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ಕಲಬುರಗಿಗೆ ಕೇವಲ ಎರಡು ಬಸ್‌ಗಳು ಮಾತ್ರ ಸಂಚರಿಸುತ್ತಿವೆ. ಇದು ಜಿಲ್ಲೆಯ ಜನರಿಗೆ ತೀವ್ರ ಅಸಮಾಧಾನ ಮೂಡಿಸಿದೆ. ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳಿಂದಲೂ ಕಲಬುರಗಿಗೆ ಬಸ್‌ಗಳ ಸಂಚಾರ ಕಡಿಮೆ ಇದೆ. ಈ ತಾರತಮ್ಯವನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.

injustice in bus transport to kalaburagi locals demand action from authorities

ಟೇಬಲ್ ...

ಕೆಕೆಆರ್ ಟಿಸಿಯಿಂದ ಬೇರೆ ನಿಗಮಗಳಿಗೆ ಹೋಗುವ ಬಸ್

ನಿಗಮ ಬೇರೆ ನಿಗಮ ಬಸ್ ಸಂಚಾರ

ಕೆಕೆಆರ್ ಟಿಸಿ ಕೆಎಸ್ ಆರ್ ಟಿಸಿ 42

ಕೆಕೆಆರ್ ಟಿಸಿ ಎನ್ ಡಬ್ಲ್ಯುಕೆಆರ್ ಟಿಸಿ 35

ಕೆಕೆಆರ್ ಟಿಸಿ ತೆಲಂಗಾಣ 49

ಕೆಕೆಆರ್ ಟಿಸಿ ಮಹಾರಾಷ್ಟ್ರ 14

ಒಟ್ಟು 140

**

ಟೇಬಲ್

ಬೇರೆ ನಿಗಮಗಳಿಂದ ಕೆಕೆಆರ್ ಟಿಸಿಗೆ ಸಂಚರಿಸುವ ಬಸ್

ನಿಗಮ ಕೆಕೆಆರ್ ಟಿಸಿ ಬಸ್ ಸಂಚಾರ

ಕೆಎಸ್ ಆರ್ ಟಿಸಿ ಕೆಕೆಆರ್ ಟಿಸಿ 02

ಎನ್ ಡಬ್ಲ್ಯುಕೆಆರ್ ಟಿಸಿ ಕೆಕೆಆರ್ ಟಿಸಿ 32

ತೆಲಂಗಾಣ ಕೆಕೆಆರ್ ಟಿಸಿ 06

ಮಹಾರಾಷ್ಟ್ರ ಕೆಕೆಆರ್ ಟಿಸಿ 05

**

(ಕಿಕ್ಕರ್ ) ಕಲಬುರಗಿಯಿಂದ ಬೇರೆ ನಿಗಮಳಿಗೆ ಹೆಚ್ಚು ಬಸ್ | ಕೆಎಸ್ ಆರ್ ಟಿಸಿಯಿಂದ ಕಲಬುರಗಿಗೆ ಕೇವಲ ಎರಡೇ ಬಸ್ ಸಂಚಾರ

