ಸೈದ್ಧಾಂತಿಕವಾಗಿ ಸೋಲಿಸಿ ಎಂಬರ್ಥದಲ್ಲಿಖರ್ಗೆ ಹೇಳಿಕೆ: ಸಚಿವ

Contributed byvenkatesh.narasappa@timesgroup.com|Vijaya Karnataka

ಸಚಿವ ಡಾ.ಶರಣಪ್ರಕಾಶ ಪಾಟೀಲ್‌ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಬಿಜೆಪಿಗರು ಮಾಡುತ್ತಿರುವ ಟೀಕೆಗಳನ್ನು ಖಂಡಿಸಿದ್ದಾರೆ. ಖರ್ಗೆ ಅವರ 'ವಿಷಸರ್ಪ' ಹೇಳಿಕೆಯನ್ನು ಸೈದ್ಧಾಂತಿಕವಾಗಿ ಸೋಲಿಸಿ ಎಂಬರ್ಥದಲ್ಲಿ ನೀಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಬಾಗಲಕೋಟೆ, ರಾಮನಗರದಲ್ಲಿ ಹೊಸ ವೈದ್ಯಕೀಯ ಕಾಲೇಜುಗಳು ಆರಂಭವಾಗಲಿವೆ. 450 ಯುಜಿ ಸೀಟು ಹೆಚ್ಚಳಕ್ಕೆ ಮನವಿ ಮಾಡಲಾಗಿದೆ. ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ವಿಂಗಡಣೆಯಲ್ಲಿ ಕೇಂದ್ರದ ರಾಜಕೀಯ ಹಿತಾಸಕ್ತಿ ಅಡಗಿದೆ ಎಂದು ಆರೋಪಿಸಿದ್ದಾರೆ.

minister sharanprakash patil condemns bjps criticism of kharge

ಚಿತ್ರ: ಡಾ.ಶರಣಪ್ರಕಾಶ ಪಾಟೀಲ್ ಚಿತ್ರ ಬಳಸಿ

**

ಖರ್ಗೆ ವಿರುದ್ಧ ಬಿಜೆಪಿಗರ ಟೀಕೆಗೆ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಖಂಡನೆ

ಸೈದ್ಧಾಂತಿಕವಾಗಿ ಸೋಲಿಸಿ ಎಂಬರ್ಥದಲ್ಲಿಖರ್ಗೆ ಹೇಳಿಕೆ

ವಿಕ ಸುದ್ದಿಲೋಕ ಕಲಬುರಗಿ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿಗರು ಹಗುರವಾಗಿ ಹೇಳಿಕೆ ನೀಡುತ್ತಿರುವುದು ಸರಿಯಲ್ಲ, ಅವರು ಎಂದಿಗೂ ವೈಯಕ್ತಿಕ ಟೀಕೆ ಮಾಡಲ್ಲ, ವಿಷಸರ್ಪ ಹೊಡಿಯಿರಿ ಎಂದು ಹೇಳಿರುವುದು ಒಂದು ಸಂಘಟನೆಯ ಸೈದ್ಧಾಂತಿಕವಾಗಿ ಸೋಲಿಸಿ ಎಂಬುದಾಗಿದೆ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.

ನಗರದಲ್ಲಿತಮ್ಮ ಸ್ವ ಗೃಹದಲ್ಲಿಗುರುವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದರು. ಮಲ್ಲಿಕಾರ್ಜುನ ಖರ್ಗೆ ಅವರನ್ನು ಹತ್ತಿರದಲ್ಲಿನೋಡಿದ್ದೇವೆ. ಅವರು ರಾಜಕೀಯ ಜೀವನದಲ್ಲಿತಮ್ಮದೇ ಘನತೆ, ಗೌರವವಿದೆ. ಅವರು ಎಂದಿಗೂ ಸಾರ್ವಜನಿಕ ಹಿತಾಸಕ್ತಿ ಪರ, ಅಭಿವೃದ್ಧಿ ಪರವಾಗಿಯೇ ಕಾರ್ಯನಿರ್ವಹಿಸುತ್ತಾರೆ. ಖರ್ಗೆ ಅಸ್ಸಾಂನಲ್ಲಿನೀಡಿದ ವಿಷ ಸರ್ಪ ಹೇಳಿಕೆಯನ್ನು ದೊಡ್ಡದಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ನರೇಂದ್ರ ಮೋದಿ ಈ ಹಿಂದೆ ಕಾಂಗ್ರೆಸ್ಸಿಗರನ್ನು ಅರ್ಬನ್ ನಕ್ಸಲ್ಸ್ , ದೇಶದ್ರೋಹಿಗಳು, ದೇಶವನ್ನು ಲೂಟಿ ಮಾಡಿದವರು ಎಂದು ಹೇಳಿದರು. ಜತೆಗೆ ನೆಹರೂ, ಇಂದಿರಾಗಾಂಧಿ ವಿರುದ್ಧವೂ ಟೀಕಿಸಿದ್ದಾರೆ. ಅವರು ಟೀಕೆ ಮಾಡಿರುವುದು ಸರಿ, ನಾವು ಟೀಕಿಸಿದರೆ ದೊಡ್ಡದು ಮಾಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಲ್ಲಿಕಾರ್ಜುನ ಖರ್ಗೆ ಎಂದಿಗೂ ಕಾಂಗ್ರೆಸ್ ಸಿದ್ಧಾಂತದ ಮೇಲೆ ರಾಜಕೀಯ ಮಾಡಿದ್ದಾರೆ. ಸಮಾಜದಲ್ಲಿಬೆಂಕಿ ಹಚ್ಚುವ ಕೆಲಸ ಮತ್ತು ದಂಗೆ ಏಳುವಂತಹ ಕೆಲಸಗಳನ್ನು ಮಾಡಿಲ್ಲ. ಇವುಗಳನ್ನು ಬಿಜೆಪಿಯವರೇ ಮಾಡುತ್ತಾರೆ ಎಂದು ಆರೋಪಿಸಿದರು.

