ಬೇಸಿಗೆ ಶಿಬಿರ ಉದ್ಘಾಟನೆ
ಕುಂದಾಪುರ : ಇಂದಿನ ಮಕ್ಕಳಿಗೆ ಹಳ್ಳಿ ಜೀವನದ ಪರಿಚಯವಿಲ್ಲ. ಆದರೆ ಈ ರೀತಿಯ ಮಕ್ಕಳ ಶಿಬಿರವನ್ನು ಶಾಲೆಗಳಲ್ಲಿಆಯೋಜಿಸುವುದರಿಂದ ಮಕ್ಕಳಿಗೆ ಹಳ್ಳಿ ಸೊಗಡಿನ ಸಂಪ್ರದಾಯಗಳ ಪರಿಚಯವಾಗಿ ಉತ್ತಮ ನಾಗರಿಕರಾಗುವ ದಾರಿಯಲ್ಲಿಮುನ್ನಡೆಯಲು ಸಹಾಯವಾಗುತ್ತದೆ ಎಂದು ಹುಣ್ಸೆಮಕ್ಕಿಯ ಮಹಿಳಾ ಉದ್ಯಮಿ ವಸಂತಿ ಎಂ. ಶೆಟ್ಟಿ ಹೇಳಿದರು. ಇಲ್ಲಿನ ಎಚ್ ಎಂಎಂ ಮತ್ತು ವಿಕೆಆರ್ ಆಚಾರ್ಯ ಸ್ಮಾರಕ ಆಂಗ್ಲಮಾಧ್ಯಮ ಶಾಲೆಯಲ್ಲಿಆಯೋಜಿಸಲಾಗಿದ್ದ *ಪ್ಯಾಟಿ ಮಕ್ಕಳ್ ಹಳ್ಳಿ ಟೂರ್ ಸೀಸನ್ 4-ಮಕ್ಕಳ ಬೇಸಿಗೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಕುಂದಾಪುರ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಸೀತಾರಾಮ ನಕ್ಕತ್ತಾಯ ಶುಭಹಾರೈಸಿದರು. ಉಪಪ್ರಾಂಶುಪಾಲೆ ಶುಭಾ ಕೆ.ಎನ್ . ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕಿ ರಂಜನಿ ಕಾರ್ಯಕ್ರಮ ನಿರ್ವಹಿಸಿದರು.
ಪೋಟೊ//9ಕೆ-ಎಸ್ ಬಿಆರ್ //. ಮಹಿಳಾ ಉದ್ಯಮಿ ವಸಂತಿ ಎಂ.ಶೆಟ್ಟಿ ಶಿಬಿರ ಉದ್ಘಾಟಿಸಿದರು.
‰‰‰‰‰.

