ಸಾದಿಖಲಿ ತಂಙಳ್
ಕಾಸರಗೋಡು: ಹತ್ತು ವರ್ಷಗಳ ಎಡರಂಗದ ಆಡಳಿತವು ನಾಡಿನ ಅಭಿವೃದ್ಧಿಯನ್ನು ತಟಸ್ಥಗೊಳಿಸಿದೆ ಎಂದು ಮುಸ್ಲಿಂ ಲೀಗ್ ರಾಜ್ಯಾಧ್ಯಕ್ಷ ಪಾಣಕ್ಕಾಡು ಸಾದಿಖಲಿ ಶಿಹಾಬ್ ತಙಳ್ ಹೇಳಿದರು.
ಕಾಸರಗೋಡು ವಿಧಾನಸಭಾ ಕ್ಷೇತ್ರ ಯುಡಿಎಫ್ ಅಭ್ಯರ್ಥಿ ಕಲ್ಲಟ್ರ ಮಾಹಿನ್ ಅವರ ಚುನಾವಣೆ ಪ್ರಚಾರ ಪ್ರಯುಕ್ತ ಚೆಂಗಳ ಎಂ.ಎಂ. ಕಾಂಪೌಂಡ್ ನಲ್ಲಿಶನಿವಾರ ನಡೆದ ಕುಟುಂಬ ಸಂಗಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆನರ ಕಣ್ಣೀರು ಒರೆಸಬೇಕಾದ ಸರಕಾರವು ನಿತ್ಯೋಪಯೋಗಿ ಸಾಮಗ್ರಿಗಳ ಬೆಲೆ ಹೆಚ್ಚಿಸಿ, ತೆರಿಗೆ ಭಾರ ವಿಧಿಸಿ ಜನರನ್ನು ಕಷ್ಟಕ್ಕೆ ಸಿಲುಕಿಸಿದೆ. ಇದಕ್ಕೆ ಚುನಾವಣೆಯಲ್ಲಿ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಸಾದಿಖಲಿ ತಙಳ್ ಹೇಳಿದರು.
ಪಂಚಾಯಿತಿ ಯುಡಿಎಫ್ ಅಧ್ಯಕ್ಷ ಜಲೀಲ್ ಎರುತುಂಕಡವ್ ಅಧ್ಯಕ್ಷತೆ ವಹಿಸಿದ್ದರು. ಅಭ್ಯರ್ಥಿ ಕಲ್ಲಟ್ರ ಮಾಹಿನ್ , ಸಂಚಾಲಕ ಎಂ.ಎ.ರಝಾಕ್ , ರಾಜ್ಯ ಕೋಶಾಧಿಕಾರಿ ಸಿ. ಟಿ. ಅಹಮ್ಮದಲಿ, ರಾಜ್ಯ ಸೆಕ್ರೆಟರಿಯೇಟ್ ಸದಸ್ಯರಾದ ಎನ್ .ಎ.ನೆಲ್ಲಿಕುನ್ನು, ಬಶೀರ್ ವೆಳ್ಳಿಕ್ಕೋತ್ , ಜಿಲ್ಲಾಪ್ರಧಾನ ಕಾರ ್ಯದರ್ಶಿ ಎ.ಅಬ್ದುಲ್ ರಹ್ಮಾನ್ , ಕೋಶಾಧಿಕಾರಿ ಪಿ.ಎಂ.ಮುನೀರ್ ಹಾಜಿ, ಉಪಾಧ್ಯಕ್ಷ ಕೆ.ಇ.ಎ.ಬಕ್ಕರ್ , ನ್ಯಾಯವಾದಿ ಎನ್ .ಎ. ಖಾಲಿದ್ ಮತ್ತಿತರರು ಮಾತನಾಡಿದರು.
ಚಿತ್ರ: 5ಕೆಎಸ್ ಎಲ್ ಚೆಂಗಳ- ಮುಸ್ಲಿಂ ಲೀಗ್ ರಾಜ್ಯಾಧ್ಯಕ್ಷ ಪಾಣಕ್ಕಾಡು ಸಾದಿಖಲಿ ಶಿಹಾಬ್ ತಂಙಳ್ ಕುಟುಂಬ ಸಂಗಮವನ್ನು ಉದ್ಘಾಟಿಸಿದರು.

