ಬಳ್ಳಾರಿ (ಗ್ರಾಮೀಣ)- ನಾಗರ ಅಮಾವಾಸ್ಯೆ ಪೂಜೆ

Contributed byajaykappagalmutt@gmail.com|Vijaya Karnataka
nagar amavasya puja in ballari rural special celebration
ಕಟ್ಟೆ ಬಸವೇಶ್ವರಗೆ ವಿಶೇಷ ಪೂಜೆ

ವಿಕ ಸುದ್ದಿಲೋಕ ಬಳ್ಳಾರಿ (ಗ್ರಾಮೀಣ)
ತಾಲೂಕಿನ ಎತ್ತಿನಬೂದಿಹಾಳ್ ಗ್ರಾಮದಲ್ಲಿನಾಗರ ಅಮಾವಾಸ್ಯೆ ನಿಮಿತ್ತ ಕಟ್ಟೆ ಬಸವೇಶ್ವರ ದೇವರಿಗೆ ಬುಧವಾರ ವಿಶೇಷ ಪೂಜೆ ನೆರವೇರಿಸಲಾಯಿತು. ಬೆಳಗಿನ ಜಾವ ಗಂಗಾ ಜಲ ತಂದು ದೇವರಿಗೆ ಅಭಿಷೇಕ, ಕ್ಷೀರಾಭಿಷೇಕ, ರುದ್ರಾಭಿಷೇಕ ಸೇರಿ ನಾನಾ ರೀತಿಯ ಪೂಜೆ, ಮಹಾ ಮಂಗಳಾರತಿ ಮಾಡಲಾಯಿತು. ಹೂವು, ಎಲೆಗಳಿಂದ ದೇವರನ್ನು ಅಲಂಕರಿಸಲಾಗಿತ್ತು. ಹಣ್ಣು, ಕಾಯಿ, ಖಾದ್ಯಗಳನ್ನು ದೇವಿಗೆ ಸಮರ್ಪಣೆ ಮಾಡಲಾಯಿತು. ಭಕ್ತರು ಸರದಿ ಸಾಲಿನಲ್ಲಿನಿಂತು ದೇವರ ದರ್ಶನ ಪಡೆದರು. ದೇಗುಲದ ಆವರಣದಲ್ಲಿದೇವರ ನಾಮ ಜಪದೊಂದಿಗೆ ಮಳೆ, ಬೆಳೆ, ಸುಖ, ಶಾಂತಿ ಹಾಗೂ ಸಮೃದ್ಧಿಗೆ ಪ್ರಾರ್ಥಿಸಲಾಯಿತು.

* 12 ಬಿಎಲ್ ವೈ ಅಜಯ್ 0

ಬಳ್ಳಾರಿ ತಾಲೂಕಿನ ಎತ್ತಿನಬೂದಿಹಾಳ್ ಗ್ರಾಮದಲ್ಲಿನಾಗರ ಅಮಾವಾಸ್ಯೆ ನಿಮಿತ್ತ ಕಟ್ಟೆ ಬಸವೇಶ್ವರ ಸ್ವಾಮಿಗೆ ವಿಶೇಷ ಪೂಜಾಲಂಕಾರ ಮಾಡಲಾಗಿತ್ತು.