ಮೇವುಂಡಿಯಲ್ಲಿಬಿಜೆಪಿ ಸಂಸ್ಥಾಪನಾ ದಿನಾಚರಣೆ
ವಿಕ ಸುದ್ದಿಲೋಕ ಮುಂಡರಗಿ
ವಿಶ್ವದ ಅತೀ ದೊಡ್ಡ ರಾಜಕೀಯ ಪಕ್ಷವಾಗಿ ಬೆಳೆದ ಬಿಜೆಪಿಗೆ ಆಯಾ ರಾಜ್ಯದ ಲಕ್ಷಾಂತರ ಕಾರ್ಯಕರ್ತರ ಶ್ರಮ, ತ್ಯಾಗ ಮತ್ತು ಸಂಘಟನೆಯ ಶಕ್ತಿಯೇ ಕಾರಣ ಎಂದು ಡಂಬಳ ಹೋಬಳಿ ಬಿಜೆಪಿ ಮಂಡಲ ಅಧ್ಯಕ್ಷ ಅಂದಪ್ಪ ಹಾರೋಗೇರಿ ಅಭಿಪ್ರಾಯ ಪಟ್ಟರು.
ಬಿಜೆಪಿ ಸಂಸ್ಥಾಪನಾ ದಿನದಂದು ಮೇವುಂಡಿ ಬೂತ್ ಅಧ್ಯಕ್ಷ ಕೊಟೇಶ ಸಿಂದೋಗಿ ಅವರ ಮನೆ ಮೇಲೆ ಬಿಜೆಪಿ ದ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಸಂಘಟನೆ, ಸಮರ್ಪಣೆ, ಸೇವೆ, ತ್ಯಾಗ ಮತ್ತು ಸಂಘಟನೆ ತತ್ವಾದರ್ಶಗಳನ್ನು ಅಳವಡಿಸಿಕೊಂಡು ದೇಶವೇ ಮೊದಲ ಆದ್ಯತೆ ಎಂದು ಪಕ್ಷವನ್ನು ಸಂಘಟನೆ ಮಾಡಿದ ಪಕ್ಷದ ಹಿರಿಯರನ್ನು ಸ್ಮರಿಸುವದು ಅಗತ್ಯವಾಗಿದ್ದು, ರೋಣ ಮತಕ್ಷೇತ್ರದ ಮಾಜಿ ಸಚಿವ ಕಳಕಪ್ಪ ಬಂಡಿ ಮಾರ್ಗದರ್ಶನಲ್ಲಿಕ್ಷೇತ್ರಾದ್ಯಂತ ಪಕ್ಷವನ್ನು ಇನ್ನಷ್ಟು ತಳಮಟ್ಟದಲ್ಲಿಗಟ್ಟಿಗೊಳಿಸುವ ಕೆಲಸವಾಗುತ್ತಿದೆ ಎಂದರು.
ಒಗ್ಗಟ್ಟಿನಿಂದ ಕೆಲಸ ಮಾಡೋಣ
ಬಿಜೆಪಿ ಎಸ್ ಸಿ ಮೋರ್ಚಾ ಅಧ್ಯಕ್ಷ ಕೃಷ್ಣಾ ಬಂಡಿ ಮಾತನಾಡಿ, ಪಕ್ಷದ ಸಂಸ್ಥಾಪಕರ ಆದರ್ಶಗಳು ಹಾಗೂ ಕಾರ್ಯಕರ್ತರ ನಿಷ್ಠೆಯೇ ಬಿಜೆಪಿ ಪಕ್ಷವನ್ನು ಇಂಉ ದೇಶಾದ್ಯಂತ ಉತ್ತುಂಗಕ್ಕೆ ಮಟ್ಟಕ್ಕೆ ತರಲಾಗಿದೆ, ಗ್ರಾಮ ಮಟ್ಟದಲ್ಲಿಯೂ ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸಲು ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದೆ.
ಕಾರ್ಯದರ್ಶಿ ಪಂಚಾಕ್ಷರಯ್ಯ ಹರ್ಲಾಪೂರಮಠ, ಮೈಲಾರಪ್ಪ ನೋಟಗಾರ,ಗೋಪಾಲ ವಾಲಿಕಾರ, ದೇವಪ್ಪ ತಾಮ್ರಗುಂಡಿ, ಜಿಲ್ಲಾಯುವಮೋರ್ಚಾ ಉಪಾಧ್ಯಕ್ಷ ರಾಜೇಶ ಅರಕಾಲ, ಜಿಲ್ಲಾಉಪಾಧ್ಯಕ್ಷ ಪ್ರಭು ಕೊರ್ಲಹಳ್ಳಿ, ಪ್ರಕಾಶ ಕೋತಂಬ್ರಿ, ಪ್ರಭು ಕರಮುಡಿ, ಮುತ್ತು ಚಿನ್ನಪ್ಪಗೌಡ್ರ, ಮುತ್ತಣ್ನ ಬಿಸನಳ್ಳಿ, ನಿಂಗಪ್ಪ ಮಡಿವಾಳರ, ಮಹಾಂತೇಶ ಕೊಡಗಾನೂರ, ಸೋಮಶೇಖರಯ್ಯ, ಮುದುಕಪ್ಪ ಮುಳಗುಂದ, ಶಿವಾನಂದ ಬಂಡಿ, ಮಾಂತೇಶ ಬಂಡಿ, ಲಕ್ಷತ್ರ್ಮಣ ಬೂದಿಹಾಳ, ಮಲ್ಲೇಶ ಪೂಜಾರ, ವಿನಾಯಕ ರಾಠೋಡ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ಪೋಟೊ ಶಿರ್ಷಿಕೆ7ಎಂಡಿಆರ್ 1 ಮುಂಡರಗಿ ತಾಲೂಕಿನ ಮೇವುಂಡಿ ಗ್ರಾಮದಲ್ಲಿಬಿಜೆಪಿ ಸಂಸ್ಥಾಪನಾ ದಿನ ನಿಮಿತ್ತ ಡಂಬಳ ಮಂಡಲ ಬಿಜೆಪಿ ಅಧ್ಯಕ್ಷ ಅಂದಪ್ಪ ಹಾರೋಗೇರಿ ಬಿಜೆಪಿ ಪಕ್ಷದ ದ್ವಜಾರೋಹಣ ಮೂಲಕ ಚಾಲನೆ ನೀಡಿದರು.