ಬಸ್ ಸಂಚಾರದಲ್ಲೂಕಲಬುರಗಿಗೆ ಅನ್ಯಾಯ

ವೆಂಕಟೇಶ ಏಗನೂರು ಕಲಬುರಗಿ

್ಖಛ್ಞಿkaಠಿಛಿsh.್ಞa್ಟasappaಃಠಿಜಿಞಛಿsಟ್ಛಜ್ಞಿdಜಿa.್ಚಟಞ

ಕೆಕೆಆರ್ ಟಿಸಿಯಿಂದ ಕೆಎಸ್ ಆರ್ ಟಿಸಿಗೆ ಹೆಚ್ಚು ಬಸ್ ಸಂಚರಿಸುತ್ತಿದ್ದರೂ ಕೆಎಸ್ ಆರ್ ಟಿಸಿಯಿಂದ ಮಾತ್ರ ಕಲಬುರಗಿಗೆ ಅತೀ ಕಡಿಮೆ ಬಸ್ ಸಂಚರಿಸುತ್ತಿವೆ. ಈ ತಾರತಮ್ಯ ಧೋರಣೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ರಾಜ್ಯದಲ್ಲಿಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಮತ್ತು ಕರ್ನಾಟಕ ರಸ್ತೆ ಸಾರಿಗೆ ನಿಗಮಗಳಿಂದ ರಾಜ್ಯದ ಎಲ್ಲಜಿಲ್ಲೆಗಳಿಗೆ ಬಸ್ ಗಳು ಸಂಚರಿಸುತ್ತಿವೆ. ಆದರೆ, ನಮ್ಮ ಭಾಗದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ಬೇರೆ ನಿಗಮಗಳ ವ್ಯಾಪ್ತಿಯ ಜಿಲ್ಲೆಗಳಿಗೆ ಬಸ್ ಗಳು ಸಂಚರಿಸುತ್ತಿವೆ. ಆದರೆ, ಬೇರೆ ಭಾಗದ ನಿಗಮಗಳಿಂದಲೂ ನಮ್ಮ ಜಿಲ್ಲೆಗೆ ಬಸ್ ಗಳ ಸಂಚಾರವೂ ಅಷ್ಟೇ ಇರಬೇಕು. ಆದರೆ, ನಮ್ಮ ಕೆಕೆಆರ್ ಟಿಸಿ ಭಾಗದಿಂದ ಮಾತ್ರ ಬಸ್ ಗಳು ಹೆಚ್ಚು ಸಂಚರಿಸುತ್ತಿದ್ದರೂ ಬೇರೆ ನಿಗಮಗಳಿಂದ ಬಸ್ ಸಂಚಾರ ಕಲಬುರಗಿಗೆ ಅತಿ ಕಡಿಮೆ ಸಂಚರಿಸುತ್ತಿರುವುದು ಜಿಲ್ಲೆಯ ಜನರಿಗೆ ತೀವ್ರ ಬೇಸರ ಮೂಡಿಸಿದೆ. ಇದರಿಂದ ಬೇರೆ ನಿಗಮಗಳಿಂದಲೂ ಹೆಚ್ಚು ಬಸ್ ಸಂಚಾರ ಮಾಡಿ ತಾರತಮ್ಯ ಧೋರಣೆ ನಿವಾರಿಸಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.

*ಕೆಎಸ್ ಆರ್ ಟಿಯಿಂದ ಕಲಬುರಗಿಗೆ 2 ಬಸ್ !

ನಮ್ಮ ಕೆಕೆಆರಟಿಸಿಯ ಕಲಬುರಗಿಯಿಂದ ಕೆಎಸ್ ಆರ್ ಟಿಸಿಗೆ ಬೆಂಗಳೂರು, ಮಂಗಳೂರು, ಶಿವಮೊಗ್ಗ, ಮೈಸೂರು, ಹಾಸನ ಸೇರಿ ವಿವಿಧ ಜಿಲ್ಲೆಗಳಿಗೆ 42 ಬಸ್ ಗಳು ಸಂಚರಿಸುತ್ತಿವೆ. ಆದರೆ, ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ಕೇವಲ ಎರಡೇ ಬಸ್ ಗಳು ಕಲಬುರಗಿಗೆ ಸಂಚರಿಸುತ್ತಿವೆ. ಅದೂ ಸಹ ದಾವಣಗೆರೆಯಿಂದ ಸಂಚರಿಸುತ್ತಿವೆ. ಒಂದು ಸ್ಲೀಪರ್ ಬಸ್ ಬಂದರೆ, ಇನ್ನೊಂದು ಸಾಮಾನ್ಯ ಬಸ್ ಅಲ್ಲಿಂದ ಸಂಚರಿಸುತ್ತಿದೆ. ಇದು ತಾರತಮ್ಯ ಧೋರಣೆಯಲ್ಲದೆ ಮತ್ತೇನು ಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ.

*ಎನ್ ಡಬ್ಲ್ಯುಕೆಆರ್ ಟಿಸಿಯಿಂದ ಪರವಾಗಿಲ್ಲ

ಕಲಬುರಗಿಯಿಂದ ಎನ್ ಡಬ್ಲ್ಯುಕೆಆರ್ ಟಿಸಿಯ ಜಿಲ್ಲೆಗಳಿಗೆ ಬರೋಬ್ಬರಿ 35 ಬಸ್ ಗಳು ಸಂಚರಿಸುತ್ತಿವೆ. ಎನ್ ಡಬ್ಲ್ಯುಕೆಆರ್ ಟಿಸಿಯಿಂದ ಕಲಬುರಗಿಗೆ 32 ಬಸ್ ಗಳು ಸಂಚರಿಸುತ್ತಿವೆ. ಕೆಎಸ್ ಆರ್ ಟಿಸಿಗೆ ಹೋಲಿಸಿದರೆ ಇದು ಬಹುತೇಕ ಉತ್ತಮ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಬಾಕ್ಸ್ ...

