ವಿಕ ಸುದ್ದಿಲೋಕ ಚಿತ್ರದುರ್ಗಬಸವಕೇಂದ್ರ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್ ಜೆಎಂ ವಿಶ್ವವಿದ್ಯಾಲಯದಿಂದ ಸರ್ವ ಸಮಾಜ ಹಾಗೂ ನಾನಾ ಸಂಘ-ಸಂಸ್ಥೆಗಳ ಸಹಯೋಗದಲ್ಲಿಆ.13ರಿಂದ ಅನುಭಾವ ಶ್ರಾವಣ, ಶರಣಚಿಂತನ ಮಾಲಿಕೆ ಆರಂಭವಾಗಲಿದೆ.
ನಗರದ ಬಿ.ಡಿ. ರಸ್ತೆಯ ಇಂಡಸ್ಟ್ರೀಯಲ್ ಎಸ್ಟೇಟ್ ನಲ್ಲಿರುವ ಎಂ.ಎಂ. ಇಂಡಸ್ಟ್ರೀಸ್ ನಲ್ಲಿಆ.13ರ ಸಂಜೆ 6.30ಕ್ಕೆ ಚಾಲನೆ ದೊರೆಯಲಿದ್ದು, ಶ್ರೀಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಂ.ಕೆ.ತಾಜ್ ಪೀರ್ , ಜಿಲ್ಲಾಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಪುಷ್ಪಲತಾ ಹಾಲಬಾವಿಮಠ, ಎಸ್ ಆರ್ ಎಸ್ ವಿದ್ಯಾಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಸ್ .ಆರ್ .ಲಿಂಗಾರೆಡ್ಡಿ, ಜಿಲ್ಲಾವಕೀಲರ ಸಂಘದ ಮಾಜಿ ಅಧ್ಯಕ್ಷ ಪಾತ್ಯರಾಜನ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ರಾಣೇಬೆನ್ನೂರು ಎಸ್ ಜೆಎಂವಿಬಿಎಜೆಎಸ್ ಎಸ್ ಮಹಿಳಾ ಮಹಾವಿದ್ಯಾಲಯ ಪ್ರಾಚಾರ್ಯ ಡಾ.ರೇವಣಸಿದ್ದಪ್ಪ ಹೆಗಡಾಳ್ ಅವರು, ಧಾರವಾಡ ಮೃತ್ಯುಂಜಯಪ್ಪಗಳು ಹಾಗೂ ಶ್ರೀಮಹಾಂತಪ್ಪಗಳ ಕುರಿತು ವಿಷಯಾವಲೋಕನ ಮಾಡಲಿದ್ದಾರೆ. ಕಾರ್ಯಕ್ರಮ ಆಯೋಜಕರಾದ ಎ.ಎಸ್ .ಸುಜಾತ-ವೈ.ಬಿ. ಮಹೇಂದ್ರನಾಥ್ , ನಾನಾ ಸಮಾಜಗಳ, ಸಂಘ-ಸಂಸ್ಥೆಗಳ ಮುಖಂಡರು ಉಪಸ್ಥಿತರಿರುವರು.
ಶ್ರೀಮಠದಿಂದ ಆರಂಭವಾಗಿರುವ ಅನುಭಾವ ಶ್ರಾವಣ ಚಿಂತನ ಮಾಲಿಕೆಯು ಈ ಮೊದಲು ಶ್ರೀಮಠದಲ್ಲಿನಡೆಸಲಾಗುತ್ತಿತ್ತು. ಕೆಲ ಅಭಿಮಾನಿ ಭಕ್ತರು ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ನಗರದ ಆಸಕ್ತ ಕೆಲ ಬಡಾವಣೆಗಳಲ್ಲಿಆಯೋಜಿಸುವಂತೆ ಸಲಹೆ ನೀಡಿದ ಕಾರಣ ಕೆಲವೊಂದು ದಿನದ ಕಾರ್ಯಕ್ರಮಗಳು ನಗರದ ನಾನಾ ಬಡಾವಣೆಗಳಲ್ಲಿಸಂಜೆ ಶರಣ ಚಿಂತನ ಮಾಲಿಕೆ ನಡೆಯಲಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.