ಯೋಜನೆಯ ಸದುಪಯೋಗ ಪಡೆದುಕೊಳ್ಳಿ ವಿಕ ಸುದ್ದಿಲೋಕ

Contributed byvkkrpanchal@gmail.com|Vijaya Karnataka
job card fair successfully benefits local workers through government schemes
ಚಿತ್ರ22ಎಂಎನಕೆ2

ಚಿಟಗುಪ್ಪ ತಾಲೂಕಿನ ತಾಳಮಡಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಬರುವ ವಡ್ಡನಕೇರಾ ಗ್ರಾಮದ ಹೊರವಲಯದಲ್ಲಿಕೈಗೊಳ್ಳುತ್ತಿರುವ ಕೆರೆ ಹೂಳೆತ್ತುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಬಳಿಕ ವಿಬಿಜಿ ರಾಮಜಿ ಯೋಜನೆ ಗ್ಯಾರಂಟಿ ಕಾರ್ಡಗಳನ್ನು ತಾಪಂ ಇಒ ಲಿಂಗರಾಜ ಪಾಟೀಲ್ ವಿತರಿಸಿದರು.
ಯೋಜನೆಯ ಸದುಪಯೋಗ ಪಡೆದುಕೊಳ್ಳಿ

ವಿಕ ಸುದ್ದಿಲೋಕ ಚಿಟಗುಪ್ಪ

ವಿಬಿಜಿ ರಾಮ್ ಜೀ ಯೋಜನೆಯಡಿ ಎಲ್ಲಕಾರ್ಮಿಕರು ನಿರಂತರವಾಗಿ ಕೂಲಿ ಕೆಲಸ ಪಡೆದು ಜೀವನ ಸಾಗಿಸಬೇಕು. ಕೂಲಿ ಕೆಲಸ ಮಾಡುವ ಎಲ್ಲಕಾರ್ಮಿಕರು ಆಯುಷ್ಮಾನ್ ಭಾರತ ಬೀಮಾ ಜೀವನ ಜ್ಯೋತಿ ಹಾಗೂ ಆಯುಷ್ಮಾನ ಭಾರತ ಬೀಮಾ ಸುರಕ್ಷಾ ಯೋಜನೆಯಡಿ ಜೀವ ವಿಮೆ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ತಾಪಂ ಇಒ ಲಿಂಗರಾಜ ಪಾಟೀಲ್ ಹೇಳಿದರು.

ತಾಲೂಕಿನ ತಾಳಮಡಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಬರುವ ವಡ್ಡನಕೇರಾ ಗ್ರಾಮದ ಹೊರವಲಯದಲ್ಲಿಕೈಗೊಳ್ಳುತ್ತಿರುವ ಕೆರೆ ಹೂಳೆತ್ತುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು. ಗ್ರಾಮೀಣ ಭಾಗದ ಕಾರ್ಮಿಕರು ಕೆಲಸಕ್ಕಾಗಿ ಬೇರೆ ಕಡೆ ಹೊಗುವ ಅವಶ್ಯಕತೆಯಿಲ್ಲ. ನಿಮ್ಮ ಊರಿನಲ್ಲಿನಿಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಕೆಲಸವಿದ್ದು, ಸರಕಾರದ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ನಂತರ ವಡ್ಡನಕೇರಾ ಗ್ರಾಮದಲ್ಲಿಜಾಬ್ ಕಾರ್ಡ ಮೇಳ ಹಮ್ಮಿಕೊಳ್ಳಲಾಯಿತು. ವಿವಿಧ ಬಡಾವಣೆಗಳಲ್ಲಿಸಂಚರಿಸಿ ಮನೆ ಮನೆ ಭೇಟಿ ನೀಡಿ ವೈಯಕ್ತಿಕ ಕಾಮಗಾರಿಗಳ ಕುರಿತು ಜಾಗೃತಿ ಮೂಡಿಸಿ ದನದ ಕೊಟ್ಟಿಗೆ ಕುರಿ ದೊಡ್ಡಿ ಸೇರಿದಂತೆ ಇತರೆ ಕಾಮಗಾರಿಗಳನ್ನು ಯೋಜನೆಯಡಿ ಕೈಗೊಳ್ಳಬೇಕು ಎಂದು ಜಾಗೃತಿ ಮೂಡಿಸಲಾಯಿತು.

ಜಾಬ್ ಕಾರ್ಡ ಮೇಳ ಅಭಿಯಾನದಡಿ ಸುಮಾರು 25 ಜನರಿಗೆ ವಿಬಿಜಿ ರಾಮಜಿ ಯೋಜನೆ ಗ್ಯಾರಂಟಿ ಕಾರ್ಡ್ ವಿತರಿಸಲಾಯಿತು. ಈ ಸಂದರ್ಭದಲ್ಲಿಅಭಿವೃದ್ಧಿ ಅಧಿಕಾರಿ ಜನಾರ್ಧನ ರಡ್ಡಿ, ತಾಂತ್ರಿಕ ಸಂಯೋಜಕ ಸುಧಾಕಾರ ಪಾಟೀಲ್ , ಐಇಸಿ ಸಂಯೋಜಕ ವಿಶ್ವನಾಥ, ತಾಂತ್ರಿಕ ಸಹಾಯಕ ಆದರ್ಶ ಪಾಟೀಲ್ , ಬಿಎಫ್ ಟಿ ರಜನಿಕಾಂತ ಸೇರಿ ಪಂಚಾಯಿತಿ ಸಿಬ್ಬಂದಿ ಇದ್ದರು.