‘ತಂದೆ-ಮಗನಿಗೆ ಜೈಲಿಗೆ ಹಾಕಬೇಕು’ ಎಂಬ ಬಿಜೆಪಿಗರ ಹೇಳಿಕೆಗೆ ತೀಕ್ಷ$್ಣವಾಗಿ ಪ್ರತಿಕ್ರಿಯಿಸಿದ ಸಚಿವರು, ಖರ್ಗೆ ಸಮಾಜ ಕಟ್ಟುವ ಕೆಲಸವನ್ನು ಮಾಡಿದ್ದಾರೆ. ಅವರು ಎಂದಿಗೂ ವೈಯಕ್ತಿಕ ಟೀಕೆಗಳನ್ನು ಮಾಡಿಲ್ಲ. ಸಮಾಜಕ ಕಟ್ಟುವ ಕೆಲಸ ಮಾಡಿದ್ದಾರೆ. ವಿಷಸರ್ಪ ಹೊಡಿಬೇಕು ಎಂಬುದು ಸೈದ್ಧಾಂತಿಕವಾಗಿ ಹೊಡಿಬೇಕು ಎಂಬರ್ಥದಲ್ಲಿಖರ್ಗೆ ಹೇಳಿದ್ದಾರೆ. ಅರ್ಬನ್ ನಕ್ಸಲ್ಸ್ , ದೇಶದ್ರೋಹಿ, ತುಕಡೆ ತುಕಡೆ ಗ್ಯಾಂಗ್ ಎಂದು ಹೇಳಿಕೆ ನೀಡಿದವರು ಯಾರು? ಎಂದು ಪ್ರಶ್ನಿಸಿದರು.

ಬಾಕ್ಸ್ ...

ಬಾಗಲಕೋಟೆ, ರಾಮನಗರ ಮೆಡಿಕಲ್ ಕಾಲೇಜು

ಈ ಬಾರಿ ಬಾಗಲಕೋಟೆ ಮತ್ತು ರಾಮನಗರದಲ್ಲಿವೈದ್ಯಕೀಯ ಕಾಲೇಜುಗಳು ಆಗಲಿವೆ. ಜತೆಗೆ ಕನಕಪುರವೂ ಆಗಲಿದೆ. ಈ ಹಿಂದೆ ಕಾಂಗ್ರೆಸ್ ಸರಕಾರವಿದ್ದಾಗ ಕನಕಪುರಕ್ಕೆ ವೈದ್ಯಕೀಯ ಕಾಲೇಜು ಘೋಷಣೆ ಮಾಡಿ, ಟೆಂಡರ್ ಸಹ ಆಗಿತ್ತು. ಆದರೆ, ನಂತರ ಬಂದ ಬಿಜೆಪಿ ಸರಕಾರ ಅದನ್ನು ಹಿಂಪಡೆದು ಬೇರೆಡೆ ಮಾಡಿತ್ತು. ಆದ್ದರಿಂದ ಕನಕಪುರ ಸಹ ಆಗಲಿದೆ ಎಂದು ಹೇಳಿದರು.

ಬಾಕ್ಸ್ ...