ಬೇರೆ ರಾಜ್ಯಗಳಿಂದಲೂ ಕಡಿಮೆ

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮವಿರುವ ಕಲಬುರಗಿಯಿಂದ ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳಿಗೂ ಹೆಚ್ಚು ಸಂಚರಿಸುತ್ತಿವೆ. ಆದರೆ, ಆ ರಾಜ್ಯಗಳಿಂದ ನಮ್ಮ ಕಲಬುರಗಿಗೆ ಅತೀ ಕಡಿಮೆ ಬಸ್ ಗಳು ಸಂಚರಿಸುತ್ತಿವೆ. ಕಲಬುರಗಿಯಿಂದ ತೆಲಂಗಾಣಕ್ಕೆ 49 ಬಸ್ ಬಂದರೆ ತೆಲಂಗಾಣದಿಂದ ಕಲಬುರಗಿಗೆ ಕೇವಲ 6 ಬಸ್ ಸಂಚರಿಸುತ್ತಿವೆ. ಅದೇರೀತಿ ಕಲಬುರಗಿಯಿಂದ ಮಹಾರಾಷ್ಟ್ರಕ್ಕೆ 14 ಬಸ್ ಸಂಚರಿಸುತ್ತಿದ್ದರೆ, ಮಹಾರಾಷ್ಟ್ರದಿಂದ ಕಲಬುರಗಿಗೆ ಕೇವಲ 5 ಬಸ್ ಗಳು ಮಾತ್ರ ಸಂಚರಿಸುತ್ತಿವೆ. ಇದರಿಂದ ಅನ್ಯ ರಾಜ್ಯಗಳಿಂದಲೂ ಅನ್ಯಾಯ ಆಗುತ್ತಿದೆ.

*

ಬಾಕ್ಸ್ ...

ನಮ್ಮ ಬಸ್ ಗಳೇ ಹೆಚ್ಚು ಸಂಚಾರದಿಂದ ತೊಂದರೆ

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ ಗಳೇ ಬೇರೆ ನಿಗಮಗಳಿಗೆ ಹೆಚ್ಚು ಬಸ್ ಸಂಚರಿಸಿದರೆ ನಮ್ಮ ನಿಗಮ ವ್ಯಾಪ್ತಿಯಲ್ಲಿವಿವಿಧ ಗ್ರಾಮ, ತಾಲೂಕು, ಜಿಲ್ಲೆಗಳಿಗೆ ಸಂಚರಿಸಲು ಬಸ್ ಕೊರತೆ ಆಗಲಿದೆ. ಜತೆಗೆ ನಮ್ಮ ನಿಗಮದಿಂದ ಇಂತಿಷ್ಟು ಬಸ್ ಸಂಚರಿಸುತ್ತಿರಬೇಕಾದರೆ, ಬೇರೆ ನಿಗಮದಿಂದಲೂ ಇಂತಿಷ್ಟೇ ಬಸ್ ಸಂಚಾರ ಮಾಡಬೇಕೆಂಬ ನಿಯಮ ರೂಪಿಸಬೇಕು. ಹಾಗಾದಾಗ ತಾರತಮ್ಯ ಆಗುವುದಿಲ್ಲಎಂಬುದು ಸಾರ್ವಜನಿಕರ ಹೇಳುತ್ತಾರೆ.

*

ಕೋಟ್ ...

ಕಲಬುರಗಿಯಿಂದ ಬೇರೆ ನಿಗಮಗಳಿಗೆ ಹೆಚ್ಚು ಬಸ್ ಸಂಚರಿಸುತ್ತವೆ. ಆದರೆ, ಬೇರೆ ನಿಮಗಳಿಂದ ಕಲಬುರಗಿಗೆ ಹೆಚ್ಚು ಬಸ್ ಸಂಚಾರ ಮಾಡದಿರುವುದು ತಾರತಮ್ಯ. ಕೆಎಸ್ ಆರ್ ಟಿಸಿಯಿಂದ ಬೆಂಗಳೂರಿನಿಂದ ಕಲಬುರಗಿಗೆ ಒಂದೇ ಬಸ್ ಸಂಚಾರವಿಲ್ಲ. ಇದು ಅನ್ಯಾಯ. ಕೂಡಲೇ ಅಧಿಕಾರಿಗಳು ಸರಿಪಡಿಸಬೇಕು.

- ಮುತ್ತಣ್ಣ ಎಸ್ .ನಡಿಗೇರಿ, ಜಿಲ್ಲಾಧ್ಯಕ್ಷ, ಕಲ್ಯಾಣ ನಾಡು ವಿಕಾಸ ವೇದಿಕೆ, ಕಲಬುರಗಿ