ವಿಕ ಸುದ್ದಿಲೋಕ ದೊಡ್ಡಬಳ್ಳಾಪುರರಾಜ್ಯದಲ್ಲಿಸಾಕಷ್ಟು ರೀತಿಯ ಜ್ವಲಂತ ಸಮಸ್ಯೆಗಳಿದ್ದು, ಅದನ್ನು ಬಗೆಹರಿಸಲು ಸರಕಾರಗಳು ಆಸಕ್ತಿ ತೋರಬೇಕು ಎಂದು ಕರ್ನಾಟಕ ಜಾಗೃತಿ ವೇದಿಕೆಯ ರಾಜ್ಯ ಸಂಘಟನಾ ಕಾರ ್ಯದರ್ಶಿ ಅಗ್ನಿ ವೆಂಕಟೇಶ್ ತಿಳಿಸಿದರು.
ಕರ್ನಾಟಕ ಜಾಗೃತಿ ವೇದಿಕೆಯಿಂದ ಕರ್ನಾಟಕ ಬಂದ್ ಭಾಗವಾಗಿ ನಗರದ ತಾಲೂಕು ಕಚೇರಿ ಮುಂಭಾಗದಲ್ಲಿಹಮ್ಮಿಕೊಂಡಿದ್ದ ಸಾಂಕೇತಿಕ ಪ್ರತಿಭಟನೆಯಲ್ಲಿಮಾತನಾಡಿದ ಅವರು, ರಾಜ್ಯದ ಜನತೆಗೆ ಕುಡಿಯವ ನೀರಿನ ಅಗತ್ಯತೆ ಇದೆ. ಹಾಗಿದ್ದರೂ ಸರಕಾರಗಳು ಹೊಂದಾಣಿಕೆ ಮುಖಾಂತರ ಹೆಚ್ಚುವರಿ ನೀರನ್ನು ತಮಿಳುನಾಡಿಗೆ ಹರಿಸಿದ ನಡೆ ಖಂಡಿಸಿದರು.
ಸುಮಾರು 40000ಕ್ಕೂ ಹೆಚ್ಚು ಕನ್ನಡ ಶಾಲೆಗಳನ್ನು ಮುಚ್ಚಿದ್ದು, ಅವುಗಳನ್ನು ಮತ್ತೆ ತೆರೆಯಲು ಪ್ರಯತ್ನಿಸಬೇಕು, ಹೊರರಾಜ್ಯಗಳಿಂದ ಬಂದಿರುವ ಕಾರ್ಮಿಕರು ಹಾಗೂ ಹೊರದೇಶಗಳಿಂದ ಬಂದಿರುವ ವಲಸಿಗರ ನಿಯಂತ್ರಣಕ್ಕೆ ಕಾನೂನು ಕ್ರಮವನ್ನು ಕೂಡಲೇ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕನ್ನಡ ಜಾಗೃತಿ ವೇದಿಕೆ ತಾಲೂಕು ಅಧ್ಯಕ್ಷ ಶಶಿಧರ್ ಮಾತನಾಡಿ, ರಾಜ್ಯದಲ್ಲಿಮೇಕೆದಾಟ ಯೋಜನೆ ಕೂಡಲೇ ಜಾರಿಯಾಗಬೇಕು. ಸಿಎಂ ಡಿ.ಕೆ.ಶಿವಕುಮಾರ್ , ಕೆಪಿಸಿಸಿ ಅಧ್ಯಕ್ಷರಾಗಿದ್ದ ವೇಳೆ ಮೇಕೆದಾಟಿನಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಿ, ‘ನಮ್ಮ ನೀರು ನಮ್ಮ ಹಕ್ಕು’ ಎಂಬ ಹೋರಾಟದ ಮೂಲಕ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಅಧಿಕಾರಕ್ಕೆ ಏರಿದರು. ಈಗ ಅವರೇ ಸಿಎಂ ಆಗಿದ್ದು, ಮೇಕೆದಾಟು ಯೋಜನೆಯನ್ನು ತ್ವರಿತಗತಿಯಲ್ಲಿಪ್ರಾರಂಭಿಸಬೇಕು ಹಾಗೂ ಕಾವೇರಿ ವಿಷಯದಲ್ಲಿಪದೇಪದೆ ಕ್ಯಾತೆ ತೆಗೆಯುತ್ತಿರುವ ತಮಿಳುನಾಡು ಸರಕಾರದ ವಿರುದ್ಧ ಅತ್ಯಂತ ಕಠಿಣ ನಿರ್ಧಾರ ಕೈಗೊಳ್ಳಬೇಕು ಎಂದರು.
ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಮುನಿರತ್ನಮ್ಮ ಮಾತನಾಡಿ, ನಾಡಿನ ನೆಲ, ಭಾಷೆ, ಜಲ ವಿಷಯದಲ್ಲಿಎಲ್ಲಾರಾಜಕೀಯ ಪಕ್ಷಗಳು ಸಂಘಟನೆಗಳು ಒಗ್ಗೂಡಿ, ಒಕ್ಕೂಟದಿಂದ ರಾಜ್ಯದ ಹಿತ ಕಾಪಾಡಬೇಕೆಂದು ಹೇಳಿದರು.
ತಾಲೂಕಿನ ಕಾರ್ಮಿಕ ಘಟಕದ ಅಧ್ಯಕ್ಷ ಗುರುಪ್ರಸಾದ್ ಮಾತನಾಡಿದರು. ಈ ವೇಳೆ ತಾಲೂಕು ಪ್ರಧಾನ ಕಾರ್ಯದರ್ಶಿ ಆರ್ .ಮಹದೇವ್ , ತಾಲೂಕು ಸಂಘಟನಾ ಕಾರ್ಯದರ್ಶಿ ಓಂ ಶಿವು, ಕಾರ ್ಯದರ್ಶಿ ವಿಶ್ವನಾಥ್ , ಕಾರ್ಯದರ್ಶಿ ಲೋಕೇಶ್ , ಗುರುಕಿರಣ್ , ಕೆ ವಿಶ್ವನಾಥ್ , ಪುಟ್ಟಗೌರಮ್ಮ, ಚೆನ್ನ ಗಂಗಮ್ಮ, ಉಮಾದೇವಿ, ಗೀತಾ, ಗೌರಮ್ಮ, ಭುವನೇಶ್ವರಿ, ಕನ್ನಡ ಜಾಗೃತಿ ವೇದಿಕೆಯ ಸದಸ್ಯರು ಭಾಗವಹಿಸಿದ್ದರು.
1308ವಿಕೆ4: ದೊಡ್ಡಬಳ್ಳಾಪುರ ತಾಲೂಕು ಕಚೇರಿ ಬಳಿ ಕನ್ನಡ ಜಾಗೃತಿ ವೇದಿಕೆಯಿಂದ ಪ್ರತಿಭಟಿಸಿ, ಮನವಿ ಸಲ್ಲಿಸದಿರು.