450 ಯುಜಿ ಸೀಟ್ ಹೆಚ್ಚಳಕ್ಕೆ ಮನವಿ

ವೈದ್ಯಕೀಯ 450 ಸೀಟ್ ಈ ವರ್ಷ ಹೆಚ್ಚಳಕ್ಕೆ ಮನವಿ ಮಾಡಲಾಗಿದೆ. ಕಳೆದ ಬಾರಿ 400 ಸೀಟ್ ಹೆಚ್ಚಿಸಲಾಗಿತ್ತು. 371ಜೆ ಜಾರಿಯಾದ ಹಿನ್ನೆಲೆಯಲ್ಲಿಮೆಡಿಕಲ್ , ಎಂಜಿನಿಯರಿಂಗ್ ಸೀಟ್ ಗಳು ನಮ್ಮ ಭಾಗಕ್ಕೆ ಸಿಗುತ್ತಿವೆ. ಜತೆಗೆ 10 ವರ್ಷದಲ್ಲಿನಮ್ಮ ಭಾಗದ ಯುವಕರು 80 ಸಾವಿರಕ್ಕೂ ಹೆಚ್ಚು ಉದ್ಯೋಗಗಳನ್ನು ಪಡೆದಿದ್ದಾರೆ. ಇದಕ್ಕೆಲ್ಲ371ಜೆ ಕಾರಣ ಎಂದು ಹೇಳಿದರು.

ಬಾಕ್ಸ್ ...

ರಾಜಕೀಯ ಹಿತಾಸಕ್ತಿಗೆ ಮಹಿಳಾ ಮೀಸಲು

ತರಾತುರಿಯಲ್ಲಿಮಹಿಳಾ ಮೀಸಲು ಹಾಗೂ ವಿಧಾನಸಭೆ, ಲೋಕಸಭೆ ಕ್ಷೇತ್ರಗಳ ವಿಂಗಡಣೆಗೆ ಮುಂದಾಗಿರುವುದರಲ್ಲಿಕೇಂದ್ರದ ರಾಜಕೀಯ ಹಿತಾಸಕ್ತಿ ಅಡಗಿದೆ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ್ ಆರೋಪಿಸಿದರು.

ಮಹಿಳಾ ಮೀಸಲಾತಿಗೆ ಕಳೆದ ಹಲವು ವರ್ಷಗಳಿಂದ ಮಾತನಾಡದೆ ಈಗ ಏಕಾಏಕಿ ಮಹಿಲಾ ಮೀಸಲು ತರಲು ಮುಂದಾಗಿದ್ದಾರೆ. ಪ್ರಸ್ತುತ ಹಲವು ರಾಜ್ಯಗಳಲ್ಲಿಚುನಾವಣೆ ನಡೆಯುವ ಸಂದರ್ಭದಲ್ಲಿಸಂಪುಟ ನಿರ್ಧಾರ ಮಾಡಿರುವುದು ರಾಜಕೀಯ ಹಿತಾಸಕ್ತಿ ಅಡಗಿದೆ. ನಾವು ಮಹಿಳಾ ಮೀಸಲನ್ನು ಸ್ವಾಗತಿಸುತ್ತೇವೆ. ಆದರೆ, ಈ ಹಿಂದೆಯೇ ಜಾರಿ ಮಾಡಿದ್ದರೆ ಅನುಕೂಲವಾಗುತಿತ್ತು. ಜತೆಗೆ ಅಧಿವೇಶನ ಸಂದರ್ಭದಲ್ಲಿಈ ವಿಷಯ ಚರ್ಚೆಗೆ ತೆಗೆದುಕೊಳ್ಳಬಹುದಿತ್ತು ಎಂದು ಹೇಳಿದರು. ಅದೇರೀತಿ ವಿಧಾನಸಭೆ, ಲೋಕಸಭೆ ಕ್ಷೇತ್ರಗಳ ವಿಂಗಡಣೆಯಲ್ಲೂರಾಜಕೀಯ ಅಡಗಿದೆ. ಇದನ್ನೂ ಚರ್ಚೆಗೆ ತೆಗೆದುಕೊಳ್ಳದೆ ತರಾತುರಿಯಲ್ಲಿಜಾರಿ ಮಾಡಲಾಗುತ್ತಿದೆ ಎಂದು ಆರೊಪಿಸಿದರು.

*

ಕೋಟ್ ...

ಕೊಲ್ಲಿರಾಷ್ಟ್ರಗಳಲ್ಲಿನ ಯುದ್ಧದ ಪರಿಣಾಮ ವೈದ್ಯಕೀಯ ಕ್ಷೇತ್ರದ ಮೇಲೂ ಬೀರುತ್ತದೆ. ಹೊರದೇಶದಿಂದ ವೈದ್ಯಕೀಯ ಉಪಕರಣಗಳು, ಔಷಧಗಳ ಆಮದಿಗೆ ತೊಂದರೆ ಆಗಲಿದೆ. ಮುಖ್ಯವಾಗಿ ಕ್ಯಾನ್ಸರ್ ಉಪಕರಣ, ಔಷಧ ಸೇರಿ ಇತರೆ ತೊಂದರೆಯಾಗಲಿದೆ.

- ಡಾ.ಶರಣಪ್ರಕಾಶ ಪಾಟೀಲ್ , ಸಚಿವ