ರಾಜ್ಯಮಟ್ಟದ ವಿಟಿಯು ಅಥ್ಲೆಟಿಕ್

Contributed bystevan.rego@timesgroup.com|Vijaya Karnataka

ತಿಪಟೂರು ಕಲ್ಪತರು ಇನ್‌ಸ್ಟಿಟ್ಯೂಟ್‌ನಲ್ಲಿ ನಡೆದ ರಾಜ್ಯ ಮಟ್ಟದ ವಿಟಿಯು ಅಥ್ಲೆಟಿಕ್ಸ್‌ನಲ್ಲಿ ಶ್ರೀದೇವಿ ಇನ್‌ಸ್ಟಿಟ್ಯೂಟ್‌ನ ಕ್ರೀಡಾಪಟುಗಳು ಮಿಂಚಿದ್ದಾರೆ. ಶ್ರೇಯ ಎಂ. ಮೂರು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಚೈತನ್ಯ ಒಂದು ಚಿನ್ನ ಹಾಗೂ ಒಂದು ಕಂಚಿನ ಪದಕಕ್ಕೆ ಭಾಜನರಾಗಿದ್ದಾರೆ. ಅಯೇಷಾ ಸಾನಿಯ ಶಾಟ್‌ಪುಟ್‌ನಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. ಒಟ್ಟಾರೆಯಾಗಿ ಸಂಸ್ಥೆಯು ಉತ್ತಮ ಸಾಧನೆ ಮಾಡಿದೆ.

sridevi institutes excellence in state level athletics

ಶ್ರೀದೇವಿ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ಪ್ರಶಸ್ತಿ

ವಿಕ ಸುದ್ದಿಲೋಕ ಮಂಗಳೂರು

ತಿಪಟೂರು ಕಲ್ಪತರು ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿಇತ್ತೀಚೆಗೆ ನಡೆದ ರಾಜ್ಯ ಮಟ್ಟದ ವಿಟಿಯು ಅಥ್ಲೆಟಿಕ್ಸ್ ನಲ್ಲಿಶ್ರೀದೇವಿ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿಗಳು ನಾಲ್ಕು ಚಿನ್ನದ ಪದಕ, ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಪಡೆದುಕೊಂಡಿದ್ದಾರೆ.

ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯೂನಿಕೇಶನ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿನಿ ಶ್ರೇಯ ಎಂ. ಹಾಫ್ ಮ್ಯಾರಾಥನ್ ಓಟದಲ್ಲಿ (21 ಕಿ.ಮೀ.) 1 ಗಂಟೆ 26 ನಿಮಿಷ ಮತ್ತು 1500 ಮೀ. ಓಟದ ಸ್ಪರ್ಧೆಯಲ್ಲಿ5.02 ನಿಮಿಷ ಹಾಗೂ 5000 ಮೀ. ಓಟದ ಸ್ಪರ್ಧೆಯಲ್ಲಿ19.05 ನಿಮಿಷದಲ್ಲಿಪೂರ್ಣಗೊಳಿಸುವ ಮೂಲಕ ಹೊಸ ಕೂಟ ದಾಖಲೆಗಳೊಂದಿಗೆ ಚಿನ್ನದ ಪದಕ ಪಡೆದಿದ್ದಾರೆ.

ತೃತೀಯ ವರ್ಷದ ಏರೋನಾಟಿಕಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿನಿ ಚೈತನ್ಯ ಅವರು 100 ಮಿ. ಹರ್ಡಲ್ಸ್ ಓಟದ ಸ್ಪರ್ಧೆಯಲ್ಲಿ 17.67 ಸೆಕೆಂಡ್ ನಲ್ಲಿಪೂರ್ಣಗೊಳಿಸಿ ಚಿನ್ನದ ಪದಕ ಮತ್ತು 100 ಮಿ. ಓಟದ ಸ್ಪರ್ಧೆಯಲ್ಲಿ 14.4 ಸೆಕೆಂಡ್ ನಲ್ಲಿಪೂರ್ಣಗೊಳಿಸಿ ಕಂಚಿನ ಪದಕ ಪಡೆದಿದ್ದಾರೆ. ಕಂಪ್ಯೂಟರ್ ಸಯನ್ಸ್ ಆ್ಯಂಡ್ ಎಂಜಿನಿಯರಿಂಗ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿನಿ ಅಯೇಷಾ ಸಾನಿಯ ಶಾಟ್ ಪುಟ್ ವಿಭಾಗದಲ್ಲಿ9.27 ಮೀ. ದೂರ ಎಸೆಯುವ ಮೂಲಕ ಬೆಳ್ಳಿ ಪದಕವನ್ನು ಪಡೆದಿದ್ದಾರೆ.

ಚಿತ್ರ: 7ಎಂ- ಶ್ರೀದೇವಿ