ಮೈಸೂರು: ಪ್ರಯೋಗ ಮೈಸೂರು ತಂಡವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಕುವೆಂಪುನಗರದ ಬಿಜಿಎಸ್ ಬಿ.ಇಡಿ ಕಾಲೇಜಿನಲ್ಲಿಪ್ರದರ್ಶಿಸಿದ ‘ಡೋರ್ ನಂಬರ್ 8’ ನಾಟಕಕ್ಕೆ ರಂಗಾಸಕ್ತರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಂಗಭೂಮಿ ಕಲಾವಿದ ಮತ್ತು ಕಿರುತರೆ ನಟ ಬರ್ಟಿ ಒಲಿವೆರಾ, ‘‘ನಾಟಕಗಳು ಇಂತಹ ಬಿ.ಇಡಿ ಕಾಲೇಜುಗಳಲ್ಲಿಹೆಚ್ಚು ಪ್ರದರ್ಶನಗೊಳ್ಳುವುದು ಅತ್ಯಂತ ಉಪಯುಕ್ತವಾಗಿರುತ್ತದೆ. ಶಿಕ್ಷಕರಾಗಬಯಸುವವರು ವಿದ್ಯಾರ್ಥಿಗಳೊಂದಿಗೆ ಸಂಭಾಷಿಸುವಾಗ ಮತ್ತು ಬೋಧನೆಯ ಸಂದರ್ಭದಲ್ಲಿಹೆಚ್ಚು ಪರಿಣಾಮಕಾರಿಯಾಗಿ ಮಾತನಾಡಲು, ಸಂವಹನ ಕೌಶಲ ಬೆಳೆಸಿಕೊಳ್ಳಲು ನಾಟಕವು ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾದ ಒಂದು ಮಾಧ್ಯಮವಾಗಿದೆ,’’ ಎಂದು ಹೇಳಿದರು.ಬಿಜಿಎಸ್ ವಿದ್ಯಾಪೀಠದ ಆಡಳಿತ ಅಧಿಕಾರಿ ಎಚ್ .ಯಶೋಧ, ಕಾಲೇಜಿನ ಪ್ರಾಂಶುಪಾಲ ಡಾ.ನಾಗರಾಜ್ , ಪ್ರಯೋಗ ಮೈಸೂರು ತಂಡದ ಕಾರ್ಯದರ್ಶಿ ಪ್ರವೀಣ್ ಬೆಳ್ಳಿ ಹಾಜರಿದ್ದರು.