ಸಂಗಮೇಶ್ವರ ಅದ್ಧೂರಿ ರಥೋತ್ಸವ

Contributed bysggoudarsk@gmail.com|Vijaya Karnataka

ಕೂಡಲಸಂಗಮದಲ್ಲಿ ಸಂಗಮನಾಥನ ಅದ್ಧೂರಿ ರಥೋತ್ಸವ ಮಂಗಳವಾರ ಸಂಜೆ ನಡೆಯಿತು. ರಾಜ್ಯದ ನಾನಾ ಭಾಗದ ಭಕ್ತರು ಉತ್ಸವದಲ್ಲಿ ಭಾಗವಹಿಸಿ ರಥ ಎಳೆದರು. ರಥೋತ್ಸವಕ್ಕೂ ಮುನ್ನ ವಿವಿಧ ಸ್ಥಳಗಳಿಂದ ಸಾಮಗ್ರಿಗಳನ್ನು ಮೆರವಣಿಗೆಯಲ್ಲಿ ತರಲಾಯಿತು. ಜಾತ್ರೆಯಲ್ಲಿ ಜನಸಂದಣಿ ಹೆಚ್ಚಾಗಿತ್ತು. ರಥೋತ್ಸವ ನಿಗದಿತ ಸಮಯಕ್ಕಿಂತ ತಡವಾಗಿ ಆರಂಭವಾಯಿತು. ಮೊಬೈಲ್ ನೆಟ್‌ವರ್ಕ್ ಸಮಸ್ಯೆಯಿಂದ ಸಂಪರ್ಕಕ್ಕೆ ತೊಂದರೆಯಾಯಿತು.

sangameshwara chariot festival grand celebration and devotee influx

ಸಂಗಮೇಶ್ವರ ಅದ್ಧೂರಿ ರಥೋತ್ಸವ

ಕೂಡಲಸಂಗಮ: ಕ್ಷೇತ್ರಾಧಿಪತಿ ಸಂಗಮನಾಥನ ರಥೋತ್ಸವ ಸಂಭ್ರಮದಿಂದ ಮಂಗಳವಾರ ಸಂಜೆ ನಡೆಯಿತು. ರಾಜ್ಯದ ನಾನಾ ಭಾಗದ ಅಪಾರ ಭಕ್ತರು ಉತ್ಸವದಲ್ಲಿಭಾಗಿಯಾಗಿ ರಥ ಎಳೆದು ಸಂಭ್ರಮಿಸಿದರು.

ರಥೋತ್ಸವಕ್ಕೂ ಮುನ್ನ ಗಂಜಿಹಾಳದಿಂದ ತಳಿರು ತೋರಣ, ನಂದಿಕೋಲು, ಬಾಳೆ ಕಂಬ , ಬೆಳಗಲ್ಲದಿಂದ ರಥದ ಹಗ್ಗ, ಇದ್ದಲಗಿಯಿಂದ ಹಿಲಾಲ, ಗುಳೇದಗುಡ್ಡದ ಹುಚ್ಚಯ್ಯನ ಕಳಸವನ್ನು ಮೆರವಣಿಗೆ ಮೂಲಕ ತರಲಾಯಿತು.

ಜಾತ್ರೆ ವೇಳೆ ವಾಹನ ದಟ್ಟನೆ ಅಧಿಕವಾಗಿತ್ತು. ರಸ್ತೆ ಮಧ್ಯೆ ಟ್ರ್ಯಾಕ್ಟರ್ ಗಳು ನಿಂತ ಪರಿಣಾಮ ಭಕ್ತರು ಸಂಚರಿಸಲು ತೊಂದರೆ ಅನುಭವಿಸಿದರು.

6 ಗಂಟೆ ಬದಲು 7.10ಕ್ಕೆ ರಥೋತ್ಸವ:

ಸಂಜೆ 6 ಗಂಟೆಗೆ ಆರಂಭವಾಗಬೇಕಿದ್ದ ರಥೋತ್ಸವಕ್ಕೆ 7.10 ಗಂಟೆಗೆ ಕತ್ತಲೆಯಲ್ಲಿಚಾಲನೆ ನೀಡಿದ್ದರಿಂದ ಭಕ್ತರು ಆಡಳಿತ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜಾತ್ರೆಯಲ್ಲಿಅಧಿಕ ಜನರು ಸೇರಿದ್ದರಿಂದ ಮೊಬೈಲ್ ನೆಟ್ ವರ್ಕ್ ಜಾಮ್ ಆಗಿ ಸಂಪರ್ಕಕ್ಕೆ ತೊಂದರೆ ಅನುಭವಿಸಿದರು.

-------------

ಚಿತ್ರ ವಿವರ

7 ಕೆ.ಯು.ಡಿ.ಎಲ್ 2

ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮ ಕ್ಷೇತ್ರಾಧಿಪತಿ ಸಂಗಮನಾಥ ರಥೋತ್ಸವ ಮಂಗಳವಾರ ಅದ್ಧೂರಿಯಿಂದ ನಡೆಯಿತು.