ಬಳ್ಳಾರಿ (ಗ್ರಾಮೀಣ)- ರೇಣುಕಾ ಯಲ್ಲಮ್ಮದೇವಿ ರಥೋತ್ಸವ

Contributed byajaykappagalmutt@gmail.com|Vijaya Karnataka
bellary renuka yallamma deity devotional chariot festival 2023
ರೇಣುಕಾ ಯಲ್ಲಮ್ಮದೇವಿ ರಥೋತ್ಸವ

ವಿಕ ಸುದ್ದಿಲೋಕ ಬಳ್ಳಾರಿ (ಗ್ರಾಮೀಣ)
ತಾಲೂಕಿನ ಸಂಗನಕಲ್ಲುಬಳಿಯ ಸುಬ್ಬಾರಾವ್ ಕ್ಯಾಂಪಿನ ರೇಣುಕಾ ಯಲಮ್ಮ ದೇವಿಯ ರಥೋತ್ಸವ ಮಂಗಳವಾರ ಜರುಗಿತು.

ಬೆಳಗ್ಗೆ ಮಂಗಳವಾದ್ಯಗಳೊಂದಿಗೆ ಗಂಗಾ ಜಲ ತಂದು ದೇವರ ಮೂರ್ತಿಗೆ ಅಭಿಷೇಕ ಮಾಡಲಾಯಿತು. ಕ್ಷೀರಾಭಿಷೇಕ, ರುದ್ರಾಭಿಷೇಕ ಸೇರಿ ನಾನಾ ಧಾರ್ಮಿಕ ಕಾರ್ಯಕ್ರಮ ನೆರವೇರಿಸಲಾಯಿತು. ರಥವನ್ನು ನಾನಾ ಬಣ್ಣದ ವಸ್ತ್ರ ಹಾಗೂ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಭಕ್ತರು ಹೂ, ಹಣ್ಣು, ಕಾಯಿ ಸಮರ್ಪಿಸಿ ಭಕ್ತಿ ಮೆರೆದರು. ದೇವಾಲಯದ ಆವರಣದಲ್ಲಿದೇವರ ನಾಮ ಜಪ, ಭಕ್ತಿ ಗೀತೆಗಳು ಮೊಳಗಿದವು. ಭಕ್ತರಿಗೆ ಅನ್ನ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.

* 12 ಬಿಎಲ್ ವೈ ಅಜಯ್ 01

ಬಳ್ಳಾರಿ ತಾಲೂಕಿನ ಸಂಗನಕಲ್ಲುಬಳಿಯ ಸುಬ್ಬಾರಾವ್ ಕ್ಯಾಂಪಿನಲ್ಲಿರೇಣುಕಾ ಯಲಮ್ಮ ದೇವಿಯ ರಥೋತ್ಸವ ಜರುಗಿತು.