ಹಿಂದೂ ಸಾರ್ವಜನಿಕ ಸ್ಮಶಾನಗಳ ಸಂರಕ್ಷಣೆ ಖಾತರಿಪಡಿಸಲಿ: ರವೀಶತಂತ್ರಿ ಕುಂಟಾರು

Contributed bycrastalp19@gmail.com|Vijaya Karnataka
urgent measures needed for the protection of hindu public crematoriums raveesh tantri kuntaru
ಕಾಸರಗೋಡು: ಹಿಂದೂ ಸಾರ್ವಜನಿಕ ಸ್ಮಶಾನಗಳ ಸಂರಕ್ಷನೆ, ಮೂಲ ಸೌಕರ್ಯಗಳನ್ನು ವ್ಯವಸ್ಥೆಗೊಳಿಸಲು ಸಂಬಂಧಪಟ್ಟ ಸ್ಥಳೀಯಾಡಳಿತ ಸಂಸ್ಥೆಗಳು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ರಾಜ್ಯ ಸಮಿತಿ ಸದಸ್ಯ ರವೀಶ ತಂತ್ರಿ ಕುಂಟಾರು ಆಗ್ರಹಿಸಿದ್ದಾರೆ.

ಬಿಜೆಪಿ ವರ್ಕಾಡಿ ಪಂಚಾಯಿತಿ ಸಮಿತಿಯ ಆಶ್ರಯದಲ್ಲಿವರ್ಕಾಡಿ ಪಂಚಾಯಿತಿ ಕಚೇರಿಗೆ ನಡೆದ ಜಾಥಾವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದೂ ರುಧ್ರಭೂಮಿಯ ಸಂರಕ್ಷಣೆಗೆ ಹಾಗೂ ಪರಿಪಾಲನೆಗೆ ನಾನಾ ಪಂಚಾಯಿತಿ ಆಡಳಿತ ಸಮಿತಿಗಳು ತೀವ್ರವಾದ ನಿರ್ಲಕ್ಷೆತ್ರ್ಯಯನ್ನು ತೋರಿಸುತ್ತಿರುವುದಾಗಿ ಅವರು ಹೇಳಿದರು.

ಪಂಚಾಯಿತಿ ಸಮಿತಿ ಅಧ್ಯಕ್ಷ ಭಾಸ್ಕರ ಪೊಯ್ಯ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾಅಧ್ಯಕ್ಷೆ ಎಂ. ಎಲ್ . ಅರ್ಶವಿನಿ, ಜಿಲ್ಲಾಉಪಾಧ್ಯಕ್ಷ ಮಣಿಕಂಠ ರೈ, ರಾಜ್ಯ ಸಮಿತಿ ಸದಸ್ಯ ಹರೀಶ್ ಚಂದ್ರ ಮಂಜೇಶ್ವರ, ಬಿ. ಎಂ. ಆದಶ್ ರ್ , ಯತಿರಾಜ್ ಶೆಟ್ಟಿ, ನಾಗೇಶ್ ಬಳ್ಳೂರು, ಧೂಮಪ್ಪ ಶೆಟ್ಟಿ, ವಿವೇಕಾನಂದ ಶೆಟ್ಟಿ ಮತ್ತಿತರರು ಮಾತನಾಡಿದರು.

ಚಿತ್ರ: 6ಕೆಎಸ್ ಎಲ್ ವರ್ಕಾಡಿ-